ಕುಮಟಾ: ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶತಮಾನೋತ್ಸವದ 4 ನೇ ಅಂತಿಮ ದಿನದ ಸಮಾರೋಪ ಸಮಾರಂಭ ಸಂಪನ್ನವಾಯಿತು.

ಕಾರ್ಯಕ್ರಮವನ್ನು ಶಾಸಕಿ ಶಾರದಾ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಶಿಕ್ಷಣಕ್ಕೆ ಮಹತ್ವ ನೀಡುವ ಉದ್ದೇಶದಿಂದ ಇಂತಹ ಶಾಲೆಗಳು ಯಶಸ್ವಿಯಾಗಿ ಮುನ್ನಡೆಯಬೇಕು, ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಎಲ್ಲರಿಗೂ ಅಭಿನಂದನೆ ಎಂದರು.

ವೇದಿಕೆಯಲ್ಲಿ ಜಗನ್ನಾಥ ನಾಯ್ಕ, ನಾಗರಾಜ್ ನಾಯಕ ತೊರ್ಕೆ, ಸೂರಜ್ ನಾಯ್ಕ ಸೋನಿ, ಎನ್ ವಿ ನಾಯ್ಕ, ತಿಮ್ಮಣ್ಣ ಗೌಡ, ಶಿವರಾಮ ಪಟಗಾರ, ಇತರರು ಉಪಸ್ಥಿತರಿದ್ದರು.

RELATED ARTICLES  ಸಾವಿನಲ್ಲೂ ತಾಯಿ ಮಗನ ಬಾಂಧವ್ಯ..! ತಾಯಿಯ ಚಿತೆಗೆ ಬೆಂಕಿ ಇಡುತ್ತಾ ತಾನೂ ಮರೆಯಾದ ಮಗ!!

ನಂತರ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು ಜೊತೆಗೆ ಶತಮಾನೋತ್ಸವದ ಯಶಸ್ವಿಗೆ ಕಾರಣರಾದ ಸಮೀತಿಯ ಗೌರವಾಧ್ಯಕ್ಷ, ಅಧ್ಯಕ್ಷರನ್ನು, ಎಸ್ ಡಿ ಎಮ್ ಸಿ ಅಧ್ಯಕ್ಷನ್ನು, ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು.

ಅಂತಿಮ ದಿನದಂದು ತಾಲೂಕು ವೈದ್ಯಾಧಿಕಾರಿ ಡಾ ಆಜ್ಞಾ ನಾಯಕ ಹಾಗೂ ದಂತ ವೈದ್ಯ ಡಾ ಸಂಜಯ ರವರ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷ ಧೀರೂ ಶಾನಭಾಗ ಹಾಗೂ ಸಮೀತಿಯವರ ಉಪಸ್ಥಿತಿಯಲ್ಲಿ ವೈದ್ಯಕೀಯ ಶಿಬಿರ ನಡೆಸಲಾಯಿತು.

RELATED ARTICLES  ಗೋಕರ್ಣ ಪೊಲೀಸ್ ಕಾರ್ಯಾಚರಣೆ : 1 ಕೆ.ಜಿ ಗಾಂಜಾ ವಶ : ಆರೋಪಿ ಪೊಲೀಸ್ ಬಲೆಗೆ

ಒಟ್ಟಾರೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಝೇಂಕಾರ್ ಮೆಲೋಡಿಸ್ ರವರ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಪ್ರೆಂಡ್ಸ ಮೆಲೋಡಿಸ್ ರವರ ರಸಮಂಜರಿ ಕಾರ್ಯಕ್ರಮ ಶತಮಾನೋತ್ಸವ ವನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿತು.