ಕುಮಟಾ : ತಾಲೂಕಿನ ಬರ್ಗಿ ಪಂಚಾಯತ್ ವ್ಯಾಪ್ತಿಯ ಮುರ್ಗಿ ಗಜನಿ(ಮೇಲಿನ ಪಾಲ)ದಿಂದ ಕೆಳಗಿನ ಗಜನಿವರೆಗೆ ಜಲಸಂಪನ್ಮೂಲ ಇಲಾಖೆ(ಸಣ್ಣ ನೀರಾವರಿ)ಯ ಅಂದಾಜು 50 ಲಕ್ಷ ಅನುದಾನದ ಗಜನಿ ಸಂರಕ್ಷಣಾ ಕಾಮಗಾರಿಗೆ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಚಾಲನೆ ನೀಡಿದರು.

RELATED ARTICLES  ಜಿಲ್ಲಾ ಕ.ಸಾ.ಪ ದಿಂದ ಅರ್ಹರಿಗೆ ಪ್ರಶಸ್ತಿ ಸಲ್ಲುತ್ತಿರುವುದು ಪ್ರಶಂಸನಿಯ : ಡಾ. ಷರೀಫ್

ತೀರಾ ಅಗತ್ಯವೂ ಹಾಗೂ ಅನಿವಾರ್ಯವಾಗಿದ್ದ ಈ ಕಾಮಗಾರಿಗೆ ಚಾಲನೆ ನೀಡಲು ಸಂತಸ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಂಗಪೂಜೆ

ಈ ಸಂದರ್ಭದಲ್ಲಿ ರಾಮ ಪಟಗಾರ, ಶಿವರಾಮ ಹರಿಕಂತ್ರ, ಸುರೇಖಾ ವಾಲೇಕರ,ಸಂದೀಪ ಮತ್ತು ಲೋಕೇಶ ನಾಯ್ಕ ವಹಿಸಿದ್ದರು.