ಶ್ರವಣಬೆಳಗೊಳ: ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೂ ಮುನ್ನವೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯತ ಅತ್ಯಂತ ಪವಿತ್ರ ಮತ್ತು ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆದಿದ್ದು, ಜೈನಮುನಿ ಶ್ರೀ 108 ಶ್ರೇಯಸಾಗರ ಮಹಾರಾಜರು (74) ಸಲ್ಲೇಖನ ಪೂರಕ ಸಮಾಧಿ ಮರಣ ಹೊಂದಿದ್ದಾರೆ.

ಮುನಿಶ್ರೀಗಳು ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮಧ್ಯಪ್ರದೇಶದಿಂದ ಆಗಮಿಸಿ ತ್ಯಾಗಿನಗರದಲ್ಲಿ ವಾಸ್ತವ್ಯ ಹೂಡಿದ್ದರು.

RELATED ARTICLES  ರಾಜ್ಯ ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್

ಸುಮಾರು 1 ತಿಂಗಳಿನಿಂದ ಶರೀರ ಕ್ಷೀಣವಾಗಿ ಕಳೆದ ಒಂದು ವಾರದಿಂದ ಆಹಾರ ತ್ಯಜಿಸಿದ್ದರು. ಕೊನೆಗ ಅವರ ಇಚ್ಚೆಯಂತೆಯೇ ನೀರನ್ನೂ ತ್ಯಜಿಸಿದ್ದರು. ವಿಶೇಷವೆಂದರೆ ಶ್ರವಣಬೆಳಗೊಳಕ್ಕೆ ಬರುವ ಮುನ್ನ ಅವರು ಶ್ರವಣಬೆಳಗೊಳದಲ್ಲಿಯೇ ತಮ್ಮ ಸಮಾಧಿಯಾಗಬೇಕೆಂದು ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ತಮ್ಮ ಇಚ್ಛೆಯಂತೆಯೇ ನಿನ್ನೆ ಮುಶ್ರೀಗಳು ದೇಹತ್ಯಾಗ ಮಾಡಿದ್ದಾರೆ.

RELATED ARTICLES  ದಿನಾಂಕ 15/06/2019 ರ ರಾಶಿ ಭವಿಷ್ಯ ಇಲ್ಲಿದೆ.

ಮುನಿಶ್ರೀ ಶ್ರೇಯಸಾಗರ ಮಹಾರಾಜರ ಪಾರ್ಥೀವ ಶರೀರವನ್ನು ತ್ಯಾಗಿ ನಗರದಿಂದ ಮೆರವಣಿಗೆಯಲ್ಲಿ ತಂದು ಶ್ರವಣಬೆಳಗೊಳದ ಸಂತೆ ಮೈದಾನದಲ್ಲಿರುವ ಶ್ರಮಣಗುಡ್ಡದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು