ಬಿಜೆಪಿ ಸಮೀಕ್ಷೆಯಲ್ಲಿ ರೂಪಾಲಿಯೇ ಮುಂದೆ.

ಬೆಂಗಳೂರು; ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ,ಕಾಂಗ್ರೇಸ್,ಜೆಡಿಎಸ್ ಈಗಾಗಲೆ ಭರ್ಜರಿ ತಯಾರಿ ನಡೆಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದಲ್ಲಿ ಪ್ರಭಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಆಯಾ ಪಕ್ಷಗಳು ನಿರತವಾಗಿದ್ದು ಇದಕ್ಕೆ‌ ಬಿಜೆಪಿ ಪಕ್ಷದಲ್ಲಿ ಕಸರತ್ತು ಜೋರಾಗಿದೆ. ಆದರೆ ಬಿಜೆಪಿ ಮಾತ್ರ ಸಮೀಕ್ಷೆಯಲ್ಲಿ‌ ಯಾರು ಪಾಸ್ ಆಗತ್ತಾರೋ ಅವರಿಗೆ ಟಿಕೇಟ್ ಹಂಚಿಕೆ ಮಾಡುವ ತಂತ್ರಗಾರಿಕೆಗೆ ಕೈ ಹಾಕಿದೆ. ಅದರಂತೆ ಬಿಜೆಪಿಯೇ ನಡೆಸಿರುವ ಸಮೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದಿಂದ ರೂಪಾಲಿ ನಾಯ್ಕ‌ ಸಮೀಕ್ಷೆಯ ಲ್ಲಿ ಪಾಸ್ ಆಗಿದ್ದಾರೆ ಎಂಬ ಮಾಹಿತಿ‌ ಮಾಧ್ಯಮಕ್ಕೆ‌ ಲಭ್ಯವಾಗಿದೆ.

ಈ ಸಮೀಕ್ಷೆ ಆಧಾರ ಹಾಗೂ ರೂಪಾಲಿ ಅವರ ಪಕ್ಷ ಸಂಘಟನೆಯನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯ್ಯೂರಪ್ಪ ಅವರೆ ಕಣ್ಣಾರೆ ಕಂಡಿರೊಂದ್ರಿಂದ ಕಾರವಾರ ವಿಧಾನಸಭೆ ಕ್ಷೇತ್ರದಿಂದ ರೂಪಾಲಿ ನಾಯ್ಕ‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸನ್ನದ್ಧವಾಗಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಕಾರವಾರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯ್ಯೂರಪ್ಪ ರೂಪಾಲಿ ನಾಯ್ಕ ಅವರ ಪಕ್ಷ ಸಂಘಟನೆಗೆ ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿ ಹೋಗಿದ್ದಾರಂತೆ. ರೂಪಾಲಿ ನಾಯ್ಕ ಅವರು ರಾಜ್ಯ ನಾಯಕರು ಕಾರವಾರಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ಪಕ್ಷ ಸಂಘಟನೆಗೆ ಇಳಿದಿಲ್ಲ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರತ್ತಾ ಇದೆ. ಟಿಕೇಟ್ ಸಿಗಬೇಕು ಅಂತಾನೂ ಸಂಘಟನೆಗೆ ಮುಂದಾದವರಲ್ಲ. ಅವರು ಸದಾ ಬಡಬಗ್ಗರಿಗೆ ಸಹಾಯ ಸಹಕಾರ ಮಾಡುವ ಮೂಲಕ ಕ್ಷೇತ್ರದ ಜನರ ಮೆಚ್ವುಗೆ ಪಡೆದಿದ್ದಾರೆ.

RELATED ARTICLES  "ಗೋಸ್ವರ್ಗ"ದಲಿ ದಣಿವರಿಯದ ಧಣಿ!

ರೂಪಾಲಿ ನಾಯ್ಕ ಇಂದು ನಿನ್ನೆ‌ ಪಕ್ಷಕ್ಕೆ ಬಂದು ಟಿಕೇಟ್ ಬಯಸುತ್ತಿಲ್ಲ. ಅವರು ಮೊದಲಿನಿಂದಲ್ಲೂ ಬಿಜೆಪಿಯಲ್ಲಿ ಗುರುತಿಸಿಕೊಂಡು ಬಂದವರಾಗಿದ್ದಾರೆ. ಅವರದಲ್ಲಿ ಸಂಘಟನೆಯ ಚಾಣಾಕ್ಷತೆ ಇದೆ. ಅಷ್ಟೆ ಅಲ್ಲ ಅವರು ಕ್ಷೇತ್ರದಲ್ಲಿ ಎಲ್ಲರೊಂದಿಗೂ ಆತ್ಮೀಯತೆಯಿಂದ ಇದ್ದವರು. ಯಾರನ್ನು ಜೀವನದಲ್ಲಿ ದ್ವೇಷದಿಂದ ನೋಡಿದವರಲ್ಲ. ಸಹಾಯ ಕೇಳಿ ಯಾರೆ ತಮ್ಮ‌ ಬಳಿ ಬಂದರೂ ಯಾವತ್ತು ಅವರನ್ನು ವಾಪಸ್ ಕಳಸಿದ ಉದಾರಣೆ ಇಲ್ಲ. ಈ ಮಾತನ್ನ ರೂಪಾಲಿ ನಾಯ್ಕ ಅವರು ಹೇಳತ್ತಾ ಇಲ್ಲ. ಕಾರವಾರ-ಅಂಕೋಲಾ ವಿಧಾನಸಭೆ ಕ್ಷೇತ್ರದ ಯಾವುದೆ ಹಳ್ಳಿಯ ಮೂಲೆ ಮೂಲೆಗೆ ಹೋದ್ರು ಇದೆ ಮಾತು ಕೇಳಿ ಬರತ್ತಾ ಇದೆ.

ಈಗಾಗಲೆ ಬಿಜೆಪಿ ಉತ್ತರಕನ್ನಡ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರದಿಂದ ಮಹಿಳಾ ಆಕಾಂಕ್ಷಿಗೆ ಟಿಕೇಟ್ ನೀಡುವ ಬಗ್ಗೆ ಆರಂಭದ ದಿನದಿಂದ ಹೇಳಿಕೊಂಡು ಬರುತ್ತಿದೆ. ಇಡೀ ಜಿಲ್ಲೆಯನ್ನು ಒಮ್ಮೆ ಗಮನಿಸಿದ್ದರೆ ಬಿಜೆಪಿಯಲ್ಲಿರುವ ಮಹಿಳೆಯರ ಪೈಕಿ ರೂಪಾಲಿ ನಾಯ್ಕ ತುಂಬಾನೆ ಚೆನ್ನಾಗಿ ಪಕ್ಷ ಸಂಘಟನೆ ಮಾಡೋದ್ರಲ್ಲಿ ಮುಂದಿರೋ ಮಹಿಳೆ ಎನ್ನುವುದು ಕಂಡು ಬರುತ್ತಿದೆ.
ಅವರ ಸಂಘಟನೆ ಜಿಲ್ಲೆಯ ಬಿಜೆಪಿ ಮುಂಖಡರಿಗೆ ಅಷ್ಟೆ ಅಲ್ಲ ರಾಜ್ಯ ನಾಯಕರ ಗಮನಕ್ಕೂ ಬಂದಿದೆ. ಇದೆಲ್ಲವನ್ನು ಗಮನಿಸಿದ್ದರೆ ರೂಪಾಲಿ ನಾಯ್ಕ ಅವರಿಗೆ ಕಾರವಾರ ಕ್ಷೇತ್ರದಿಂದ ಸ್ಪರ್ಧೆ‌ ಮಾಡಲು ಬಿಜೆಪಿ ಗ್ರೀನ್ ಸಿಗ್ನಲ್ ನೀಡುವುದರಲ್ಲಿ ಯಾವ ಅನುಮಾನವಿಲ್ಲ.

RELATED ARTICLES  ಕಾರವಾರದಲ್ಲಿ ಪತ್ತೆಯಾಯ್ತು ಅತೀ ಉದ್ದದ ಬಂಗಡೆ ಮೀನು.

ಕ್ಷೇತ್ರದ ಮತದಾರ ಸಹ ಈ ಬಾರಿ ರೂಪಾಲಿ ನಾಯ್ಕ‌ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು ಅಂತಾ ಹೇಳತ್ತಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಈಗಾಗಲೆ ಬಿಜೆಪಿ ನಡೆಸಿರುವ ಮೊದಲ‌ ಸುತ್ತಿನ ಸಮೀಕ್ಷೆಯಲ್ಲಿ ರೂಪಾಲಿ ಅವರು ಮುಂದಿದ್ದಾರಂತೆ. ಈ ಸಮೀಕ್ಷೆಯ ಮೊದಲ ಪಟ್ಟಿ ಪಕ್ಷದ ಹೈಕಮಾಂಡ ಕೈ ಸೇರಿದೆ ಎನ್ನುವ ಮಾಹಿತಿ ಇದೀಗ ಮಾಧ್ಯಮಕ್ಕೆ‌ ಲಭ್ಯವಾಗಿದೆ.

ಒಟ್ಟಾರೆ ಕಾರವಾರ ಕ್ಷೇತ್ರದಿಂದ ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧೆ ಖಚಿತ ಎನ್ನಲಾಗಿದೆ.