ಕುಮಟಾ: ಶಿವರಾತ್ರಿ ಹಿಂದೂ ಧರ್ಮದ ವಿಶೇಷ ಆಚರಣೆಯಾಗಿದ್ದು ಅಂದು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಿವನ ಉಪಾಸನೆಯ ವಿಶೇಷ ದಿನವಾಗಿದೆ. ಕೆಲ ಭಾಗಗಳಲ್ಲಿ ಈ ದಿನದಂದು ವಿಶಿಷ್ಟವಾದ ಆಚರಣೆಗಳ ಮೂಲಕ ಸಂಭ್ರಮಿಸುತ್ತಾರೆ. ಅಂತೆಯೇ ಕುಮಟಾ ತಾಲೂಕಿನ ಮೊರಬದ ಹಳ್ಳೇರ ಸಮಾಜದ ಹೆಂಗಳೆಯರು ಶಿವರಾತ್ರಿಯ ಪ್ರಯುಕ್ತ ಕಳೆದ ಶಿವನ ಆರಾಧನೆಯನ್ನು ಕೈಗೊಂಡು ಉಪವಾಸವಿರುವುದಲ್ಲದೇ ಶೃಂಗರಿಸಿದ ಜೋಕಾಲಿ ಆಡುವ ಮೂಲಕ ಇಡೀ ರಾತ್ರಿ ಜಾಗರಣೆ ಮಾಡುವ ವಿಶಿಷ್ಟವಾದ ಪದ್ಧತಿಯನ್ನು 50 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ಆಮಂತ್ರಣದ ಮೇರೆಗೆ ದಿನಾಂಕ 13/2/18 ರಂದು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಧರ್ಮಪತ್ನಿ ಮೀನಾ ನಾಗರಾಜ ನಾಯಕ ಹಾಗೂ ಅವರ ಸ್ನೇಹಿತರೊಂದಿಗೆ ಆಗಮಿಸಿ ಈ ಆಚರಣೆಗೆ ಚಾಲನೆ ನೀಡಿ ಈ ವಿಶಿಷ್ಟ ಆಚರಣೆಯನ್ನು ವೀಕ್ಷಿಸಿ ಪುಳಕಿತಗೊಂಡರು.
ಈ ಸಂದರ್ಭದಲ್ಲಿ ಅವರು ಅತ್ಯಂತ ಹರ್ಷ ವ್ಯಕ್ತಪಡಿಸುತ್ತಾ ಮಾತನಾಡಿ ಈ ಊರಿನ ಮಹಿಳೆಯರು ಮನೆಗೆ ಬಂದು ಅತ್ಯಂತ ಪ್ರೀತಿ, ವಿಶ್ವಾಸ, ಗೌರವದಿಂದ ಆಮಂತ್ರಣ ನೀಡಿದಾಗ ಸಂತಸದಿಂದ ಒಪ್ಪಿಕೊಂಡಿರುತ್ತೇನೆ. ಸತತ 50 ವರ್ಷಗಳಿಂದ ಅತ್ಯಂತ ಶೃದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಈ ವಿನೂತನ ಆಚರಣೆ ಮನಸ್ಸಿಗೆ ಮುದ ನೀಡಿದ್ದು ಇಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ತಾವುಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದುವರಿಯಲು ಸಹಕರಿಸುತ್ತೇನೆ. ಮುಂದಿನ ವರ್ಷ ಅಚ್ಚುಕಟ್ಟಾದ ಜೋಕಾಲಿಯ ವ್ಯವಸ್ಥೆ ಮಾಡಿಸಿ ಹೆಂಗಳೆಯರಿಗೆ ಅನುಕೂಲತೆ ಒದಗಿಸುತ್ತೇನೆ. ಇಲ್ಲಿಯ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗದಂತೆ ಸಂಪೂರ್ಣ ಸಹಾಯ ಸಹಕಾರ ನೀಡುತ್ತೇನೆ. ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಎಲ್ಲಾ ಕೊರತೆ ನಿವಾರಿಸುವ ಹಾಗೂ ನಿಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸುವ ಇಚ್ಛೆ ಹೊಂದಿದ್ದು ಇದಕ್ಕೆ ಭಗವಂತ ಶಕ್ತಿ ನೀಡಲಿ. ಆತನ ಕೃಪೆ ದೊರೆಯಲಿ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಹೀಗೇ ನಿರಂತರವಾಗಿರಲಿ. ಈ ಸಂಘಟನೆ ಇನ್ನಷ್ಟು ಬಲಗೊಂಡು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಈ ಸಂದರ್ಭದಲ್ಲಿ ಅರುಣ ಕವರಿ ತೊರ್ಕೆ, ಮಹಾಬಲೇಶ್ವರ ನಾಯಕ, ದೇವರಾಯ ಪಟಗಾರ ಸೇರಿದಂತೆ ಹಳ್ಳೇರ ಸಮಾಜದ ಊರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ಕಾಡಯ್ಯ ಸ್ವಾಮೀಜಿ