ಹಿಂದುತ್ವದ ಪ್ರಭಲ ಪ್ರತಿಪಾದನೆ, ಸಾರ್ವಜನಿಕ ಸೇವೆ, ಶಿಕ್ಷಣದ ಆಳ ಜ್ಞಾನ, ನಿರಂತರ ಕಾರ್ಯ ತತ್ಪರತೆಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ಸದಾ ಕ್ರಿಯಾಶೀಲ ವ್ಯಕ್ತಿತ್ವದಿಂದಲೇ ಜನತೆಗೆ ಚಿರಪರಿಚಿತರಾಗಿರುವ ವ್ಯಕ್ತಿ ಕುಮಟಾದ “ಸೂರಜ್ ನಾಯ್ಕ ಸೋನಿ”.
ಹೌದು.. ಹಿಂದೂ ಕಾರ್ಯಕರ್ತರಿಗೆ ನೋವಾದರೆ ಅಥವಾ ಹಿಂದುತ್ವಕ್ಕೆ ಧಕ್ಕೆ ಬರುವ ಘಟನೆಗಳು ಎದುರಾದಾಗಲೆಲ್ಲ ಎಲ್ಲರಿಗಿಂತ ಮುಂದಿದ್ದು ತಮ್ಮ ಗಡಸುತನದಿಂದಲೇ ಎಲ್ಲವನ್ನೂ ನಿಭಾಯಿಸುವ ಸೂರಜ್ ನಾಯ್ಕರವರ ಕಾರ್ಯವೈಖರಿಯೇ ಯುವ ಜನತೆಗೆ ಅಚ್ಚುಮೆಚ್ಚು ಎನ್ನುತ್ತಾರೆ ಸೂರಜ್ ನಾಯ್ಕರ ಆತ್ಮೀಯ ಒಡನಾಡಿಗಳು.
ಪ್ರಾರಂಭದಿಂದ ಆರ್.ಎಸ್.ಎಸ್ ನಲ್ಲಿ ಪಳಗಿರುವ ಸೂರಜ್ ನಾಯ್ಕ ಸೋನಿಯವರು ಆರ್.ಎಸ್.ಎಸ್ ನ ತತ್ವ ಸಿದ್ಧಾಂತಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡವರು. ಹೀಗಾಗಿಯೇ ಇವರು ಹಿಂದುತ್ವಕ್ಕಾಗಿ ಗಟ್ಟಿದನಿ ಎತ್ತಿದವರು, ಕುಮಟಾದಲ್ಲಿ ಹಿಂದುಗಳ ಪಾಲಿಗೆ ಮಾದರಿ ಎನಿಸಿಕೊಳ್ಳುತ್ತಿರುವುದೂ ಅದೇ ಕಾರಣಕ್ಕೆ ಎನ್ನುತ್ತಾರೆ ಇವರ ನಿಕಟವರ್ತಿಗಳು. ಎಂಬಿಎ ಪದವೀದರರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ಬಿಜೆಪಿ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷರಾಗಿ 2010 ರಿಂದ 2013 ರ ವರೆಗೆ ಸೇವೆ ಸಲ್ಲಿಸಿದವರು. ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವವರು. ಡಾ.ಎ ವಿ ಬಾಳಿಗಾ ಕಾಲೇಜಿನ ಬಿಬಿಎ ವಿಭಾಗದ ನಿರ್ದೇಶಕರಾಗಿ ಶೈಕ್ಷಣಿಕ ರಂಗದಲ್ಲಿಯೂ ಸೇವೆ ಸಲ್ಲಿಸಿದ ಅನುಭವಿಯಾಗಿದ್ದಾರೆ. ಕರ್ನಾಟಕ ರಾಜ್ಯದ ಅಮ್ಮೇಚುರ್ ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಗ್ರಾಮೀಣ ಕ್ರೀಡೆ ಹಾಗೂ ಭಾರತದ ಅಗ್ರಗಣ್ಯ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯತತ್ಪರತೆಯನ್ನು ತೋರುತ್ತಿದ್ದಾರೆ.
ಸಮಾಜ ಸೇವೆ ಹಾಗೂ ಯುವ ಒಕ್ಕೂಟಗಳಲ್ಲಿ ತೊಡಗಿಕೊಂಡಿರುವ ಇವರು ಸಕ್ರಿಯ ಕಾರ್ಯಕರ್ತರಾಗಿಯೇ ಸಮಾಜ ಮುಖಕ್ಕೆ ತೋರ್ಪಡಿಸಿಕೊಂಡವರು. ಕುಮಟಾ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾಗಿ, ಯುವ ಶಕ್ತಿ ಮಿತ್ರಮಂಡಳಿ ಕತಗಾಲದ ಅಧ್ಯಕ್ಷರಾಗಿ, ಕುಮಟಾದ ರೋಟರಿ ಸಂಸ್ಥೆಯ ಸಕ್ರಿಯ ಕಾರ್ಯಕರ್ತರು ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುಮಟಾ ಕೊಂಕಣ ರೈಲ್ವೆ ಬಳಕೆದಾರರ ಹೋರಾಟ ಸಮಿತಿಯ ಸಂಚಾಲಕರಾಗಿ ಇವರ ಕಾರ್ಯವೈಖರಿ ಅಮೋಘವಾಗಿದೆ ಎನ್ನುತ್ತಾರೆ ಸುದರ್ಶನ ಶಾನಭಾಗ.
‘ನಮಸ್ಕಾರ ಸೇವಾ ಸಂಸ್ಥೆ’ ಸ್ಥಾಪಿಸಿ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಶಿಕ್ಷಣದ ಕುರಿತಾದ ಉಪನ್ಯಾಸಗಳು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತಾದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಹಿಂದುತ್ವದ ಪ್ರತಿಪಾದನೆಯಿಂದ ಅನೇಕ ಕಷ್ಟ ನಷ್ಟಗಳನ್ನು ಆಘಾತಗಳನ್ನು ಎದುರಿಸಿದರೂ ಅಂಜದೇ ಮುನ್ನುಗ್ಗುವ ಇವರ ಸ್ವಭಾವ ಯುವ ಜನತೆಗೆ ಅಚ್ಚು ಮೆಚ್ಚು ಎನ್ನುತ್ತಾರೆ ಇವರ ಗೆಳೆಯರು.
ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಒಮ್ಮೆ ಎಂ.ಎಲ್.ಎ ಅಭ್ಯರ್ಥಿಯಾಗಿ ಕಣಕ್ಕಿಳಿದು 29,000 ಮತಗಳನ್ನು ಪಡೆದು ಕೆಜೆಪಿ ಬಿಜೆಪಿ ಕಿತ್ತಾಟದ ನಡುವಿನಲ್ಲಿಯೂ ತಮ್ಮ ಜನ ಬೆಂಬಲ ತೋರಿಸಿದ ಕೀರ್ತಿ ಇವರಿಗಿದೆ ಎನ್ನುತ್ತಾರೆ ಬಾಬು ರಾಯ್ಕರ್.
ಕಾಶ್ಮೀರದ ಶ್ರೀನಗರದಲ್ಲಿ ಧ್ವಜ ಹಾರಿಸಲು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ
ಸುನಿಲ್ ಕುಮಾರ್ ಅವರೊಂದಿಗೆ ತೆರಳಿ ಧ್ವಜ ಹಾರಿಸಿ ಬಂದಿದ್ದರಂತೆ . ಈ ಎಲ್ಲ ವಿಷಯಗಳು ಅವರ ಆಪ್ತರಿಗೆ ಹಾಗೂ ಸಮಾಜಕ್ಕೆ ತಿಳಿದಿದೆ .
ಈ ಎಲ್ಲ ಪ್ರಭಲ ಅಂಶಗಳಿಂದ ಗುರುತಿಸಿಕೊಂಡಿರುವ ಸೂರಜ್ ನಾಯ್ಕ ಸೋನಿ ಯುವ ಜನತೆಯ ಆಶಾಕಿರಣವಾಗಿದ್ದಾರೆ. ಯುವ ಜನತೆಗೆ ನೆಚ್ಚಿನ ನಾಯಕರೂ ಆಗಿದ್ದಾರೆ.
ಸೂರಜ್ ನಾಯ್ಕ ಒಬ್ಬ ಸುಶಿಕ್ಷಿತರು ಹಾಗೂ ರಾಜಕೀಯ ಅನುಭವಿಗಳು.ಇವರ ಪತ್ನಿ ವೀಣಾ ನಾಯ್ಕ ರವರು ಜಿಲ್ಲಾ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಕ್ಷೇತ್ರ ಬದಲಾವಣೆಯಾದರೂ ಎರಡನೇ ಅವಧಿಗೂ ಜಿ.ಪ.ಸದಸ್ಯರಾಗಿ ಪುನರಾಯ್ಕೆ ಗೊಳ್ಳುವಲ್ಲಿ ಪತಿ ಸೂರಜ್ ನಾಯ್ಕರವರ ಸಹಕಾರ-ಪ್ರಭಾವಗಳನ್ನು ಪಕ್ಷ ಹಾಗೂ ಜನತೆ ಮರೆಯುವಂತಿಲ್ಲ. ಕುಮಟಾ-ಹೊನ್ನಾವರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವು ಸೂರಜ್ ನಾಯ್ಕ ರವರಿಗಿದೆ. ಸಮಗ್ರ ಅಭಿವೃದ್ಧಿಗೆ ಇವರ ದೂರದರ್ಶಿತ್ವದ ಸ್ಪಷ್ಠ ಕಾರ್ಯಯೋಜನೆ ,ಇವರ ಪಕ್ಷ ನಿಷ್ಠೆ , ಕಾರ್ಯಕರ್ತರನ್ನು ಪ್ರೀತಿಯಿಂದ ಜೊತೆಗುಳಿಸಿಕೊಂಡು ಹುರಿದುಂಬಿಸುತ್ತ ಪಕ್ಷ ಬೆಳೆಸುವ ಇವರ ಪರಿ , ಗುರು ಹಿರಿಯರನ್ನು ಸದಾ ಗೌರವದಿಂದ ಕಾಣುವ ಇವರ ಸದ್ಗುಣಗಳಿಂದಲೇ ಇವರೊಬ್ಬ ಜನಮನದ ನೆಚ್ಚಿನ ‘ಸಮರ್ಥ ಜನ ನಾಯಕ’ ರಲ್ಲೊಬ್ಬರೆನಿಕೊಂಡಿದ್ದಾರೆ.
ವರದಿ : “ಸತ್ವಾಧಾರಾ ನ್ಯೂಸ್”.
ಸಹಕಾರ : ಜಯದೇವ ಬಳಗಂಡಿ.