ಕಾರವಾರ ; ಸರ್ಕಾರದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಆಯಾ ಕ್ಷೇತ್ರಗಳ ಜಿಲ್ಲಾ ಪಂಚಾಯತ್ ಸದಸ್ಯರುಗಳ ಗಮನಕ್ಕೆ ತರುವುಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಅಧಿಕಾರಿಗಳಿಗೆ ಎಚ್ಚರಿಸಿದರು. ಅವರು ಜಿಲ್ಲಾ ಪಂಚಾಯುತ್ ಸಭಾಂಗಣದಲ್ಲಿ ನೆಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯಾ ಜಿಲ್ಲಾ ಪಂಚಾಯತ ಸದಸ್ಯರುಗಳ ಗಮನಕ್ಕೆ ತಂದು ಅಂತಿಮ ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ರೂಪಾ ನಾಯ್ಕ ಮಾತನಾಡಿ ಬನವಾಸಿ ವಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಇಗಾಗಲೇ ಫಲಾನುಭವಿಗಳನ್ನು ಆಯ್ಕೆಯನ್ನ್ಕು ನನ್ನ ಗಮನಕ್ಕೆ ತರದೇ ಕೇವಲ ಸಾಮಾಜಿಕ ನ್ಯಾಶ ಸಮಿತಿ ಅಧ್ಯಕ್ಷರ ಶಿಪಾರಸ್ಸಿನ ಮೆರೆಗೆ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾ ಪಂಚಾಯತ್ ಸದಸ್ಯರ ಬೆಲೆ ಇಲ್ಲದಂತಾಗುತ್ತದೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಅಧ್ಯಕ್ಷೆ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಗಳ ಗಮನಕ್ಕೆ ತರುವುದು ಕಡ್ಡಾಯ ಎಂದು ಹೇಳಿದರು.
ಇಗಾಗಲೇ ಆಯ್ಕೆ ಮಾಡಲಾದ ಫಲಾನುಭವಿಗಳ ಜೊತೆಗೆ ಇನ್ನುಳಿದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳ ಆಯ್ಕೆಯಲ್ಲಿ ಸದಸ್ಯರ ಗಮನಕ್ಕೆ ತಂದು ಅಂತಿಮ ಆಯ್ಕೆ ಮಾಡಲಾಗುವದು ಎಂದು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ತಿಳಿಸಿದರು.
ರಾಜೀವಗಾಂಧಿ ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿದ ಫಲಾನುಭವಿಗೆ ಪಿಡಿಒ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷಿಸಿದ ಕಾರಣ ಫಲಾನುಭವಿ ಖಾತೆಗೆ ಹಣ ಜಮಾವಾಗುವದಕ್ಕೆ ವಿಳಂಭವಾಗಿದ್ದು ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕುಮಟಾ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪ ನಾಯ್ಕ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರರವರಿಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಉಪ ಕಾರ್ಯದರ್ಶಿ ಆರ್.ಜಿ. ನಾಯಕ ಫಲಾನುಭವಿಳಿಗೆ ಹಣ ನೀಡುವಲ್ಲಿ ನಿರ್ಲಕ್ಷೀಸಿದ ಪಿಡಿಒ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಪ್ರದೇಶ ಅಭಿವೃದ್ಧಿಪಡಿಸಲು ಭೂ ಅಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಗ್ರಾಮ ಲೆಕ್ಕಿಗರು ನೀಡುವ ಕೃಷಿ ಹಿಡುವಳಿ ಪ್ರಮಾಣ ಪತ್ರ ಪರಿಗಣಿಸಲು ಪಿ.ಡಿ.ಓ. ಗಳಿಗೆ ನಿರ್ದೇಶನ ಸುತ್ತೊಲೆ ಹೊರಡಿಸಿದ್ದರೂ ಕ್ರಮವಹಿಸುತ್ತಿಲ್ಲ. ಇದು ಅಧಿಕಾರಿಗಳ ವ್ಯೈಫಲ್ಯವನ್ನು ಎತ್ತು ತೋರಿಸುತ್ತದೆ. ಅಂತಹ ಅಧಿಕಾರಿಗಳ ವಿರುದ್ದ ನಿಯಮನುಸಾರ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ ಸದಸ್ಯ ಜಿ. ಎನ್ ಹೆಗಡೆ ಮುರೇಗಾರ ಸಭೆಯಲ್ಲಿ ಒತ್ತಾಯಿಸಿದರು.
ಪಶುಭಾಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಧನ ಸಹಾಯಕ್ಕೆ ಬ್ಯಾಂಕುಗಳು ತಾರತಮ್ಯ ನೀತಿ ಅನುಸರಿಸುತ್ತಿರುವ ಕ್ರಮಕ್ಕೆ ಜಿ.ಪಂ ಸದಸ್ಯರಗಳಾದ ಉಷಾ ಹೆಗಡೆ, ಅಲ್ಬರ್ಟ ಬರ್ನಲ್ ಡಿಕೊಸ್ತ, ಗಜಾನನ ನಾಗೇಶ ಪೈ ಬೇಸರ ವ್ಯಕ್ತ ಪಡಿಸಿ ಸರ್ಕಾರದ ಜನಪ್ರೀಯ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗಿತ್ತಿವೆ ಎಂದು ದೂರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ, ಉಪಾಧ್ಯಕ್ಷ ಸಂತೋಷ ರೇಣುಕೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಲಕ್ಷ್ಮಣ ಪಾಟೀಲ್, ಶಿವಾನಂದ ಹೆಗಡೆ, ಬಸವರಾಜ ದೊಡಮನಿ ಜಿ. ಪಂ ಸದಸ್ಯರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.