ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವರಿ ಸಚಿವ ಆರ್.ವಿ ದೇಶಪಾಂಡೆ ರವರು ಫೆಬ್ರುವರಿ 17 ಮತ್ತು 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ಫೆ. 17ರಂದು ಮದ್ಯಾಹ್ನ 2 ಗಂಟೆಗೆ ಹಳಿಯಾಳ ತಾಲೂಕಿನ ತೆರಗಾಂವದಲ್ಲಿ ಸಾರ್ವಜನಿಕರ ಭೇಟಿ ಮಾಡುವರು. ಬಳಿಕ ನೂತನವಾಗಿ ನಿರ್ಮಿಸಿದ ಹಳ್ಳಿ ಸಂತೆ, ಮೀನು ಮಾರುಕಟ್ಟೆ, ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಸಂಜೆ 4ಕ್ಕೆ ದಾಂಡೇಲಿಯಲ್ಲಿ ವಿ.ಆರ್.ಡಿ.ಎಮ್. ಟ್ರಸ್ಟ್ ವತಿಯಿಂದ ನಡೆಯುತ್ತಿರುವ ದಾಂಡೇಲಿ ಉತ್ಸವದ ಸ್ಫರ್ಧಾ ಸ್ಥಳಗಳಿಗೆ ಭೇಟಿ ನೀಡುವರು. ಸಂಜೆ 5ಕ್ಕೆ ಕೋಗಿಲಬನದಲ್ಲಿ ಗ್ರಾಮ ಪಂಚಾಯತ್ ಅಡಿಗಲ್ಲು ಸಮಾರಂಭ, ಹಕ್ಕು ಪತ್ರ ವಿತರಣೆ, ರಾಷ್ಟ್ರೀಯ ಜೀವನ ಅಭಿಯಾನ ಪಂಚಾಯತ ಮಟ್ಟದ ಮಹಿಳಾ ಸಂಘಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ದಾಂಡೇಲಿ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಫೆ. 18ರಂದು 9.30 ಕ್ಕೆ ದಾಂಡೇಲಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಸ್ಪರ್ಧಾ ಸ್ಥಳಗಳಿಗೆ ಭೇಟಿ ನೀಡುವರು. ಬೆಳಗ್ಗೆ 11 ಕ್ಕೆ ಅಲೈಡ್ ಏರಿಯಾ ಮತ್ತು ಟೌನಶಿಪ್‍ನಲ್ಲಿ ನಿರ್ಮಿಸಿರುವ ಅಂಗನವಾಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 12.30 ಕ್ಕೆ ಚಾಂದೇವಾಡಿ ದೇವಸ್ಥಾನಕ್ಕೆ ಭೇಟಿ ನೀಡುವರು. 1.30ಕ್ಕೆ ವಟಲಾ (ಅಖೇತಿ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಮದ್ಯಾಹ್ನ 3ಕ್ಕೆ ಕ್ಯಾಸರಲಾಕದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸುವರು. 3.30ಕ್ಕೆ ಕ್ಯಾನೋಪಿ ವಾಕ್ ಪ್ರೇಕ್ಷಣಿಯ ಸ್ಥಳವನ್ನು ಉದ್ಘಾಟಿಸುವರು.
6.30ಕ್ಕೆ ವಿ.ಆರ್.ಡಿ.ಎಮ್. ಟ್ರಸ್ಟ್ ವತಿಯಿಂದ ನಡೆಯುತ್ತಿರುವ ದಾಂಡೇಲಿ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಹಾಜರಿರುವುದು.