ಉತ್ತರಕನ್ನಡ : ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಬಿಜೆಪಿ ನಾಯಕ ಅನಂತಕುಮಾರ್​​​ ಹೆಗಡೆ ರಾಹುಲ್​​​ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್​​​ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ಲೇವಡಿ ಮಾಡಿದ ಹೆಗಡೆ ರಾಹುಲ್​​ ಗಾಂಧಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಿದಷ್ಟು ಒಳ್ಳೆಯದು ಏಕೆಂದರೆ ರಾಜ್ಯದ ಜನ ಹೆಚ್ಚು ಮನೋರಂಜನೆಯನ್ನ ಇಷ್ಟ ಪಡುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್​​​ ಯುವರಾಜನ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹಾಗೆ ರಾಜ್ಯದಲ್ಲಿ ಬೆಜೆಪಿ ಗಟ್ಟಿಯಾಗಲು ಸಹಕಾರಿಯಾಗಲಿದೆ ಎಂದರು.

RELATED ARTICLES  ರಸ್ತೆ ಅಪಘಾತ : ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿಯವರಿಗೆ ಪೆಟ್ಟು

ಮುಂದುವರೆದು ಕಾಂಗ್ರೆಸ್​​​ ವಿರುದ್ಧ ಗುಡುಗಿದ ಅನಂತಕುಮಾರ್​​​ ಹೆಗಡೆ ಸಂಘ ಪರಿವಾದ ಪರಿಣಾಮ ಕಾಂಗ್ರೆಸ್​​​ ಡೋಂಗಿಗಾದರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ರಾಷ್ಟ್ರೀಯತೆಯ ಪರಿಚಯ ಇಲ್ಲದವರು ತೊರಿಕೆಗಾದರು ಹಿಂದುತ್ವದ ಮಾತನಾಡುತ್ತಿದ್ದಾರೆ, ಇದು ಬರಿ ಮಾತಾಗದೇ ಆಚರಣೆಗೆ ತಂದರೆ ಒಳ್ಳೆಯದು ಎಂದು ಹೇಳಿದರು.

RELATED ARTICLES  ಆ್ಯಸಿಡ್ ಚೆಲ್ಲಿ ಮೂವರಿಗೆ ಗಾಯ : ಕಾರವಾರದಲ್ಲಿ ದುರ್ಘಟನೆ.

ಇನ್ನು ರಾಹುಲ್​​​ಗಾಂಧಿ ಬ್ರಾಹ್ಮಣ ಎಂದು ಹೇಳುತ್ತಿದ್ದಾರೆ ಎಂದು ಪತ್ರಕರ್ತರ ಮಾತಿಗೆ ರಾಹುಲ್​​​ ಗಾಂಧಿ ರಕ್ತವನ್ನ ಸಿದ್ದರಾಮಯ್ಯ ಪರೀಕ್ಷೆ ಮಾಡಿಸಿ, ಹೇಳಬೇಕು ಎಂದು ಪ್ರತಿಕ್ರಿಯಿಸದರು.