ಹೊನ್ನಾವರ: ಅರೇಅಂಗಡಿಯ ಎಸ್.ಕೆ.ಪಿ. ಯುವ ಬಳಗ, ಅರೇಅಂಗಡಿ ಇವರ ವತಿಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ದಿನಾಂಕ ಅರೇಅಂಗಡಿಯ ಎಸ್.ಕೆ.ಪಿ. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎಸ್.ಕೆ.ಪಿ. ಯುವ ಬಳಗದವರು ಅತ್ಯಂತ ಅಚ್ಚುಕಟ್ಟಾಗಿ ಈ ಒಂದು ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಅಗಲಿದ ಅಮಾಯಕ ಯುವಕ ಪರೇಶ ಮೇಸ್ತನನ್ನು ಸ್ಮರಿಸಿ ಆತನಿಗೆ ಈ ಕಾರ್ಯಕ್ರಮದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಈ ಕಾರ್ಯಕ್ರಮವನ್ನು ಅತ್ಯಂತ ಹೃದಯಸ್ಪರ್ಶಿಯಾಗಿಸಿದ್ದಾರೆ ಎಂದು ಸಂಘಟಕರನ್ನು ಅಭಿನಂದಿಸಿದರು. ಪರೇಶ ಮೇಸ್ತನ ಸಾವಿಗೆ ನ್ಯಾಯ ಸಿಗಬೇಕು ಆ ಮೂಲಕ ಆತನ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂದರು. ಪ್ರತಿಯೊಂದು ಭಾಗಗಳಲ್ಲೂ ಕೂಡಾ ಇಂತಹ ಕ್ರೀಡಾ, ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಬೇಕು ಆ ಮೂಲಕ ಜನರಲ್ಲಿ ಕ್ರೀಡಾ ಹಾಗೂ ಸಾಂಸ್ಕøತಿಕ ಮನೋಭಾವನೆಯನ್ನು ಬೆಳೆಸುವ ಕೆಲಸವಾಗಬೇಕು. ಯುವ ಜನತೆ ಹೆಚ್ಚು ಸಂಘಟಿತರಾಗಿ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಈ ಕಾರ್ಯಕ್ರಮ ಅತ್ಯಂತ ಮಹತ್ವ ಹಾಗೂ ವಿಶಿಷ್ಟವಾಗಿದೆ ಎಂದರು.

RELATED ARTICLES  ಗೋಕರ್ಣ ಗೌರವಕ್ಕೆ ಭಾಜನರಾದ ಶ್ರೀ ಶ್ರೀ ನಂಜುಂಡೇಶ್ವರ ಸ್ವಾಮಿಗಳು.

ಅಧ್ಯಕ್ಷೀಯ ಭಾಷಣ ಮಾಡಿದ ಶಿರಸಿಯ ಕೆ.ಡಿ.ಸಿ.ಸಿ. ಬ್ಯಾಂಕ್, ನ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಸಂಘಟಕರನ್ನು ಶ್ಲಾಘಿಸಿ ಶುಭಕೋರಿದರು.

ರಾಜ್ಯ ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖ ಸೂರಜ ನಾಯ್ಕ ಸೋನಿ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭ ಕೋರಿದರು.

RELATED ARTICLES  ನಿರಾಶ್ರಿತರಾದ ಜನರಿಗೆ ನೆರವಾದ ಯುಕೆ ಎಕ್ಸ್‌ಪ್ರೆಸ್‌ ಬಳಗ ಹಾಗೂ ಸಿಂಚನ ಟಿವಿ.

ಈ ಸಂದರ್ಭದಲ್ಲಿ ಶ್ರೀಕುಮಾರ ಟ್ರಾವೆಲ್ಸ ನ ಮಾಲೀಕರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ, ಬಿಜೆಪಿ ಮುಖಂಡ ಎಂ.ಜಿ. ಭಟ್, ಮಾಜಿ ಜಿ.ಪಂ. ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ , ರವಿ ಶೆಟ್ಟಿ ಕವಲಕ್ಕಿ, ಎಸ್.ಕೆ.ಪಿ. ಕಾಲೇಜ ಪ್ರಾಂಶುಪಾಲರಾದ ವಿ.ಎನ್.ಭಟ್ ಮುಂತಾದವರು ಉಪಸ್ಥಿತರಿದ್ದರು.