ಶಿರಸಿ : ರಾಜಕೀಯ ಮಾಡುವುದಾದರೆ ಜನ ಮೆಚ್ಚುವ ರೀತಿಯಲ್ಲಿ ಮಾಡಬೇಕು. ಸುಖಾ ಸುಮ್ಮನೆ ಉದ್ದೇಶ ಪೂರ್ವಕವಾಗಿ ಯಾವುದೇ ವ್ಯಕ್ತಿಯ, ಮೇಲೆ ಸಂಘ – ಸಂಸ್ಥೆಗಳ ಮೇಲೆ ಆರೋಪ ಮಾಡಬಾರದು. ಹಾಗೆ ಮಾಡಿದಲ್ಲಿ ಅದು ಅವರ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಳಿಯಾಳದ ದೇಶಪಾಂಡೆ ರೂಡ್ ಸೆಟ್ ಸಂಸ್ಥೆಯ ವಿರುದ್ಧ ಬಿಜೆಪಿಯ ಸುನೀಲ್ ಹೆಗಡೆ ಹಾಗೂ ಪ್ರಮೋದ ಹೆಗಡೆ ಅವರಿಗೆ ಟಾಂಗ್ ನೀಡಿದ್ದಾರೆ.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಪಾಂಡೆ ರೂಡ್ ಸೆಟ್ ಹಳಿಯಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಅಂತಹ ಉತ್ತಮ ಸಂಸ್ಥೆಯ ಕುರಿತು ಆರೋಪ ಸರಿಯಲ್ಲ. ರಾಜಕಾರಣ ಎಂದು ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ. ಆರೋಪ ಮಾಡುವುದು ಸುಲಭ ಆದರೆ ನಾವು ಏನೂ ಮಾಡಿದ್ದೇವೆ ಜನರಿಗೆ ಎಂಬುದನ್ನು ತಿಳಿದು ಮಾತನಾಡಬೇಕು ಎಂದರು.

RELATED ARTICLES  ಯಲ್ಲಾಪುರಕ್ಕೆ ಹೊಸ ಬಸ್ ನಿಲ್ದಾಣ ಭಾಗ್ಯ! ನಾಳೆ ನಡೆಯಲಿದೆ ಗುದ್ದಲಿಪೂಜೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಂದ ನಂತರ ಸಮಗ್ರ ಅಭಿವೃದ್ಧಿ ಆಗಿದೆ. ಅದರಂತೆ‌ ಜಿಲ್ಲಾ ಉಸ್ತುವಾರಿ ಸಚಿವರಾದ ದೇಶಪಾಂಡೆಯವರ ನೇತೃತ್ವದಲ್ಲಿ ಎಲ್ಲಾ ಶಾಸಕರುಗಳನ್ನೊಳಗೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಹೆಚ್ಚಿನ ಅನುದಾನ ತಂದು ಪ್ರಗತಿ ಕಂಡಿದೆ. ಅಲ್ಲದೇ ಅವರು ಕೊಟ್ಟ ಮಾತಿನಂತೆ ಕಾಳಿ ನದಿಯ ನೀರನ್ನು ಹಳಿಯಾಳ ವಿವಿಧ ಕೆರೆ, ಕಟ್ಟೆಗಳಿಗೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಅವರು ಯೋಜನೆಯ ಕುರಿತು ಮಾತನಾಡಿದಾಗ ಕಾಳಿ ನೀರನ್ನು ಕೆರೆಗಳಿಗೆ ಹರಿಸಿದಲ್ಲಿ ದೇಶಪಾಂಡೆ ಅವರನ್ನು ಆನೆ ಮೇಲೆ ಮೆರವಣಿಗೆ ಮಾಡಿಸುತ್ತೇವೆ ಎಂದು ವಿರುದ್ಧ ಪಕ್ಷದ ನಾಯಕರು ಹೇಳಿಕೆ ನೀಡಿದ್ದರು. ಅವರು ಇಂದು ಮೊದಲು ಆ ಕೆಲಸವನ್ನು ಮಾಡಲಿ ಎಂದರು.

RELATED ARTICLES  ಹೊಸ್ಕೇರಿ ಕಡಿಮೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಕೇಂದ್ರ ಸರ್ಕಾರ ಅಡಿಕೆ ಕ್ಯಾನ್ಸರ್ ಗೆ ಪೂರಕ ಎಂದು ಹೇಳುವುದು ಸರಿಯಲ್ಲ. ಅದು ನಿನ್ನೆ ಮೊನ್ನೆಯ ಬೆಳೆಯಲ್ಲ. ಅದು ಪಾರಂಪರಿಕ ಬೆಳೆ. ಆದ್ದರಿಂದ ಇಲ್ಲಿಯ ಸಂಸದರು, ಜನಪ್ರತಿನಿಧಿಗಳು ಎಲ್ಲರೂ ಪಕ್ಷಾತೀತವಾಗಿ ಸೇರಿ ಕೇಂದ್ರದ ಮನವೋಲಿಕೆ ಮಾಡಲು ಪ್ರಯತ್ನಿಸಬೇಕು‌. ಅಡಿಕೆಯ ಕುರಿತು ಅಧ್ಯಯನ ಮಾಡಬೇಕು. ನಿಷೇಧ ಮಾಡುವ ಪ್ರಕ್ತಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಕೆ.ಭಾಗ್ವತ್, ರಮೇಶ‌ ದುಭಾಶಿ, ಸುಮಾ ಉಗ್ರಾಣಕರ, ಜ್ಯೋತಿ ಗೌಡ, ದೀಪಕ ದೊಡ್ಡುರು ಮುಂತಾದವರು ಇದ್ದರು.