ಕುಮಟಾ- ತಾಲೂಕಿನ ಬಾಡದ ‘ಶಿವಾ ಮಲ್ಟಿ ಜಿಮ್’ ಇವರಿಂದ ಕುಮಟಾದ ಮಣಕಿ ಮೈದಾನದಲ್ಲಿ ‘ಮಿಸ್ಟರ್ ಬಲವಾನ್ 2018’ ರಾಜ್ಯ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅನೇಕ ಕ್ರೀಡೆಗಳಲ್ಲಿ ಅತಿ ವಿಶಿಷ್ಟವಾದ ಹಾಗೂ ಕಷ್ಟಕರವಾದ ಈ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಶಿವಾ ಹರಿಕಂತ್ರ ಮತ್ತು ಅವರ ಸಂಗಡಿಗರು ಸಫಲರಾಗಿದ್ದಾರೆ. ಕುಮಟಾದ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವಿಶೇಷ ಕ್ರೀಡೆಯನ್ನು ಆಸ್ವಾದಿಸುವುದರೊಂದಿಗೆ ದೇಹದಾಢ್ರ್ಯ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಗಮನಾರ್ಹ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ನಿರ್ಣಾಯಕರ ತಂಡ ಆಗಮಿಸಿದ್ದು ನಿಯಮಾನುಸಾರ ಈ ಸ್ಪರ್ಧೆ ಜರುಗಲಿದೆ. 2020 ಕ್ಕೆ ನಮ್ಮ ದೇಶದಲ್ಲಿ 35 ವರ್ಷ ವಯಸ್ಸಿನ ಯುವ ಜನತೆ 65% ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದು ಈ ಯುವಜನತೆ ದೇಶದ ಶಕ್ತಿಯಾಗಿದೆ. ಇವರು ಆರೋಗ್ಯವಂತರೂ, ವಿಚಾರವಂತರೂ ಎಲ್ಲಕ್ಕಿಂತ ಹೆಚ್ಚಾಗಿ ದೇಶಭಕ್ತರಾಗಬೇಕು. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಜರುಗಲಿ ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುವುದಾಗಿ ನುಡಿದರು.

RELATED ARTICLES  ವರ್ಗಾವಣೆಗೊಂಡ ತಹಶಿಲ್ದಾರರಿಗೆ ಗೌರವಾರ್ಪಣೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ. ಜಿಲ್ಲೆಯ ಮಾಜಿ ಸಚಿವರು ಹಾಗೂ ಹಾಲಿ ಎಂ.ಎಲ್.ಸಿ. ಯಾಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಯಾರಲ್ಲಿ ಯಾವಶಕ್ತಿ ಇದೆ ಎನ್ನುವುದನ್ನು ಗುರುತಿಸಬೇಕು ಅದಕ್ಕೆ ನುರಿತ ವ್ಯಕ್ತಿಯ ಸಲಹೆ, ಮಾರ್ಗದರ್ಶನ ಕೂಡಾ ಅಗತ್ಯವಾಗಿದೆ. ಭಗವಾನ ಆಂಜನೇಯನಲ್ಲಿ ಅಗಾಧವಾದ ಶಕ್ತಿ ಇರುವುದನ್ನು ಮನವರಿಕೆ ಮಾಡಿಕೊಟ್ಟಾಗಲೇ ಆತನಿಗೂ ತನ್ನ ಶಕ್ತಿಯ ಅರಿವಾದದ್ದು ಎಂಬ ರಾಮಾಯಣದ ಕಥೆಯೊಂದನ್ನು ಉಲ್ಲೇಖಿಸಿ ಯುವ ಜನತೆಯಲ್ಲೂ ಕೂಡಾ ಅಪಾರ ಶಕ್ತಿಯಿದ್ದು ಅದನ್ನು ಗುರುತಿಸಿ ಅವರಿಗೆ ಅವರಲ್ಲಿರುವ ಶಕ್ತಿಯ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಕಾಶ್ಮೀರದಲ್ಲಿ ದೇಶ ಕಾಯುವ ಸೈನಿಕರ ಮೇಲೆ ಕಲ್ಲೆಸೆಯುವ ಯುವಕರನ್ನು ಹಾಗೂ ಕುಮಟಾ ಭಾಗದಲ್ಲಿ ಅವಘಡ ಸಂಭವಿಸಿದಾಗ ಯಾವುದನ್ನೂ ಲೆಕ್ಕಿಸದೇ ಸಹಾಯಕ್ಕೆ ನಿಂತ ಯುವಕರನ್ನೂ ಕುರಿತು ಮಾರ್ಮಿಕವಾಗಿ ಮಾತನಾಡಿ ಸುಸಂಸ್ಕøತ ಯುವಕರ ಸಂಖ್ಯೆ ಹೆಚ್ಚಾಗಬೇಕು ಎಂದರು.

RELATED ARTICLES  ಟಿಪ್ಪರ್ ಮತ್ತು ಕಾರ್ ನಡುವೆ ಭೀಕರ ಅಪಘಾತ: ಇಬ್ಬರಿಗೆ ಗಾಯ

ಎಸ್.ಆರ್. ಎಲ್. ಮಾಲಿಕರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ವಿಶೇಷ ಕ್ರೀಡೆಯನ್ನು, ಆಯೋಜನೆಯನ್ನೂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖ ಸೂರಜ ನಾಯ್ಕ ಸೋನಿ, ಮಾಜಿ ಶಾಸಕ ದಿನಕರ ಶೆಟ್ಟಿ, ಮಂಜುನಾಥ ಜನ್ನು, ಆರ್. ಈ. ನಾಯ್ಕ, ವಿಷ್ಣು ಪಟಗಾರ, ಗಂಗಾಧರ ಆರ್. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.