ಕುಮಟಾ: ಅಪರ ಆಯುಕ್ತಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಹಾಗೂ ಡಾ. ಎಚ್. ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಹೊನ್ನಾವರದ ನ್ಯೂ-ಇಂಗ್ಲೀಷ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ, 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ವಿಷಯವಾರು ಗರಿಷ್ಠ ಶೇಕಡಾವಾರು ಸರಾಸರಿ ಅಂಕಗಳನ್ನು ದಾಖಲಿಸಿದÀ ಕುಮಟಾದ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ನಾಲ್ಕು ವಿಷಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿಷಯವಾರು ಬೋಧನೆಯ ಅನುಸಾರÀ ಇಂಗ್ಲೀಷ್ ವಿಷಯದಲ್ಲಿ ಶ್ರೀಮತಿ ವಿನಯಾ ನಾಯಕ ಶೇ.91À, ಸಮಾಜ ವಿಜ್ಞಾನ ವಿಷಯದಲ್ಲಿ ಶ್ರೀ ಪ್ರಕಾಶ ಗಾವಡಿ ಶೇ.89, ಗಣಿತ ವಿಷಯದಲ್ಲಿ ಶ್ರೀ ರಾಜೇಶ ಎಚ್.ಜಿ ಶೇ.86, ಹಾಗೂ ವಿಜ್ಞಾನ ವಿಷಯದಲ್ಲಿ ಸೌಖ್ಯಾ ಶೇಟ್ ಶೇ.83 ಸರಾಸರಿ ಶೇಕಡಾವಾರು ಅಂಕ ಗಳಿಸಲು ಶ್ರಮಿಸಿದ ಈ ಶಿಕ್ಷಕರುಗಳನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿನ ಒಟ್ಟೂ ಆರು ವಿಷಯಗಳ ಪೈಕಿ ನಾಲ್ಕರಲ್ಲಿ ಕುಮಟಾದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಈ ಮೇಲಿನ ಶಿಕ್ಷಕರು ತಾಲೂಕಿನಲ್ಲಿಯೇ ಉತ್ತಮ ಬೋಧನಾ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಈ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ ಪರೀಕ್ಷಾ ಸಾಧನೆಯಲ್ಲಿ ರಾಜ್ಯದಲ್ಲಿಯೇ 11ನೇ ಸ್ಥಾನವನ್ನು ಅಲಂಕರಿಸಿದ್ದು, ಈ ಸಾಧನೆಯು ಶಾಲೆಯ ಶಿಕ್ಷಕರುಗಳ ಬೋಧನಾ ಸಾಮಥ್ರ್ಯ ಹಾಗೂ ಕೌಶಲ್ಯಕ್ಕೆ ಎತ್ತಿ ಹಿಡಿದ ಕನ್ನಡಿಯಾಗಿದೆ.
ಈ ಮಹತ್ತರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ ಹಾಗೂ ಎಲ್ಲಾ ಶಿಕ್ಷಕಿ-ಶಿಕ್ಷಕಿಯರು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.