ಶ್ರೀ ರಾಮಾಂಜನೇಯ ಯುವಕ ಸಂಘ, ಶ್ರೀ ಜಟಗೇಶ್ವರ ಕ್ರೀಡಾ ಸಾಂಸ್ಕøತಿಕ ಸಂಘ ಕೆಳಗಿನ ಕಂದವಳ್ಳಿ ಹಾಗೂ ಕಬಡ್ಡಿ ಅಮೆಚ್ಯೂರ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ದ್ವಿತೀಯ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಕೆಳಗಿನ ಕಂದವಳ್ಳಿಯ ಶ್ರೀ ರಾಮಾಂಜನೇಯ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ರಾಜ್ಯ ಕಬಡ್ಡಿ ಅಸೋಸಿಯೇಷನ್ ನ ಉಪಾಧ್ಯಕ್ಷ ಸೂರಜ ನಾಯ್ಕ ಸೋನಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ದ್ವಿತೀಯ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲೂ ಇಂತಹ ಪಂದ್ಯಾವಳಿಗೆ ತಮ್ಮ ಸಂಪೂರ್ಣ ಸಹಕಾರ ಇರುವುದಾಗಿ ತಿಳಿಸಿದರು.

RELATED ARTICLES  ಕನ್ನಡದ ಮೊದಲ ರಾಜಧಾನಿ ಚಂದ್ರವಳ್ಳಿಯೆಂದು ಬಿಂಬಿಸುವ ಇತಿಹಾಸ: ಅಕಾಡೆಮಿ ಅಧ್ಯಕ್ಷರ ಹೇಳಿಕೆಗೆ ಅರವಿಂದ ಕರ್ಕಿಕೋಡಿ ಖಂಡನೆ

ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕಬಡ್ಡಿ ನಮ್ಮ ದೇಶೀಯ ಕ್ರೀಡೆಯಾಗಿದೆ. ಇಂತಹ ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಆಸಕ್ತಿ ಬೆಳೆಸಬೇಕು. ಆಗ ಮಾತ್ರ ಮುಂದಿನ ಪೀಳಿಗೆಯವರು ಈ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಕಬಡ್ಡಿ ಕ್ರೀಡೆಯು ಅತಿ ಚುರುಕಿನಿಂದ, ಏಕಾಗ್ರತೆಯಿಂದ ಆಡುವ ಆಟವಾಗಿದೆ. ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಕಾಯ ಹೊಂದಲು ಸಾಧ್ಯ. ಸದೃಢವಾದ ಮನಸ್ಸಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಗಳ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

RELATED ARTICLES  ಕರಾವಳಿ ಭಾಗಕ್ಕೆ ರೆಡ್ ಅಲರ್ಟ : ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.

ಯುವ ಮುಖಂಡ ರವಿಕುಮಾರ ಶೆಟ್ಟಿ ಅವರು ಅಂಕಣ ಉದ್ಘಾಟಿಸಿ ಮಾತನಾಡಿ ಶುಭ ಕೋರಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಬ್ಬೆ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಶೋಭಾ ಗೋಪಾಲ ನಾಯ್ಕ ಅವರು ವಹಿಸಿದ್ದರು.

ಇದೇ ವೇದಿಕೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ತೇಜಸ್ವಿನಿ ಎಸ್. ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಷ್ಣು ಪಟಗಾರ ದಿವಳ್ಳಿ, ಗಿರಿಯಾ ಗೌಡ, ಶ್ರೀಮತಿ ಗೋಪಿ ಮುಕ್ರಿ, ಧರ್ಮದರ್ಶಿಗಳಾದ ಶ್ರೀಪಾದ ನಾಯ್ಕ, ವಿದ್ಯಾಧರ ಅಡಿ, ಚಂದ್ರಕಾಂತ ಟಿ. ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.