ಕುಮಟಾ : ತಾಲೂಕಿನ ಗಂಗಾವಳಿ, ತಡಡಿ, ಅಘನಾಶಿನಿ, ಕುಮಟಾ ರಸ್ತೆಗೆ ಕಾಗಾಲದಲ್ಲಿ ಸಿ.ಎಮ್. ಜಿ.ಆರ್.ವಾಯ್. ಯೋಜನೆಯಡಿ ಅಂದಾಜು 70 ಲಕ್ಷ ಅನುದಾನದ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ದೊರೆತಿದೆ.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ದೀವಗಿಯಲ್ಲಿ ಮೃತ ಬಾಲಕನ ಶವ ಪತ್ತೆ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾಲೂಕಿನ ಗಂಗಾವಳಿ, ತಡಡಿ, ಅಘನಾಶಿನಿ, ಕುಮಟಾ ರಸ್ತೆಗೆ ಕಾಗಾಲದಲ್ಲಿ ಸಿ.ಎಮ್. ಜಿ.ಆರ್.ವಾಯ್. ಯೋಜನೆಯಡಿ ಅಂದಾಜು 70 ಲಕ್ಷ ಅನುದಾನದ ರಸ್ತೆ ಸುಧಾರಣಾ ಕಾಮಗಾರಿಗೆ ಪ್ರಕ್ರಿಯೆ ನಡೆಯಲಿದೆ. ಜನತೆಗೆ ಇದರ ಸದುಪಯೋಗವಾಗಲಿದೆ ಎಂದರು.

RELATED ARTICLES  ಕಡು ಬಡವರ ಮನೆಯೂ ಹೊಗೆ ಮುಕ್ತವಾಗಬೇಕು : ನಾಗರಾಜ ನಾಯಕ

ಈ ಸಂದರ್ಭದಲ್ಲಿ ಕಾಗಾಲ ಪಂ.ಅಧ್ಯಕ್ಷರಾದ ಶ್ರೀಮತಿ ದೀಪಾ ಆಗೇರ್, ಪ್ರಮುಖರಾದ ವಿ, ಎಲ್, ನಾಯ್ಕ, ಶಶಿಕಾಂತ ನಾಯ್ಕ, ಹನುಮಂತ ಪಟಗಾರ, ಶಿವರಾಮ ಪಟಗಾರ ಹಾಗೂ ಸುರೇಖಾ ವಾಲೇಕರ ಹಾಜರಿದ್ದರು.