ಶಿರಸಿ: ವಿದ್ಯಾವಂತರಾದ ಪ್ರತಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳನ್ನು ಬತ್ತಳಿಕೆಯಲ್ಲಿರಿಸಿಕೊಂಡು ಕೃಷಿ ಕ್ಷೇತ್ರಕ್ಕೆ ಧುಮುಕ ಬೇಕಿದೆ. ಹೊಸ ಸಂಶೋಧನೆಗಳನ್ನು ಬಳಸಿಕೊಳ್ಳುವ ಮೂಲಕ ಜಾಗತೀಕರಣದೊಂದಿಗೆ ತೆರೆದುಕೊಳ್ಳಬೇಕಿದೆ ಎಂದು ಕೃಷಿ ಪರಿಣಿತ ನಾರಾಯಣ ಹೆಗಡೆ ಗಡೀಕೈ ಹೇಳಿದರು.

ಅವರು ತಾಲೂಕಿನ ಗೋಳಿಯಲ್ಲಿ ನಡೆಯುತ್ತಿರುವ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.

ಕೃಷಿ ಎಂಬುದು ನಿಂತ ನೀರಾಗಬಾರದು. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಕೃಷಿ ಕೂಡ ಲಾಭದಾಯಕ ಉದ್ಯಮವಾಗಿದೆ. ಇಂದಿನ ದಿನಮಾನಗಳಲ್ಲಿ ಕೃಷಿಯಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ಪಾರಂಪರಿಕ ಕೃಷಿಯನ್ನು ಬಿಟ್ಟು ಆರ್ಥಿಕತೆಯತ್ತ ವಾಲಬೇಕಿದೆ.

ಉದ್ಯಮ ಶೀಲತೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಕೃಷಿಯನ್ನು ಲಾಭದಾಯಕವಾಗಿಸಬಹುದು. ಪರ್ಯಾಯ ಮಾರ್ಗಗಳನ್ನು ಸರಿಸಿ ಮೌಲ್ಯವರ್ಧಿತ ಕೃಷಿ ಕೈಗೊಂಡರೆ ಆರ್ಥಿಕ ಸುಭದ್ರತೆ ಸಾಧ್ಯ. ಯುವಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವು ಇಡೀ ಜಗತ್ತಿನ ಸಮಸ್ಯೆಯಾಗಿದ್ದು ಹೊಸ ಹೊಸ ಆವಿಷ್ಕಾರಗಳ ಅಳವಡಿಕೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಅನೇಕ ಸಹಾಯಗಳು ಸರ್ಕಾರಗಿಂದ ಲಭ್ಯವಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಯುವಜನತೆ ಕೃಷಿಯತ್ತ ಮುಖಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

RELATED ARTICLES  ಎಸ್ಸೆಸ್ಸೆಲ್ಸಿ ನಂತರ ಮುಂದೇನು: ವಿವಿವಿ ಮಾರ್ಗದರ್ಶನ ಶಿಬಿರ

ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೋ. ರಾಘವೇಂದ್ರ ಜಾಜಿಗುಡ್ಡೆ ಮಾತನಾಡಿ, ಯುವಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು ಖೇದಕರ ಸಂಗತಿಯಾಗಿದ್ದು ಸಮಾಜದಲ್ಲಿ ಕೃಷಿಕರ ಕುರಿತಾಗಿನ ಋಣಾತ್ಮಕ ಮನೋಭಾವವೇ ಇದಕ್ಕೆ ಕಾರಣ. ಜನರ ಮಾನಸಿಕತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಎಂದು ಅಭಿಪ್ರಾಯಪಟ್ಟರು.

RELATED ARTICLES  ಮಂಕಾಳ ವೈದ್ಯರ ಪರ ದೇಶಪಾಂಡೆ ಪ್ರಚಾರ: ಭಟ್ಕಳದಲ್ಲಿ ಬಲ ತಂದ ಆರ್.ವಿ.ಡಿ

ಅಧ್ಯಕ್ಷತೆ ವಹಿಸಿದ್ದ ಕಾಲೆಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಟಿ. ಎಸ್. ಹಳೆಮನೆ ಮಾತನಾಡಿ, ಧೈರ್ಯ, ಸಾಹಸ, ನಿಸ್ವಾರ್ಥತೆ, ಶಿಸ್ತು, ಸೇವಾಮನೋಭಾವನೆಗಳನ್ನು ಅಳವಡಿಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಂಡು ಯುವಪೀಳಿಗೆ ಭವಿಶ್ಯದ ಜಗತ್ತನ್ನು ಮುನ್ನಡೆಸಬೇಕಿದೆ ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ಎನ್,ಎಸ್,ಎಸ್, ಜಿಲ್ಲಾ ನೋಡಲ್ ಅಧಿಕಾರಿ ಜಿ.ಟಿ.ಭಟ್. ಸಂಸ್ಕ್ರತ ವಿಭಾಗದ ಡಾ. ವಿನಾಯಕ ಭಟ್, ಪ್ರೋ. ಶ್ರೀಲಕ್ಷ್ಮಿ ಭಟ್, ಪ್ರೋ. ಕೋಮಲಾ ಭಟ್, ಪ್ರೋ. ಪರಿಮಳಾ ದೇಶಪಾಂಡೆ, ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೋ. ಕೆ. ಎನ್. ರೆಡ್ಡಿ, ಸಹಸಂಯೋಜನಾಧಿಕಾರಿ ದಿವ್ಯಾ ಹೆಗಡೆ ಉಪಸ್ತಿತರಿದ್ದರು.