ಕುಮಟಾ: ನಾಮಧಾರಿ ಸಮಾಜ ಸಂಘ ಗಂಗಾವಳಿ ಇವರ ವತಿಯಿಂದ ನಾಮಧಾರಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು
7 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಗಾಟಕರಾಗಿ ಆಗಮಿಸಿದಂತಹ ಅರವಿಂದ ಕರ್ಕಿಕೋಡಿರವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ನಾಮದಾರಿ ಸಮಾಜವು ಶಿಕ್ಷಿತರಾಗಿ ಸಂಘಟನೆಗೋಳ್ಳಬೇಕು ಎಂದು ಆಶಿಸಿದರು. ಅದರಲ್ಲು ಗಂಗಾವಳಿಯಂತಹ ಕುಗ್ರಾಮದಲ್ಲಿ ಇಂತಹ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸುತ್ತಿರವುದು ತುಂಬಾ ಶ್ಲಾಗನೀಯವೆಂದು ವ್ಯಕ್ತಪಡಿಸಿದರು

RELATED ARTICLES  ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ರೈತರ ಪ್ರತಿಭಟನೆ.

ಅನಂತರ ಡಾ|| ನಾಗೇಶ್ ನಾಯ್ಕ ಕಾಗಾಲ ಸಮಾಜದ ಹೀತವನ್ನುದ್ದೆಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರಾದಂತಹ ನಾಗಪ್ಪ ಬೀರಪ್ಪ ನಾಯ್ಕ ಹಾಗೂ sslc ಯಲ್ಲಿ 94% ಅಂಕ ಪಡೆದಂತಹ ಧೀರಜ್ ಮಂಜುನಾಥ ನಾಯ್ಕ , 88%ಅಂಕ ಪಡೆದಂತಹ ರಾಘವೇಂದ್ರ ಅರವಿಂದ ನಾಯ್ಕ 83%ಅಂಕ ಪಡೆದಂತಹ ವಿಕಾಸ ಉಮೇಶ್ ನಾಯ್ಕ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು
ಮಂಜುನಾಥ ರಾಮಾ ನಾಯ್ಕ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು

RELATED ARTICLES  ರಾಮನಾಥ ಪ್ರೌಢಶಾಲೆ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಸಾಧನೆ

ವಂದನಾರ್ಪಣೆಯನ್ನು ನಾಗೇಂದ್ರ ನಾಯ್ಕ ರವರು ಮಾಡಿದರು
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ ನಾಯ್ಕ ನಿರ್ವಹಿಸಿದರು.

ಸ್ಥಳಿಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಸ್ವರಾತ್ಮಿಕಾ ಮೇಲೊಡಿಯಸ್ ವಾಯ್ಸ್ ಕುಮಟಾ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.ಊರಿನ ಸಮಸ್ತ ನಾಮಧಾರಿ ಸಮಾಜ ಬಾಂಧವರು ಪಾಲ್ಗೊಂಡು ಚಂದಗಾಣಿಸಿದರು.