ಪ್ರೀತಿ ಮಾಡೋಕೆ ನಮಗೆ ವರ್ಷದ 365 ದಿನಗಳಲ್ಲಿ ಪುರುಸೊತ್ತೇ ಇಲ್ವಾ? ಅದಕ್ಕೆ ಫೆಬ್ರುವರಿ 14 ಕ್ಕೆ ಮಾತ್ರ ಒಂದು ದಿನದ ಮಟ್ಟಿಗೆ ಪ್ರೇಮಿಗಳ ದಿನ ಅಂತ ಆಚರಿಸ್ತಾರಾ? ಇದರ ಹಿಂದೆಯೂ 1800 ವರ್ಷಗಳ ಇತಿಹಾಸವಿದೆ.

ಅದು ಕ್ರಿ.ಶ.269 ನೆ ಇಸವಿ, ರೋಮ್ ದೇಶವನ್ನ ಕ್ಲಾಡಿಯಸ್ II ಎಂಬ ಕ್ರೂರ ರಾಜ ಆಳುತ್ತಿದ್ದ. ಹೇಳಿ ಕೇಳಿ ಅದು ಯೂರೋಪ್, ಅಲ್ಲಿ ಗಂಡ ಹೆಂಡತಿ ಅಪ್ಪ ಅಮ್ಮ ಅಣ್ಣ ತಂಗಿ ಸಂಬಂಧಗಳಿಗೆ ಆಗಲೂ ಬೆಲೆಯಿರಲಿಲ್ಲ ಈಗಲೂ ಇಲ್ಲ. ನಮ್ಮ ಭಾರತದಲ್ಲಿರುವಂತೆ ಹೆಣ್ಣು ಗಂಡು ಮದುವೆಯಾಗಿ ಬಾಂಧವ್ಯಕ್ಕೊಳಗಾಗಿ ಬದುಕುವಂತಹ ಸ್ಥಿತಿಯೇ ಇರಲಿಲ್ಲ.

ಯೂರೋಪ್ ಹಾಗು ಭಾರತದ ನಡುವೆ ವ್ಯಾಪಾರ ವಹಿವಾಟು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಅದೇ ರೋಮ್’ನಲ್ಲಿ ವ್ಯಾಲೆಂಟೈನ್ ಎಂಬ ಕ್ರಿಶ್ಚಿಯನ್ ಪಾದ್ರಿಯೂ ಸಹ ವಾಸವಾಗಿದ್ದ, ಆತನಿಗೆ ಭಾರತದ ಶ್ರೇಷ್ಟ ಪರಂಪರೆಯನ್ನ ಕಂಡು ರೋಮ್’ನಲ್ಲಿಯೂ ಗಂಡು ಹೆಣ್ಣು ಯಾಕೆ ಮದುವೆ ಎಂಬ ಬಂಧನಕ್ಕೊಳಗಾಗದೆ ಅನೈತಿಕ ಸಂಬಂಧಗಳ ಮೂಲಕ ತಮ್ಮ ಜೀವನ & ಯೌವನವನ್ನ ಹಾಳುಮಾಡಿಕೊಳ್ತಿದಾರೆ ಅಂತ ಒಮ್ಮೆ ಯೋಚಿಸಿ ಜೋಡಿಗಳಿಗೆ ಮದುವೆ ಮಾಡಿಸಲು ಯಶಸ್ವಿಯೂ ಆದ.

RELATED ARTICLES  ಭೀಮನ ಅಮಾವಾಸ್ಯೆ ವ್ರತದ ಮಹತ್ವ ಏನು ಗೊತ್ತಾ? ವ್ರತಾಚರಣೆ ಹೇಗೆ ಗೊತ್ತಾ?

ಆದರೆ ಬೇರೆ ಯಾವುದೋ(ಭಾರತ) ದೇಶದ ಆಚರಣೆಗಳನ್ನ ತನ್ನ ನೆಲದಲ್ಲಿ implement ಮಾಡುತ್ತಿರೋ ವ್ಯಾಲೆಂಟೈನ್’ನನ್ನ ಕ್ಲಾಡಿಯಸ್ II ಬಂಧಿಯಾಗಿಸಿ ಚಿತ್ರ ಹಿಂಸೆ ನೀಡಿಸಿದ, ಆದರೆ ಅಲ್ಲಿವರೆಗೂ ಕ್ಲಾಡಿಯಸ್ ವ್ಯಾಲೆಂಟೈನ್’ನ ಮುಖ ನೋಡೇ ಇರಲಿಲ್ಲ.

ಆದರೆ ವ್ಯಾಲೆಂಟೈನ್ ಜೈಲಿನಲ್ಲಿರುವಾಗ ಜೈಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟೇರಿಯಸ್(Asterious)ನಿಗೆ ಮಾತ್ರ ವ್ಯಾಲೆಂಟೈನ್’ನ ಮೇಲೆ ಅದೇನೋ ಪ್ರೀತಿ, ಅಭಿಮಾನ, ಆತ ಮಾತ್ರ ವ್ಯಾಲೆಂಟೈನ್’ಗೆ ಜೈಲಿನಲ್ಲಿ ಚಿತ್ರಹಿಂಸೆಯಾಗದಂತೆ ನೋಡಿಕೊಳ್ಳುತ್ತಿದ್ದನಂತೆ.

ತನ್ನ ಮಗಳನ್ನೂ ವ್ಯಾಲೆಂಟೈನ್’ನ ಸಖ್ಯ ಬೆಳೆಸುವಂತೆ ಆಸ್ಟೇರಿಯಸ್ ಹಸಿರು ನಿಶಾನೆ ನೀಡಿದ್ದನಂತೆ, ಜೈಲಿನಲ್ಲಿದ್ದ ವ್ಯಾಲೆಂಟೈನನ್ನ ಭೇಟಿಯಾಗಲು ಆಸ್ಟೇರಿಯಸ್ ಮಗಳು ಬಂದು ಹೋಗುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇದನ್ನರಿತ ಕ್ಲಾಡಿಯಸ್ II ನ ಪಿತ್ತ ನೆತ್ತಿಗೇರಿ ವ್ಯಾಲೆಂಟೈನನ್ನ ತನ್ನ ಆಸ್ಥಾನಕ್ಕೆ ಎಳೆದು ತರುವಂತೆ ತನ್ನ ಸೈನಿಕರಿಗೆ ಆದೇಶ ನೀಡಿದನಂತೆ, ಯಾವಾಗ ವ್ಯಾಲೆಂಟೈನ್ ಕ್ಲಾಡಿಯಸ್’ನ ಎದುರಿಗೆ ಬಂದು ನಿಂತನೋ ಆಗ ಆತನನ್ನ ಕಂಡ ಕ್ಲಾಡಿಯಸ್ ಹೀಗೆ ಹೇಳ್ತಾನೆ.

“ನೀನು ನಮ್ಮ ರೋಮನ್(ಜುಡಾಯಿಸಂ Judaism ಮತ) ದೇವರನ್ನ ಪೂಜಿಸಿದರೆ ನಿನ್ನ ಶಿಕ್ಷೆಯನ್ನ ಕ್ಷಮಿಸಿಬಿಡ್ತೇನೆ & ಆಸ್ಟೇರಿಯಸ್’ನ ಮಗಳನ್ನೂ ನಿನಗೇ ಕೊಟ್ಟು ಬಿಡ್ತೇನೆ”

RELATED ARTICLES  ನೂರಾರು ಮಕ್ಕಳ ಬ್ಯಾಗ್ ನಲ್ಲಿ ಇತ್ತು ಮೊಬೈಲ್ : ರೈಡ್ ಮಾಡಿದಾಗ ಪ್ರಾಂಶುಪಾಲರೇ ಶಾಕ್..!

ಹೇಳಿ ಕೇಳಿ ವ್ಯಾಲೆಂಟೈನ್ ಕೂಡ ಒಬ್ಬ ಕಟ್ಟರ್ ಕ್ರಿಶ್ಚಿಯನ್’ನಾಗಿದ್ದು ಆತ ಜುಡಾಯಿಸಂ ಮತದ ದೇವರನ್ನ ಪೂಜಿಸೋಕೆ ಸುತಾರಾಂ ಒಪ್ಪಲಿಲ್ಲ. ಇದನ್ನ ಕಂಡ ಕ್ಲಾಡಿಯಸ್_II ವ್ಯಾಲೆಂಟೈನ್’ನ್ನ & ಆತ ಮದುವೆ ಮಾಡಿಸಿದ್ದ ಜೋಡಿಗಳ ಎದುರೇ ಚಿತ್ರಹಿಂಸೆ ಕೊಡಿಸಿ ಫೆಬ್ರುವರಿ 14, 269 ರಲ್ಲಿ ಕತ್ತು ಕತ್ತರಿಸಿ ಕೊಂದುಬಿಟ್ಟ.

ಆದರೆ ಅದಾಗಲೇ ವ್ಯಾಲೆಂಟೈನ್ ಆಸ್ಟೇರಿಯಸ್’ನ ಮಗಳನ್ನ ಮದುವೆಯಾಗಿ ತಂದೆ ಮಗಳು ಇಬ್ಬರನ್ನೂ ಕ್ರಿಶ್ಚಿಯನ್ನರಾಗಿ ಮತಾಂತರ ಮಾಡೇಬಿಟ್ಟಿದ್ದನಂತೆ.

ವ್ಯಾಲೆಂಟೈನ್ ಸಾಯೋಕೂ ಮುಂಚೆ ಆಸ್ಟೇರಿಯಸ್ ಮಗಳಿಗೆ ಪತ್ರ ಬರೆದು ಪತ್ರದ ಕೊನೆಯಲ್ಲಿ “From Your Valentine” ಅಂತ ಉಲ್ಲೇಖಿಸಿದ್ದನಂತೆ.

ಮುಂದೆ ದಶಕಗಳು ಕಳೆದಂತೆ ರೋಮ್ ಕ್ರಿಶ್ಚಿಯನ್ನರ ಕ್ರುಸೇಡ್’ಗೆ ಬಲಿಯಾಗಿ ಕ್ರಿಶ್ಚಿಯನ್ ರಾಷ್ಟ್ರವಾಗಿ ಕನ್ನರ್ಟ್ ಆದಾಗ ಕ್ರಿ.ಶ.496 ರಲ್ಲಿ ಪೋಪ್ ಗೆಲೇಸಿಯಸ್ I(Pope Gelasius I) ವ್ಯಾಲೆಂಟೈನ್ ಸತ್ತ ದಿನವನ್ನ “ತಮ್ಮ ಕ್ರಿಶ್ಚಿಯನ್ನರ ಹೆಮ್ಮೆ ಈ ವ್ಯಾಲೆಂಟೈನ್” ಎಂದು ಆತ ಹಬ್ಬ ಅಂತ ಘೋಷಣೆ ಮಾಡಿದ.

ಮುಂದೆ ರೋಮ್’ನ ಹಬ್ಬವಾಗಿದ್ದ ವ್ಯಾಲೆಂಟೈನ್ ಡೇ ಪ್ರೇಮಿಗಳ ದಿನಾಚರಣೆ ಯಾಗಿ 15 ನೇ ಶತಮಾನದಿಂದ ಮಾರ್ಪಾಡಾಯಿತು.