ಹೊನ್ನಾವರ: ಮೊಬೈಲುಗಳು ಆಟದ ಕಣಗಳಾಗುತ್ತ ಶಾಲೆಯ ಮೈದಾನಗಳು ಭಣಗುಡುತ್ತಿವೆ. ಗ್ಯಾದರಿಂಗ್ ಅನ್ನುವ ಶಬ್ದವೇ ಶಾಲಾ ದಿನಚರಿಯಿಂದ ಮಾಯವಾಗುತ್ತಿದೆ. ಇರುವ ಕೆಲವೂ ಭಾಷಣಗಳಿಗೆ ಸೀಮಿತವಾಗುತ್ತಿವೆ. ಈ ನಡುವೆಯೂ ಸಾಂಸ್ಕøತಿಕವಾಗಿ ಮಕ್ಕಳನ್ನು ಬೆಳೆಸುವ ಆಸಕ್ತಿಯ ಹಲವಾರು ಶಿಕ್ಷಕರಿದ್ದಾರೆ. ತಮ್ಮ ಮಿತಿಯಲ್ಲಿಯೇ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದರೆ. ಎಲ್ಲ ಸಿದ್ಧವಾದ ಮೇಲೆ ಪ್ರದರ್ಶನದ ಹೊತ್ತಿಗೆ ಅನಿವಾರ್ಯವಾಗಿ ಅವರು ವೃತ್ತಿಪರ ವಸ್ತ್ರ ವಿನ್ಯಾಸಕಾರರನ್ನೋ, ಪ್ರಸಾದನ ತಜ್ಞರನ್ನೋ ಅವಲಂಬಿಸಬೇಕಾಗುತ್ತದೆ. ಹಲವು ಬಾರಿ ಅವರ ಅಲಭ್ಯತೆಯಲ್ಲಿ ಪ್ರದರ್ಶನ ಸೊರಗುತ್ತದೆ. ಹಾಗಾಗಿ ಶಿಕ್ಷಕರಿಗೆ ವಸ್ತ್ರವಿನ್ಯಾಸ, ಪ್ರಸಾದನದ ಮೂಲ ಜ್ಞಾನ ನೀಡುವುದಕ್ಕಾಗಿ ‘ಚಿಂತನ ರಂಗ ಅಧ್ಯಯನ ಕೇಂದ್ರ ಒಂದು ದಿನದ ಶಿಬಿರ ನಡೆಸುತ್ತಿದೆ ಎಂದು ರಂಗ ನಿರ್ದೇಶಕ ಕಿರಣ್ ಭಟ್ ನುಡಿದರು. ಅವರು ಹೊನ್ನಾವರ ಕೆರೆಕೋಣದ ಸಹಯಾನದಲ್ಲಿ ನಡೆದ ವಸ್ತ್ರ ವಿನ್ಯಾಸ ಮತ್ತು ಪ್ರಸಾಧನ ತರಬೇತಿಯ ಉದ್ಘಾಟನೆಯಲ್ಲಿ ಮಾತನಾಡಿದರು.

RELATED ARTICLES  ಸಮುದಾಯಭವನದ ಜಾಗ ಖರೀದಿಗೆ 5 ಲಕ್ಷ ರೂ. ನೀಡಿದ ಶಾಸಕ ದಿನಕರ ಶೆಟ್ಟಿ.

ಶಿಕ್ಷಕರೆಲ್ಲ ಮಕ್ಕಳಿಗೆ ಬಣ್ಣ ಬಳಿಯುವ ಮತ್ತು ಮುಖವಾಡ ತೊಡಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಲಾಯಿತು. ಡಾ.ವಿಠ್ಠಲ ಭಂಢಾರಿ ಮಾತನಾಡಿ ಸೌಹಾರ್ದಯುತವಾದ ಸಾಂಸ್ಕøತಿಕ ವಾತಾವರಣ ನಿರ್ಮಿಸುವ ಮತ್ತು ಜೀವ ಪರವಾದ ಆಶಯಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಾಲೆಗಳಲ್ಲಿ ಸ್ವತಂತ್ರವಾಗಿ ಪ್ರದರ್ಶನ ಏರ್ಪಡಿಸಲು ಮತ್ತು, ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಲು ಈ ಶಿಬಿರ ಸಹಕಾರಿಯಾಗಲಿ ಎಂದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ ಪೂ ಶ್ರೀ ಶ್ರೀ ಸದಾನಂದ ಸ್ವಾಮಿಗಳು

ವೇದಿಕೆಯಲ್ಲಿ ದಾಮೋದರನಾಯ್ಕ, ಮಾಸ್ತಿಗೌಡ, ಕ್ರಷ್ಣಅಂಬಿಗ, ವಿಮಲಾಅಂಬಿಗ, ಗಣೇಶಭಂಢಾರಿ, ಚಂದ್ರು ಉಡುಪಿ ಉಪಸ್ಥಿತರಿದ್ದರು. ಜನಾರ್ಧನ ಹರನೀರು ವಂದಿಸಿದರು. ವಿದ್ಯಾಧರ ಕಡತೋಕ ನಿರ್ವಹಿಸಿದರು. ನಂತರದಲ್ಲಿ ದಾಮೋದರ ನಾಯ್ಕ ಮತ್ತು ಚಂದ್ರು ಉಡುಪಿ ವಿವಿಧ ಬಗೆಯ ವಸ್ತ್ರ ವಿನ್ಯಾಸ ಮತ್ತು ಪ್ರಸಾಧನಗಳ ಪ್ರಾತ್ಯಕ್ಷಿಕೆ ನೀಡಿ ಚರ್ಚಿಸಿದರು. ಶಿಕ್ಷಕರು ಕೂಡ ವಿವಿಧ ಮುಖವರ್ಣಿಕೆಯ ವಿನ್ಯಾಸಗಳನ್ನು ಪ್ರಾಯೋಗಿಕವಾಗಿ ಕಂಡುಕೊಂಡರು.