ಹೊನ್ನಾವರ : ತಾಲ್ಲೂಕಿನ ಮುಗ್ವಾದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ರಿ.) ಹೊನ್ನಾವರ/ಭಟ್ಕಳ ಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳಿಗೆ “ಲಾಭಾಂಶ ವಿತರಣಾ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕುಮಟಾ ಹೊಮ್ಮಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು.ನಂತರ ಚೆಕ್ ವಿತರಿಸಿ ಮಾತನಾಡಿದರು.

RELATED ARTICLES  ರಸ್ತೆಯಲ್ಲಿ ಹರಿಯಿತು ಚರಂಡಿ ನೀರು: ಕುಮಟಾದ ಈ ಅವಾಂತರವನ್ನು ವೀಡಿಯೋದಲ್ಲಿ ನೋಡಿ

ಪರಸ್ಪರವಾಗಿ ಒಪ್ಪಿಕೊಂಡು ಒಂದು ಸಾಮಾನ್ಯ ನಿಧಿಗೆ ಧನ ಸಹಾಯ ಮಾಡಲು ಹಾಗೂ ಪರಸ್ಪರ ಸಹಾಯದ ತಳಹದಿಯ ಮೇಲೆ ತಮ್ಮ ತುರ್ತು ಅವಶ್ಯಕತೆಗಳನ್ನು ಪೂರೈಸಲು, ಕ್ರಮಬದ್ಧವಾಗಿ ಚಿಕ್ಕ ಮೊತ್ತದ ಹಣವನ್ನು ಉಳಿತಾಯ ಮಾಡಲು ಸ್ವಯಂ ಪ್ರೇರಣೆಯಿಂದ ಒಟ್ಟಾಗಿ ಸೇರಿ, ಸಮರೂಪದ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ ಹೊಂದಿರುವ ಕಿರು ಉದ್ದಿಮೆದಾರರ ದಾಖಲಿಸಿದ ಅಥವ ದಾಖಲಾಗದ ಒಂದು ತಂಡದ ಸ್ವ-ಸಹಾಯ ಗುಂಪು ಇದಾಗಿರುತ್ತದೆ. ಆದರೆ ಇದರ ಲಾಭಾಂಶ ಹಂಚುವ ಮೂಲಕ ಉತ್ತಮ‌ಕಾರ್ಯ ಮಾಡುತ್ತಿರುವುದು ಇದರ ಹೆಗ್ಗಳಿಕೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಮೇಯಲು ಹೋಗಿದ್ದ ಕುರಿಗಳ ಮೇಲೆ ಚಿರತೆ ದಾಳಿ

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ‌ ಶಾಸ್ರಿ,ಪ್ರಗತಿ ಬಂಧು ಸ್ವ ಸಹಾಯ ಸಂಘಟನೆ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.