ದಾಂಡೇಲಿ: ತಾಲೂಕಿನ ನಾಡವರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜೆ ಡಿ ಎಸ್ ಮುಖಂಡ ಶ್ರೀ ಪ್ರದೀಪ ದೇವರಭಾವಿ ಉದ್ಘಾಟಿಸಿ ನಾಡವರ ಸಮಾಜದ ಹಿರಿಮೆ ಹಾಗೂ ಗರಿಮೆ ಕುರಿತು ಅಭಿಮಾನ ವ್ಯಕ್ತಪಡಿಸಿದರಲ್ಲದೆ ಮತ್ತು ಸಮಾಜದ ಅತ್ಯಂತ ವಿಶೇಷ ಗುಣಗಳಲ್ಲೊಂದಾದ ಇತರ ಎಲ್ಲಾ ಸಮಾಜದ ಜನರನ್ನ ತಮ್ಮವರೆ ಎಂದು ಸ್ವೀಕರಿಸುವ ಹಾಗೂ ಅಪ್ಪಿಕೊಳ್ಳುವ ವಿಚಾರದ ಕುರಿತು ತಿಳಿಸಿದರು. ನಮ್ಮ ಹಿಂದಿನವರು ಜಾತಿ ಕಟ್ಟುವ ಪ್ರಯತ್ನ ಮಾಡಲಿಲ್ಲ ಬದಲಾಗಿ ಸಮಾಜ ಕಟ್ಟುವ ಕೆಲಸ ಮಾಡಿದ್ದರಿಂದಲೇ ಇವತ್ತಿಗೂ ಬೇರೆ ಸಮಾಜದವರು ನಮ್ಮ ಸಮಜವನ್ನ ವಿಶ್ವಾಸದಿಂದ ನೋಡುತ್ತಿದ್ದಾರೆ ಎನ್ನುವದರೊಂದಿಗೆ ಕಲೆ,ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಿಕೊಂಡು ಹೋಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಂಕೋಲಾ ತಾ ಪಂ ಅಧ್ಯಕ್ಷೆ ಸುಜಾತ ಗಾವoಕಾರ್,ಅಜಿತ್ ನಾಯಕ್,ಮಾಸ್ಕೆರಿ ಎಂ ಕೆ ನಾಯಕ, ದಾಂಡೇಲಿ ನಾಡವರ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾವರ ಎಸ್ ಡಿ ಎಂ ಸಿ ಪ್ರಾಚಾರ್ಯ ಎಂ ಆರ್ ನಾಯಕ ವಹಿಸಿದ್ದರು. ಪ್ರವೀಣ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು, ಮಹದೇವ ನಾಯಕ ಸ್ವಾಗತಿಸಿದರು, ಹಮ್ಮಣ್ಣ ನಾಯಕ್ ಹಾಗೂ ನಯನ ನಾಯಕ್ ಕಾರ್ಯಕ್ರಮ ನಿರೂಪಿಸಿದರು.