ದಾಂಡೇಲಿ : ಈಜುಕೊಳದಲ್ಲಿ ಈಜಾಡಲು ಹೋಗಿದ್ದ ಕೇರಳದ ವಿದ್ಯಾರ್ಥಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಸಂಭವಿಸಿದೆ. ಕೇರಳ ಕೋಜಿಕೋರನ ಸರಕಾರಿ ಪಾಲಿಟೆಕ್ನಿಕ ಕಾಲೇಜಿನ ಅಕ್ಷಯ ಕೆ.ಪಿ. (21) ಎಂಬ ವಿದ್ಯಾರ್ಥಿಯೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಕೇರಳದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ 43 ವಿದ್ಯಾರ್ಥಿಗಳು ದಾಂಡೇಲಿಗೆ ಪ್ರವಾಸಕ್ಕೆಂದು ಬಂದಿದ್ದರು. ಈಸಂದರ್ಭದಲ್ಲಿ ಸುಭಾಶನಗರದಲ್ಲಿರುವ ಈಜುಕೊಳದಲ್ಲಿ ಈಜಾಡಲೆಂದು ಹೋಗಿದ್ದರು. ಆ ಸಂದರ್ಭದಲ್ಲಿ ಅಕ್ಷಯ ಪಿ. ಕೆ. ಎಂಬ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

RELATED ARTICLES  ಸಂಪನ್ನವಾಯ್ತು ಹಾಲಕ್ಕಿ ಒಕ್ಕಿಗರ ಸಭಾಭವನದ ಶಿಲಾನ್ಯಾಸ ಮತ್ತು ಗುರುವಂದನಾ ಕಾರ್ಯಕ್ರಮ.

ಸಿ.ಪಿ.ಐ ಅನೀಸ್ ಮುಜಾವರ, ಪಿ. ಎಸ್. ಐ ಪ್ರವೀಣಕುಮಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಇದೆ ಈಜು ಕೊಳದಲ್ಲಿ ಕಳೆದ ವರ್ಷವೂ ಇದೇ ರೀತಿ ದುರ್ಘಟನೆಯೊಂದು ನಡೆದು ಯುವಕನೋರ್ವ ಸಾವನ್ನಪ್ಪಿದ್ದ. ಈ ಈಜುಕೊಳ ನಗರಸಭೆ ಸ್ವಾಮಿತ್ವದ ಈಜುಕೊಳವಾಗಿದ್ದು ಇದನ್ನು ನಡೆಸಲು ಖಾಸಗಿಯವರೋರ್ವರು ಟೆಂಡರ ಮೂಲಕ ಪಡೆದಿರುತ್ತಾರೆ.

RELATED ARTICLES  ಬೈಕ್ ಸವಾರನ ಮೇಲೆ ಹರಿದ ಬಸ್ : ನವ ವಿವಾಹಿತ ಸಾವು.