ಕುಮಟಾ: ಶಿವರಾತ್ರಿ ಉತ್ಸವ ಸಮಿತಿ ಕಡ್ಲೆ ಇವರ ಆಶ್ರಯದಲ್ಲಿ ಶಿವರಾತ್ರಿಯ ಪ್ರಯುಕ್ತ 100 ಅಡಿ ವರ್ಣರಂಜಿತ ಅರ್ಧ ನಾರೀಶ್ವರ ಮರಳಿನ ಕಳಾಕೃತಿಯನ್ನು ರೂಪಿಸುವುದರೊಂದಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಶಿವರಾತ್ರಿಯಂದು ಉಪವಾಸ ಹಾಗೂ ಜಾಗರಣೆಯ ಮೂಲಕ ಶಿವನನ್ನು ಸ್ಮರಿಸುವ ವಿಶೇಷ ದಿನವಾಗಿದೆ. ಅಂತೆಯೇ ಈ ಗ್ರಾಮದ ಸಮುದ್ರ ತೀರದಲ್ಲಿ ಮರಳಿನಿಂದ 100 ಅಡಿ ಎತ್ತರದ ವರ್ಣರಂಜಿತ ಅರ್ಧನಾರೀಶ್ವರನ ಮೂರ್ತಿಯನ್ನು ರೂಪಿಸಿದ ವೆಂಕಟ್ರಮಣ ಆಚಾರ್ಯ ಇವರ ಕೈಚಳಕವನ್ನು ಮನಸಾರೆ ಹೊಗಳಿದರು. ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಸ್ಥಳೀಯ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘಟಕರು ಮಾಡಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ದರ್ಂವೇ ರಕ್ಷಿಸುತ್ತದೆ. ಹಾಗಾಗಿ ನಾವೆಲ್ಲ ನಮ್ಮ ಧರ್ಮವನ್ನುಬ ರಕ್ಷಿಸಿ ಬೆಳೆಸುವ ಕಾರ್ಯ ಮಾಡಬೇಕು. ಆ ಪರಮಾತ್ಮನ ಕೃಪೆ ನಿಮ್ಮೆಲ್ಲರಿಗೂ ದೊರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಕಬಡ್ಡಿ ಅಸೋಸಿಯೇಶನ್ ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಇಲ್ಲಿ ಶಿವರಾತ್ರಿಯಲ್ಲಿ ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಮರಳಿನಲ್ಲಿ ರೂಪಿಸಲಾದ ಅರ್ಧನಾರೀಶ್ವರ ಮೂರ್ತಿಯು ಅತ್ಯಾಕರ್ಷಕವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಕುಮಾರ ಟ್ರಾವೆಲ್ಸ ನ ಮಾಲಿಕರಾದ ವೆಂಕಟ್ರಮಣ ಹೆಗಡೆ, ಬಿಜೆಪಿ ಜಿಲ್ಲಾ ಸಂಚಾಲಕರಾದ ಎಂ. ಜಿ. ಭಟ್, ಗ್ರಾ.ಪಂ. ಸದಸ್ಯರಾದ ಮಾರುತಿ ಶೆಟ್ಟಿ, ವೆಂಕಟ್ರಮಣ ಕವರಿ ತೊರ್ಕೆ, ಸೀತಾರಾಮ ಗುನಗ, ವೆಂಕಟ್ರಮಣ ಆಚಾರಿ, ಮೋಹನ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.