ಕಾರವಾರ: ‘ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿರುವ ಆಂಜನೇಯ ಸ್ವಾಮಿ ಮೂರ್ತಿಯ ಹಿಂಭಾಗದಲ್ಲಿ ಅಲೆ ತಡೆಗೋಡೆ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಅಗತ್ಯವಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ನಡೆಯು ತ್ತಿದ್ದ ಕಾಮಗಾರಿಯನ್ನು ತಡೆ ದು ಪ್ರತಿಭಟನೆ ನಡೆಸುತ್ತಿದ್ದ ನೂರಾರು ಮೀನುಗಾರರ ಜತೆ ಅವರು ಚರ್ಚಿಸಿ ಸುದ್ದಿಗಾರರ ಜತೆ ಮಾತನಾಡಿದರು.

ಇಲ್ಲಿ ತಡೆಗೋಡೆ ನಿರ್ಮಾಣವಾದರೆ ಮೀನುಗಾರರಿಗೆ ತೊಂದರೆಯಾಗುತ್ತದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಆಯೋಜಿಸಬೇಕು. ಸಾವಿರಾರು ಕುಟುಂಬಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರವಾರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರು ಅಂದಾಜು ಎರಡು ಎಕರೆ ಪ್ರದೇಶದಲ್ಲಿ ಏಂಡಿ ಬಲೆ ಹರಡಿರುತ್ತಾರೆ. ಇದೇ ಜಾಗದಲ್ಲಿ ಬಂದರು ಇಲಾಖೆಯಿಂದ 48 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ನೂರಾರು ಮೀಟರ್ ಉದ್ದವಿರುವ ಕಡಲಕಿನಾ ರೆಯಲ್ಲಿ ಇಷ್ಟು ಸಣ್ಣ ತಡೆಗೋಡೆಯಿಂದ ಅಲೆಗಳನ್ನು ಹೇಗೆ ತಡೆಯಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

RELATED ARTICLES  ಸಹಸ್ರಾರು ಭಕ್ತರ ಆರಾಧ್ಯ ಕ್ಷೇತ್ರ ಬಾಡದ ಕಾಂಚಿಕಾಂಬಾ ಸನ್ನಿಧಿಯಲ್ಲಿ ನವರಾತ್ರಿ ವೈಭವ : ನವದಿನ ಪೂಜೆ ಪುನಸ್ಕಾರ

ಮಳೆಗಾಲದಲ್ಲಿ ಸಮುದ್ರವು ಸುಮಾರು 20 ಮೀಟರ್‌ಗಳಷ್ಟು ಮುಂದಕ್ಕೆ ಬರುತ್ತದೆ. ಆಗ ಈ ರೀತಿಯ ತಡೆಗೋಡೆಯಿದ್ದರೆ ಮೀನುಗಾರರು ದೋಣಿಗಳನ್ನು ತರುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲಿ ಮೀನುಗಾರರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಗಮನಕ್ಕೂ ತರಲಾಗುವುದು’ ಎಂದು ಹೇಳಿದರು.

ಶಾಸಕ ಸತೀಶ್ ಸೈಲ್ ಅವರು ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ನಾಮಫಲಕ ಅಳವಡಿಸಲು ಸೂಚಿಸಿದ್ದಾರೆ ಎಂದು ಮೀನುಗಾರರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್, ‘ಶಾಸಕರೇನು ಶಾಶ್ವತವಾ ಗಿರುತ್ತಾರಾ? ಇಂತಹ ಕಾಮಗಾರಿಗಳಿಗೆ ಜನರ ಹಣ ಬಳಕೆಯಾಗುತ್ತದೆ. ಅದನ್ನು ಜನಪ್ರತಿನಿಧಿಗಳು ಅನುಷ್ಠಾನ ಮಾಡಬೇಕು. ಭಾವಚಿತ್ರ ಅಳವಡಿಸುವ ಪದ್ಧತಿ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES  ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಚಗ್ರಹ ಹಿರೇಮಠ ಸ್ವಾಮಿಗಳು

ಇದೇ ವೇಳೆ ಸ್ಥಳಕ್ಕೆ ಬಂದ ಬಂದರು ಇಲಾಖೆ ಎಂಜಿನಿಯರ್ ಮಂಜು ಮಾಹಿತಿ ನೀಡಿ, ‘ಕಲ್ಲುಗಳನ್ನು ಬಳಸಿ ನಿರ್ಮಿಸುವ ತಡೆಗೋಡೆಗೆ ₹ 15 ಲಕ್ಷ ವೆಚ್ಚವಾಗಲಿದೆ. ನೆಲದ ಮಟ್ಟದಲ್ಲೇ ಇರುವ ಕಾರಣ ಮೀನುಗಾರರಿಗೆ ತೊಂದರೆಯಾಗದು’ ಎಂದು ತಿಳಿಸಿದರು. ಆದರೆ, ಅವರನ್ನೂ ಮೀನುಗಾರರು ತರಾಟೆಗೆ ತೆಗೆದುಕೊಂಡರು.

ನಗರಸಭೆ ಸದಸ್ಯ ರವೀಂದ್ರ ಬನಾವಳಿ ಮಾತನಾಡಿ, ‘ಗೋವಾ, ಮುಂಬೈನಂತಹ ದೊಡ್ಡ ಕಡಲ ತೀರಗಳಲ್ಲೇ ಈ ರೀತಿ ಅಲೆ ತಡೆಗೋಡೆ ನಿರ್ಮಿಸಿಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ ಸ್ಥಳೀಯ ಮೀನುಗಾರರನ್ನು ನಾಶ ಮಾಡಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಕೃಷ್ಣ ಶ್ರೀರಾಮ್, ಸುಮಿತ್ರಾ ರಮೇಶ್ ಕುಡ್ತಳಕರ್, ಶೀಲಾ ತುಕಾರಾಂ, ಕುಸುಮಾ ಅವರೂ ಇದ್ದರು.