ಶಿರಸಿ: ಹಿರಿಯ ಸಾಹಿತಿ ಆರ್.ಪಿ.ಹೆಗಡೆ ಸೂಳಗಾರ್ ಅವರು ಬರೆದ ಬಾಕಿ ಕೊಡೋದಿಲ್ಲ ಎಂಬ ನಾಟಕ ಪ್ರದರ್ಶನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಫೆ. 16ರ ಸಂಜೆ 6ಕ್ಕೆ ಪ್ರದರ್ಶನ ಆಗಲಿದೆ.

ಸಿದ್ದಾಪುರದ ಒಡ್ಡೋಲಗ ರಂಗ ಪರ್ಯಟನದ ತಂಡ ಪ್ರದರ್ಶಿಸಲಿದ್ದು, ನಿರ್ದೇಶನವನ್ನು ಗಣಪತಿ ಹಿತ್ಲಕೈ ಮಾಡಿದ್ದಾರೆ. ರಂಗದಲ್ಲಿ ಗಣಪತಿ ಹಿತ್ಲಕೈ, ಶ್ಯಾಮಲಾ ಟಿ.ಶಿರಸಿ, ಅನಿತಾ ನಾಯ್ಕ, ದಿವಾಕರ ಬಡಗಿ, ಮಂಜುನಾಥ ನಾಯ್ಕ, ಕಾರ್ತಿಕ ಹರಪನಳ್ಳಿ ಕಾಣಿಸಿಕೊಳ್ಳಲಿದ್ದಾರೆ.

RELATED ARTICLES  ಗ್ರಾಹಕ-ಸಂವಾದ ಸಭೆ ನಾಳೆ

ರಂಗ ಕೃತಿ ನಿರ್ಮಾಣದಲ್ಲಿ ಚಿದಂಬರ ಪೂಜಾರಿ, ವಸ್ತ್ರ ವಿನ್ಯಾಸದಲ್ಲಿ ಗುರುಮೂರ್ತಿ ವರದಮೂಲ, ಬೆಳಕು ಸಂಯೋಜನೆ ಗಣಪತಿ ಒಡ್ಡಿನಗದ್ದೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ಸೂರ್ಯನಾರಾಯಣ ಸಂಸ್ಥೆ, ಯುವಕ, ಮಹಿಳಾ ಮಂಡಳ, ಗೆಳೆಯರ ಬಳಗ ಸಹಕಾರ ನೀಡಿದೆ.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಸ್ಪರ್ಧೆ : ಭಾಗವಹಿಸಲು ಆಹ್ವಾನ.