ಕುಮಟಾ: ತಾಲೂಕಿನ ಕಡ್ಲೆ ಬೀಚ್ ನಲ್ಲಿ ಪ್ರತೀವರ್ಷದಂತೆ ಈ ವರ್ಷವೂ ಶಿವರಾತ್ರಿ ದಿನದಂದು ಮರಳು ಶಿಲ್ಪ‌ನಿರ್ಮಿಸಿ ಕಾರ್ಯಕ್ರಮ ನಡೆಸಲಾಯಿತು.

ರಾತ್ರಿ ನಡೆದ ಶಿವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀ. ಎಂ ಜಿ ಭಟ್ ಮಾತನಾಡಿ, ಶಿವರಾತ್ರಿ ಆಚರಣೆಯ ಮಹತ್ವವನ್ನು ತಿಳಿಸಿದರು . ಶಿವರಾತ್ರಿ ವಿಶೇಷ ದಿನವಷ್ಟೇ ಅಲ್ಲ ಎಲ್ಲರೂ ಸೇರಿ ಒಟ್ಟಿಗೆ ಆಚರಿಸುವ ರಾತ್ರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಹಾಗೂ ಇಂತಹ ಕಾರ್ಯಕ್ರಮ ರೂಪಿಸಿದ ಯುವ ಜನರನ್ನು ಅವರು ಶ್ಲಾಘಿಸಿದರು.

RELATED ARTICLES  ಕುಮಟಾದಲ್ಲಿ ಹಾಲಕ್ಕಿ ಸಮಾಜದ ಸಭಾಭವನ ನಿರ್ಮಿಸುವ ಕುರಿತು ನಾಳೆ ಸಭೆ!

ಅಧ್ಯರಾಗಿ ಸೂರಜ್ ನಾಯ್ಕ ಹಾಗೂ ಅತಿಥಿಗಳಾಗಿ ನಾಗರಾಜ್ ನಾಯಕ್, ವೆಂಕಟ್ರಮಣ ಹೆಗಡೆ , ವೆಂಕಟ್ರಮಣ ಕೌರಿ , ಮಾರುತಿ ಶೆಟ್ಟಿ , ಸೀತಾರಾಮ್ ಗುನಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಲುಡೋ ಆಡುವಾಗ ಲುಡೋ ಕಾಯಿ ನುಂಗಿದ ಬಾಲಕ