ಹೊನ್ನಾವರ: ಶೈಕ್ಷಣಿಕ,ಕ್ರೀಡೆ,ಸಂಸ್ಕ್ರತಿ,ಕಲೆಗಳಿಗೆ ಪ್ರೊತ್ಸಾಹ ನೀಡಿದೆ, ಮಹಿಳೆ ಸ್ವಾಲಂಭಿಯಾಗಿ ಜೀವನ ನಡೆಸಲು,ಸಮಾಜದಲ್ಲಿ
ಗುರುತಿಸಿಕೊಳ್ಳಲು ಯಶೋದರ ನಾಯ್ಕ ಟ್ರಸ್ಟ ಸಹಾಯಕವಾಗಿದೆ.ಇದೇ ರೀತಿ ಈ ಟ್ರಸ್ಟ ಎಲ್ಲಾ ಮಹಿಳೆಯರಿಗೂ ದಾರಿ ದೀಪವಾಗಲಿ ಎಂದು ನಾಗರೀಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು. ಅವರು ಯಶೋಧರಾ ನಾಯ್ಕ ಟ್ರಸ್ಟ ವತಿಯಿಂದ ನಡೆದ
ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ಯಂತ್ರ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಾಣಾ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ ಇಂದು ಮಹಿಳೆಯರು ಸಮಾಜದಲ್ಲಿ ಕಷ್ಟಪಟ್ಟು ಜೀವನ
ನಡೆಸುತ್ತಿದ್ದಾರೆ,ಈ ಟ್ರಸ್ಟ ವತಿಯಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹಿಳೆಯರು ಸಬಲರಾಗುವಂತೆ ಸಹಾಯಹಸ್ತ
ನೀಡಿದೆ,ಇದೆ ರೀತಿ ಈ ಟ್ರಸ್ಟ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿ ಎಂದರು.

ನಂತರ ಯಶೋಧರ ಟ್ರಸ್ಟ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ಮತ್ತು ಹೊಲಿಗೆ
ಯಂತ್ರ ವಿತರಿಸಲಾಯಿತು. ತಾಲೂಕಿನ ಕರ್ಕಿ,ಚಂದಾವರ,ಹಳದಿಪುರ,ಹೊದ್ಕೆ ಶಿರುರು,ಹೊಸಾಕುಳಿ,ಚಿಕ್ಕನಕೊಡ್,ಕಡಗೇರಿ,ಸಾಲ್ಕೊಡ್ ಸೇರಿದಂತೆ ಇನ್ನು ಅನೇಕ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಲಾಯಿತು.

RELATED ARTICLES  ಉತ್ತರಕನ್ನಡದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದವರೇ ಹೆಚ್ಚು?

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶೋದರ ನಾಯ್ಕ ಮಾತನಾಡಿ,ನನ್ನ ಜೀವನದಲ್ಲಿ ಯಶಸ್ಸು ಕಾಣಲು ಒಂದು ಹೆಣ್ಣು ಕಾರಣ,4 ರೂಪಾಯಿಂದ ನನ್ನ ಜೀವನ ಆರಂಭವಾಯಿತು,ನಮ್ಮ ಈ ಟ್ರಸ್ಟ ನ ಊದ್ದೇಶ ಮಹಿಳೆಯರು ಯಾರ ಬಳಿಯು ಹಣಕ್ಕಾಗಿ ಅಂಗಲಾಚದೇ ಸಂಪೂರ್ಣವಾಗಿ ಸಬಲಿಕರಣವಾಗವಂತೆ ಮಾಡುವುದು,ಪ್ರತಿ ಹಳ್ಳಿಯಲ್ಲು ಬದಲಾವಣೆ ತರುವುದು, ನಮ್ಮ ಟ್ರಸ್ಟ ನಲ್ಲಿ ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಾರೆ,ಅವರ ಸಹಕಾರದಿಂದಲೇ ನಮ್ಮ ಟ್ರಸ್ಟ ಬೆಳೆಯಲು ಕಾರಣ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಶ್ರೀಕಾಂತ ಮೊಗೆರ (ಕರ್ಕಿ ಗ್ರಾಂ ಪಂಚಾಯತ್ ಅದ್ಯಕ್ಷರು ), ಜಿಲ್ಲಾ ಪಂಚಾಯತ್
ಸದಸ್ಯೆ ಶ್ರೀ ಗಾಯತ್ರಿ ಗೌಡ, ಶ್ರೀ ಎನ್. ಎಸ್. ಹೆಗಡೆ (ಬಿ.ಜೆ.ಪಿ ಮುಖಂಡರು), ಶ್ರೀ ತುಕಾರಾಂ ನಾಯ್ಕ (ತಾಲೂಕಾ ಪಂಚಾಯತ್ ಸದಸ್ಯರು), ಶ್ರೀ ಮಂಜುನಾಥ ಶರ್ಮಾ, ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ (ಪತ್ರಕರ್ತರು, ನಾಗರಿಕ ಪತ್ರಿಕೆ), ಶ್ರೀ ಸತ್ಯ ಜಾವಗಲ್, ಶ್ರೀಮತಿ ಸಾಧನಾ ನಾಯ್ಕ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್), ಶ್ರೀಮತಿ ಕಲ್ಪನಾ ನರೊನ್ಹಾ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್), ಶ್ರೀಮತಿ ಪೂರ್ಣಿಮಾ ಹೆಗಡೆ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್), ಶ್ರೀಮತಿ ಅನುಪಮಾ ಜಿ ಮಡಿವಾಳ (ಜಿಲ್ಲಾ ಮೊರ್ಚಾ ಪ್ರಧಾನ ಕಾರ್ಯದರ್ಶಿ), ಶ್ರೀ ಮೊಹನ್ ನಾಯ್ಕ (ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ), ಶ್ರೀಮತಿ ಶಕುಂತಲಾ, ಶ್ರೀಮತಿ ಮಹಾದೆವಿ ನಾಯ್ಕ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್),ಶ್ರೀಮತಿ ಶೀವಿ ಮುಕ್ರಿ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್), ಶ್ರೀಮತಿ ಮಹಾದೆವಿ ಮುಕ್ರಿ (ಸದಸ್ಯರು, ಕರ್ಕಿ ಗ್ರಾಂ ಪಂಚಾಯತ್), ಶ್ರೀ ಸೀತಾರಾಮ್ ನಾಯ್ಕ, ಶ್ರೀ ಪರಮೇಶ್ವರ ನಾಯ್ಕ, ಶ್ರೀ ದಿಪಕ ಶೆಟ (ಬಿ.ಜೆ.ಪಿ. ಯುವಮೊರ್ಚಾ
ಅಧ್ಯಕ್ಷರು) ಶ್ರೀ ಹರಿಶ್ಚಂದ್ರ ಜಿ ನಾಯ್ಕ ಇನ್ನಿತರರು ಹಾಜರಿದ್ದರು.

RELATED ARTICLES  ಕಾರು - ಬೈಕ್ ಅಪಘಾತ : ಬೈಕ್ ಸವಾರ ಸಾವು.