ಹೊನ್ನಾವರ:ದಿ. 17ರಂದು ಶನಿವಾರ ಜೇನುಸೊಸೈಟಿ ಆವಾರದಲ್ಲಿ ಜಿಲ್ಲೆಯ ಸಾವಯವ ಕೃಷಿ ಉತ್ಪನ್ನ ಮತ್ತು ಗೃಹ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಮಳಿಗೆ ಆರಂಭವಾಗಲಿದೆ ಮತ್ತು ಒಂದು ದಿನದ ಉತ್ಪನ್ನ ಪ್ರದರ್ಶನವನ್ನು ಉತ್ಪಾದಕರು ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 11ಗಂಟೆಗೆ ಶಾಸಕ ಮಂಕಾಳು ವೈದ್ಯ ಉದ್ಘಾಟಿಸುವರು. ಜಿಲ್ಲೆಯ ಹಿರಿಯ ಸಮಾಜ ಸೇವಕ ಮುರಳೀಧರ ಪ್ರಭು ಕುಮಟಾ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಕೃಷಿ ಮತ್ತು ಸಾವಯವ ಇಲಾಖೆಯ ಡಾ. ಹೊನ್ನಪ್ಪ ಗೌಡ, ನಟರಾಜ, ಪದ್ಮಜಾ ನಾಯಕ, ಜಯರಾಮ ಹೆಬ್ಬಾರ, ಮಹಾಬಲೇಶ್ವರ ಹೆಗಡೆ, ಜಿ.ಆರ್. ಹೆಗಡೆ, ಜೇನು ಸಂಘದ ಅಧ್ಯಕ್ಷ ಶಂಕರ ಹೆಗಡೆ, ಶ್ರೀಧರ ಹೆಗಡೆ, ಜಿಲ್ಲಾ ಪ್ರಾಂತೀಯ ಸಾವಯವ ಕೃಷಿ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಪಾಲ್ಗೊಳ್ಳುವರು.