ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನ ಪ್ರಮಾಣಿಕರಾಗಿದ್ದಾರೆ ಎನ್ನುವುದಕ್ಕೆ ಇಂದು ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಲಾಭಂಶ ವಿತರಣೆಯೇ ಸಾಕ್ಷಿಯಾಗಿದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.
ಅವರು ಬುಧವಾರ ನಗರದ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಣಮ ದೇವಸ್ಥಾನದ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಲಾಭಂಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರಷರಿಗಿಂತ ಮಹಿಳೆಯರು ಹೆಚ್ಚು ಪ್ರಮಾಣಿಕರಾಗಿರುತ್ತಾರೆ. ಅವರು ಪ್ರತಿಯೊಂದನ್ನು ಲೆಕ್ಕವಿಟ್ಟುಕೊಂಡು ವ್ಯವಹರಿಸುತ್ತಾರೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಂದು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸ್ವವಾಲಂಬಿಗಳಾಗುತ್ತಿದ್ದಾರೆ. ಮಹಿಳೆಯರು ಸ್ವವಾಲಂಬಿಗಳಾದರೆ ಮಕ್ಕಳು ಹೆಚ್ಚೆಚ್ಚು ಶಿಕ್ಷಿತರಾಗುತ್ತಾರೆ. ಶಿಕ್ಷಣದಿಂದಾಗಿ ದೇಶದ ಅಭಿವೃದ್ಧಿಯಾಗುತ್ತದೆ ಎಂದರು. ಮಕ್ಕಳು ಸಮಾಜದ ಆಸ್ತಿಯಿದ್ದಂತೆ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಮಾತೆಯರ ಕರ್ತವ್ಯವಾಗಿದೆ ಎಂದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಅವರು ಕರೆ ನೀಡಿದರು.
ಭಟ್ಕಳ-ಹೊನ್ನಾವರ ಯೋಜನಾಧಿಕಾರಿ ಎಂ.ಎಸ್. ಈಶ್ವರ ಪ್ರಸ್ತಾವಿಕವಾಗಿ ಮಾತನಾಡಿ, ಸಂಘದ ಸದಸ್ಯರು ತಾವು ಪಡೆದ ಸಾಲವನ್ನು ಶೇ.100ರಷ್ಟು ಮರು ಪಾವತಿ ಮಾಡುತ್ತಿದ್ದು 2015,16,17ನೇ ಸಾಲಿನ ಪ್ರಗತಿ ಬಂಧು ಸ್ವ ಸಹಾಯ ಸಂಘಗಳಿಗೆ 1 ಕೋ. 49ಲಕ್ಷ ಲಾಭಂಶವನ್ನು ಸಂಘಗಳ ಸದಸ್ಯರು ಒಟ್ಟು ಸಾಲದ ವ್ಯವಹಾರದ ಮೇಲೆ ಶೆ.1.35 ರ ಪ್ರಮಾಣದಲ್ಲಿ ಲಾಭಾಂಶ ನೀಡಲಾಗುತ್ತಿದೆ ಎಂದರು. ಸಂಘದ ಸದಸ್ಯರು ಕೃಷಿ, ಅಡುಗೆ ಅನಿಲ, ಮಹಳಾ ಜ್ಞಾನವಿಕಾಸ,ಅಧ್ಯಯನ ಪ್ರವಾಸ ಸಸಿ ಗಿಡ ವಿತರಣೆ ಸೋಲಾರ ಉಪಕರಣ, ಗೋಬರ್ ಗ್ಯಾಸ್, ಧಾರ್ಮಿಕ ಕಾರ್ಯಕ್ರಮಗಳು, ಶಿಕ್ಷಣ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಆಸರಕೇರಿ ವೆಂಕಟರಮಣ ದೇವಸ್ಥಾನ ಕಮಿಟಿಯ ಅಧ್ಯಕ್ಷ ಎಂ.ಆರ್.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉ.ಕ. ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಎಸ್.ಕೆ.ಡಿ.ಆರ್.ಪಿ ನಿರ್ದೇಶಕ ಲಕ್ಷ್ಮಣ ಎಂ, ಉ.ಕ.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶ್ರೀಧರ್ ನಾಯ್ಕ, ಎಸ್.ಬಿ.ಐ ಶಾಖಾ ಪ್ರಬಂಧಕ ಅರುಣ್ ರಾವ್, ಪುರಸಭೆ ಸದಸ್ಯ ವೆಂಕಟೇಶ್ ನಾಯ್ಕ, ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲ್ ನಾಯ್ಕ, ನಾಗರಾಜ್ ಕಂಚುಗಾರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರೇಷ್ಮ ಖಾರ್ವಿ ಹಾಘೂ ಭರತ್ ಕಾರ್ಯಕ್ರಮ ನಿರೂಪಿಸಿದರು.