ಹೊನ್ನಾವರ : ತಾಲ್ಲೂಕಿನ ಕಡತೋಕ ಪಂಚಾಯತ್ ವ್ಯಾಪ್ತಿಯ ಜಡ್ಡೀಗದ್ದೆ, ಹರಿಜನಕೇರಿಯಲ್ಲಿ 2017-18ನೇ ಸಾಲಿನ ಎಸ್. ಸಿ.ಪಿ. ಯೋಜನೆಯಡಿ ಅಂದಾಜು 20ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿದರು.

RELATED ARTICLES  ಕೊಂಕಣ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಭಕ್ಕೆ ಶಾಸಕ ದಿನಕರ ಶೆಟ್ಟಿ ಅಸಮಾದಾನ..

ನಂತರ ಮಾತನಾಡಿದ ಅವರು ಕಾಮಗಾರಿಗಳನ್ನು ಅನುಷ್ಠಾನ ಮಾಡುವಲ್ಲಿ ನನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದ್ದೇನೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವವರಿಗೆ ಅಭಿವೃದ್ಧಿ ಮೂಲಕ ಉತ್ತರಿಸಿದ್ದೇನೆ ಎಂದರು.

ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಡತೋಕ ಗ್ರಾ. ಪಂ. ಅಧ್ಯಕ್ಷೆ ಶೋಭಾ ಶ್ರೀಧರ ನಾಯ್ಕ, ಕಡ್ಲೆ ಗ್ರಾ. ಪಂ. ಅಧ್ಯಕ್ಷೆ ಊರ್ಮಿಳಾ ಶೂಟ್, ನವಿಲಗೋಣ ಗ್ರಾ. ಪಂ. ಅಧ್ಯಕ್ಷರಾದ ಸತೀಶ ಹೆಬ್ಬಾರ,ಕಡತೋಕ ಗ್ರಾ. ಪಂ. ಉಪಾಧ್ಯಕ್ಷರಾಗಿ ಎಮ್ ಎಸ್ ಹೆಗಡೆ, ಪ್ರಮುಖರಾದ ಸುಬ್ಬಣ್ಣ ಹೆಗಡೆ, ಲಂಭೋಧರ ನಾಯ್ಕ ಹಾಗೂ ಎಮ್ ಡಿ ನಾಯ್ಕ ವಹಿಸಿದ್ದರು.

RELATED ARTICLES  ಮರ ಬಿದ್ದು ರಸ್ತೆ ಸಂಚಾರ ಅಸ್ಥವ್ಯಸ್ಥ.