ಕುಮಟಾ :ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ .ಚುನಾವಣೆಗಾಗಿ ಕಾರ್ಯಕರ್ತರನ್ನು ಅಣಿಗೊಳಿಸುವ ಸಲುವಾಗಿ ಬಿಜೆಪಿ ಚಾಣಾಕ್ಷ ಅಮಿತ್ ಶಾ ಕುಮಟಾಕ್ಕೆ ಬರುತ್ತಿರುವುದು ಕಾರ್ಯಕರ್ತರಲ್ಲಿ ಒಂದೆಡೆ ಹರ್ಷ ತಂದರೆ, ಇನ್ನೊಂದೆಡೆ ಕಾರ್ಯಕರ್ತರ ಸೇರ್ಪಡೆ ಕಾರ್ಯ ಚುರುಕಿನಿಂದ ಸಾಗಿದೆ .

ಕೇಂದ್ರದ ಆಡಳಿತದ ರೀತಿಯಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಬಿಜೆಪಿ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ .

ವಿವಿಧ ಶಕ್ತಿ ಕೇಂದ್ರಗಳಲ್ಲಿ ಬಿಜೇಪಿಗರು ಸಭೆ ನಡೆಸಿ ಅಮಿತ್ ಶಾ ಅವರ ಬರುವಿಕೆಯ ಕಾರ್ಯಕರ್ತರ ಸಭೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ನಾಳೆಯೂ ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಣೆ.

ನಿನ್ನೆ ಮಿರ್ಜಾನ್ ಶಕ್ತಿಕೇಂದ್ರದಲ್ಲಿ ಕಾಣಿಸಿಕೊಂಡಿದ್ದ ನಾಯಕರು ಇಂದು ಕೂಡಾ ಕ್ಷೇತ್ರದ ವಿವಿದೆಡೆ ತಮ್ಮ ಸಂಘಟನಾ ಕಾರ್ಯ ಮುಂದುವರಿಸಿದ್ದು ಸಭೆಗಳಲ್ಲಿ ಎಲ್ಲರೂ ಒಕ್ಕಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದು ಮಹಾಶಕ್ತಿ ಕೇಂದ್ರ ಮಿರ್ಜಾನ್ ವಲಯದ ಬರ್ಗಿಯಲ್ಲಿ, ಚಾಣಾಕ್ಯ ಶ್ರೀ ಅಮಿತ್ ಷಾ ಅವರು ದಿನಾಂಕ ೨೧ ರಂದು ಕುಮಟಾ,ಹೊನ್ನಾವರಕ್ಕೆ ಭೇಟಿ ನೀಡಲಿರುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಪಡೆಯೊಂದಿಗೆ ಶ್ರೀ ನಾಗರಾಜ ನಾಯಕ ತೊರ್ಕೆ,ಶ್ರೀ ದಿನಕರ ಶೆಟ್ಟಿ, ಶ್ರೀ ಸೂರಜ್ ನಾಯ್ಕ ಸೋನಿ, ಡಾ: ಶ್ರೀ ಜಿ.ಜಿ.ಹೆಗಡೆ, ಶ್ರೀ ಸಂತೋಷ ಹರಿಕಾಂತ, ಶ್ರೀ ಆನಂದು ನಾಯಕ, ಶ್ರೀ ವೆಂಕಟರಮಣ ಕೌರಿ, ಶ್ರಿಮತಿ ಗಾಯತ್ರಿ ಗೌಡಾ, ಶ್ರೀ ಪಾಂಡು ಪಟಗಾರ, ಶ್ರೀ ರಮೇಶ್ ಶೆಟ್ಟಿ,ಹೇಮಂತ ಗಾಂವ್ಕರ ಹಾಗೂ ಮುಂತಾದವರು ಕಾಣಿಸಿಕೊಂಡು ಸಂಘಟನೆಯ ಹೊಸ ಅಲೆ ಎಬ್ಬಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಗೋಕರ್ಣದಲ್ಲಿ ಸಂಪನ್ನವಾದ 'ದಧಿ ಶಿಕ್ಯೋತ್ಸವ'