ಪ್ರಾಕೃತಿಕವಾಗಿ ಸಿಗುವ ಎಲ್ಲಾ ಪದಾರ್ಥಗಳನ್ನು ಬಳಸಿಕೊಂಡು ಅಡುಗೆಯನ್ನು ಮಾಡಬೇಕು. ಈಗಿನ ತಾಯಂದಿರು ಮಕ್ಕಳಿಗೆ ನಮ್ಮ ಹಳೆಯ ಮತ್ತು ರುಚಿಕರ ಮತ್ತು ಆರೋಗ್ಯಕ್ಕೆ ಬೇಕಾಗುವ ತಿಂಡಿಯನ್ನು ಮಾಡಿಕೊಡುವುದಿಲ್ಲ. ಈಗಿನವರು ಪೇಟೆಯ ಆಹಾರವನ್ನೇ ಬಳಸುವುದು ಹೆಚ್ಚು ಎಂದು ಕಾಕಲ್ ಕೈರುಚಿಯ ಛಾಯ ಸತೀಶ್ ಕಾಕಲ್ ಹೇಳಿದರು.

ಮಲ್ಲೇಶ್ವರದಲ್ಲಿರುವ ಶ್ರೀಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ನಡೆದ ಪಾಕ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಛಾಯ ಸತೀಶ್ ಕಾಕಲ್ ಅವರು ‘ ಆರೋಗ್ಯಕರ ಅಹಾರ ‘ದ ಕುರಿತಾಗಿ ಮಾತನಾಡಿ, ಕಾಲಕಾಲಕ್ಕೆ ಸಿಗುವಂತ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಉತ್ತಮ ಅಡುಗೆಯನ್ನು ಮಾಡಬಹುದು. ನಾವು ಸಹ ಉದ್ಯಮದಲ್ಲಿ ಗ್ರಾಮಿಣ ಸೊಗಡಿನ ಹವ್ಯಕರ ಅಡುಗೆ ಬಳಸುವುದು ಹೆಚ್ಚು ಮತ್ತು ಅದನ್ನು ಜನ ಇಷ್ಟ ಪಡುತ್ತಾರೆ ಎಂದು ಅಭಿಪ್ರಾಯಪಟ್ಟ ಅವರು, ತಂಬಳಿ, ಹಸಿ, ಮೆಣಸ್ ಕಾಯಿ. ಅವಿಲು. ಸಾಸುವೆ, ಕಡ್ಲೆ ಸಿಹಿ, ಗೊಜ್ಜುಗಳು ಮುಂತಾದ ಹವ್ಯಕ ಅಡುಗೆ ವೈವಿಧ್ಯಗಳ ಕುರಿತಾಗಿ ಹಾಗೂ ಅವುಗಳ ಉಪಯುಕ್ತತೆಯ ಕುರಿತಾಗಿ ಹೇಳಿದರು.

RELATED ARTICLES  ಉತ್ತರ ಕನ್ನಡದಲ್ಲಿ ಮತ್ತೆ ಏರಿದ ಕೊರೋನಾ ಪಾಸಿಟೀವ್ ಕೇಸ್ ಸಂಖ್ಯೆ

ಸುಪ್ರಸಿದ್ದ ಹವ್ಯಕ ಪಾಕತಜ್ಜ್ಞರು ಹಾಗೂ ಲೇಖಕರಾದ ಶ್ರೀಮತಿ ಸವಿತಾ ಭಟ್ ಅಡ್ವಾಯಿ ಹವ್ಯಕ ಪಾಕ ಸಂಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಖ್ಯಾತ ವೀಣಾ ಸ್ಟೋರ್ಸ್ ನ ಮಾಲಿಕರಾದ ಸೂರ್ಯನಾರಾಯಣ ಹೆಗಡೆಯವರು ಉತ್ತಮವಾದ ಆಹಾರ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಮುಂದಿನ ಪೀಳೀಗೆಗು ಹವ್ಯಕರ ರುಚಿ ಸಿಗುವಂತೆ ಮಾಡಿ ಎಂದು ಆಗಮಿಸಿದ್ದ ಮಹಿಳೆಯರಿಗೆ ಕಿವಿಮಾತು ಹೇಳಿದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ಮಾತನಾಡಿ, ನಮ್ಮ ಮನೆಯಲ್ಲಿ ಮಾಡುವ ಶುಚಿ- ರುಚಿಯಾದ ಅಹಾರ ಅರೋಗ್ಯಕ್ಕೆ ಉತ್ತಮ. ಮೂಲ ಆಹಾರವನ್ನು ಬಳಸಿದರೆ ಅದು ಆರೋಗ್ಯಕರ. ಅನ್ನ ಬಿಟ್ಟು ರಾಗಿ ತಿಂದರೆ ರಾಗಿ ಬಿಟ್ಟು ಅನ್ನ ತಿಂದರೆ ಅದು ಒಳ್ಳೆಯದಲ್ಲ. ಅವರವರ ಸುತ್ತಮುತ್ತಲಿನ ಅಹಾರ ಕ್ರಮವನ್ನು ಬಿಟ್ಟು ಕೊಡದೆ ಮುಂದುವರಿಸಿಕೊಂಡು ಹೋಗಬೇಕು. ನಾವು ನಮ್ಮ ಪದ್ದತಿಯನ್ನು ಅನುಸರಿಸಿದರೆ ಸಂಸ್ಕೃತಿಯನ್ನು ಸಹಾ ಬೆಳೆಸಿದಂತೆ. ಆಹಾರ ಪದ್ದತಿ. ಬಡಿಸುವ ಕ್ರಮ, ಮಾಡುವ ವಿಧಾನಗಳಲ್ಲಿಯೂ ವೈಜ್ಞಾನಿಕತೆ ಅಡಗಿದೆ. ಹವ್ಯಕರು ಆಯುರ್ವೇದದಲ್ಲಿ ಯಾವ ಆಹಾರ ಪದ್ದತಿ ಹೇಳಿದ್ದಾರೆಯೋ ಅದನ್ನು ಅನುಸರಿಸಿಕೊಂಡು ಹೋಗಬೇಕಾಗಿದೆ. ಹವ್ಯಕರಿಗೆ ತರಕಾರಿ ಇತರೆ ಯಾವದೇ ಸಿಗದೇ ಇದ್ದರೂ ಹವ್ಯಕರಿಗೆ ಅಡುಗೇ ಮಾಡುವ ಪದ್ದತಿ ಗೊತ್ತಿದೆ. ಈ ಪಾಕ ಸಂಸ್ಕಾರ ಕಾರ್ಯಕ್ರಮ ಎಲ್ಲರಿಗೂ ಉತ್ತಮ ಸಹಕಾರಿಯಾಗಲಿ ಎಂದು ಮಹಾಸಭೆ ಹಮ್ಮಿಕೊಂಡಿದೆ ಎಂದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 16-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.

ಪ್ರಧಾನ ಕಾರ್ಯದರ್ಶಿಗಳಾದ ಸಿಎ ವೇಣುವಿಘ್ನೇಶ್ ಸಂಪ ಅತಿಥಿಗಳನ್ನು ಸ್ವಾಗತಿಸಿದರು, ಪಾಕ ಸಂಸ್ಕಾರ ಸಂಚಾಲಕರಾದ ಭಾರತಿ ಪ್ರಕಾಶ ವಂದನಾರ್ಪಣೆಮಾಡಿ ಆಗಮಿಸಿದ ಎಲ್ಲರಿಗೂ ಗೌರವ ಸಮರ್ಪಣೆ ಸಲ್ಲಿಸಿದರು. ಹವ್ಯಕ ಮಹಾಸಭೆಯ ಪದಾಧಿಕಾರಿಗಳು, ನಿರ್ದೇಶಕರು, ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರಿಂದ ಮಹಿಳೆಯರಿಗಾಗಿ ಕಾರ್ಯಕ್ರಮ ದಲ್ಲಿ ಡಾ. ಶರ್ಮಿಳಾ ಭಟ್ಟ ಗೋರೆಯವರು ಥೈರಾಯ್ಡ್ ಮತ್ತು ಕಾಳಜಿಯ ಬಗ್ಗೆ ಉತ್ತಮ ಮಾಹಿತಿಯನ್ನು ತಿಳಿಸಿಕೊಟ್ಟರು.

ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕೆಜೆಯವರು ಮತ್ತು ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಕಾರ್ಯಕ್ರಮದ ಸಂಚಾಲಕರಾದ ಡಾ. ಮಮತಾ ಜಿ ಹಾಗೂ ಶ್ರೀಮತಿ ಮಧುರಾ ಗಾಂವ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂರಾರು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉಪಯೋಗ ಪಡೆದುಕೊಂಡರು.