ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀರ್ಪು ಪ್ರಕಟವಾಗಿದ್ದು, ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ತೀರ್ಪನ್ನು ನೀಡಿದ್ದು, ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಕೆ ಮಾಡಿದೆ. ಆ ಮೂಲಕ ಕರ್ನಾಟಕಕ್ಕೆ ಈ ಹಿಂದೆ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡಲಾಗಿದೆ. ಅಂತೆಯೇ ನದಿ ನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, 1924ರ ಒಪ್ಪಂದ ಕಾನೂನು ಬದ್ದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

RELATED ARTICLES  ವಿಮಾನ ಅಪಘಾತ: 110 ಜನರ ದುರ್ಮರಣ

ಇದೇ ವೇಳೆ ಪುದುಚೇರಿ ಮತ್ತು ಕೇರಳಕ್ಕೆ ಮಾಡಿರುವ ನೀರು ಹಂಚಿಕೆಯನ್ನು ಎತ್ತಿ ಹಿಡಿದ ಕೋರ್ಟ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಳು ಸಮಾನ ಹಂಚಿಕೆ ತತ್ವ ಪರಿಪಾಲಿಸಹಬೇಕು ಎಂದು ಸಲಹೆ ನೀಡಿದೆ. ಅಂತೆಯೇ ನದಿಗಳು ರಾಷ್ಟ್ರೀಯ ಸಂಪತ್ತುಗಳಾಗಿದ್ದು, ಯಾವುದೇ ರಾಜ್ಯ ಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ಉಭಯ ರಾಜ್ಯಗಳಿಗೆ ಕಿವಿಮಾತು ಹೇಳಿದೆ.

ಅಂತೆಯೇ ತನ್ನ ತೀರ್ಪಿನಲ್ಲಿ ಬ್ರಿಟೀಷ್ ಕಾಲದ ಒಪ್ಪಂದಗಳ ಕುರಿತು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, 1892, 1924ರ ಎರಡೂ ಒಪ್ಪಂದಗಳು ಸಿಂಧುವಾಗಿದ್ದು, 1924ರ ಒಪ್ಪಂದ ಕಾನೂನು ಬದ್ಧಬದ್ಧವಾಗಿದೆ ಎಂದು ಕೋರ್ಟ್ ಹೇಳಿದೆ. ಅಂತೆಯೇ ಈ ಒಪ್ಪಂದಗಳು 50 ವರ್ಷಗಳ ಬಳಿಕ ರದ್ದಾಗಲಿದ್ದು, 0ನ್ಯಾಯಾಧಿಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದು ಹೇಳಿದೆ. ಅಂತೆಯೇ 15 ವರ್ಷಗಳ ಬಳಿಕ ನ್ಯಾಯಾಧಿಕರಣದ ತೀರ್ಪನ್ನು ಮರುಪರಿಶೀಲನೆ ಮಾಡಬಹುದಾಗಿದೆ.

RELATED ARTICLES  ನಿನ್ನೆ ಸಮಾಧಾನ ನೀಡಿ, ಇಂದು ಮತ್ತೆ ಏರಿದ ಕೊರೋನಾ

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು.