ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ- ನಾಗರಾಜ ನಾಯಕ ತೊರ್ಕೆ.

ಹೊನ್ನಾವರ ತಾಲೂಕಿನ ಕಡ್ಲೆಕೊಪ್ಪದ ಶ್ರೀ ಹಾಣಿಕುಳಿ ಜಟಕ ದೇವರ ವರ್ಧಂತಿ ಉತ್ಸವವು ಶ್ರೀ ಜಟಕದೇವರ ದೇವಸ್ಥಾನದ ಆವಾರದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.

ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ರವಿಕುಮಾರ ಶೆಟ್ಟಿಯವರು ಮಾತನಾಡಿ ಶ್ರೀ ದೇವರ ವರ್ಧಂತಿ ಉತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗುತ್ತಿದೆ. ಈ ದೇವಸ್ಥಾನಕ್ಕೆ ಸಭಾಭವನದ ಅವಶ್ಯಕತೆ ಇರುವುದಾಗಿ ಈ ಭಾಗದಿಂದ ನಮಗೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಿದ್ದು ಅದನ್ನು ಅತಿ ಶೀಘ್ರವೇ ಈಡೇರಿಸುವ ಭರವಸೆ ಇತ್ತರು.

IMG 20180217 WA0091

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಧರ್ಮೋ ರಕ್ಷತಿ ರಕ್ಷಿತಃ- ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ. ನಮ್ಮ ಧರ್ಮದ ರಕ್ಷಣೆಯ ಹೊಣೆ ನಮ್ಮೆಲ್ಲರ ಮುಂದಿದೆ. ಪ್ರಸ್ತುತ ದಿನಗಳಲ್ಲಿ ನಮ್ಮ ಧರ್ಮವನ್ನು ರಕ್ಷಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ನಾವು ಎಲ್ಲಾ ಧರ್ಮದವರನ್ನೂ ಪ್ರೀತಿಸುವ ಜನರಾಗಿದ್ದು ನಮ್ಮ ಧರ್ಮದ ಮೇಲೆ ಅಪಚಾರ ನಡೆದಾಗ ನಾವೆಲ್ಲ ಸಂಘಟಿತರಾಗಿ ಅದಕ್ಕೆ ತಕ್ಕ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ. ಈಗಾಗಲೇ ರವಿಕುಮಾರ ಶೆಟ್ಟಿಯವರು ಇಲ್ಲಿಯ ಸಭಾಭವನಕ್ಕೆ 10 ಲಕ್ಷ ರೂ. ಗಳನ್ನು ನೀಡುವ ಭರವಸೆ ನೀಡಿದ್ದನ್ನು ಶ್ಲಾಘಿಸುತ್ತಾ ಕೆಲವೇ ದಿನಗಳಲ್ಲಿ ಚುನಾವಣೆಯ ಘೋಷಣೆಯಾಗಲಿದ್ದು ತಮಗೆ ಕೆಲವೇ ದಿನಗಳ ಅವಕಾಶವಿದ್ದು ಕೂಡಲೇ ಕಾರ್ಯ ಪ್ರವೃತ್ತರಾಗಿ ನೀಡಿದ ಭರವಸೆಯನ್ನು ಈಡೇರಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

RELATED ARTICLES  ಭಟ್ಕಳಕ್ಕೆ ಭಟ್ಕಳ ಎಂಬ ಹೆಸರು ಬಂದದ್ದು ಹೀಗೆ..

ಅಧ್ಯಕ್ಷತೆ ವಹಿಸಿದ ಮಾಜಿ ಜಿ. ಪಂ. ಸದಸ್ಯರಾದ ಕೃಷ್ಣ ಜೆ. ಗೌಡ ಅವರು ಮಾತನಾಡಿ ಇಲ್ಲಿ ಅನೇಕ ಬಾರಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ಜರುಗಿದ್ದು ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳಿಗೆ ಬರುವುದಾಗಿ ತಿಳಿಸುತ್ತಾ ಸಂಘಟನೆಯನ್ನು ಮನಃಪೂರ್ವಕವಾಗಿ ಅಭಿನಂದಿಸಿದರು. ಸಭಾಭವನದ ವಿಚಾರವಾಗಿ ಮಾತನಾಡುತ್ತಾ ನಿಮಗೆ ಸಿಕ್ಕ 15 ವರ್ಷಗಳ ಅಧಿಕಾರಾವಧಿಯಲ್ಲಿ ಕೆಲಸವನ್ನು ಪೂರೈಸಲು ತಮ್ಮಿಂದ ಆಗದಿರುವುದು ವಿಷಾದನೀಯ. ಮುಂದೆ ಬರುವ ಸರಕಾರವಾದರೂ ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಕಟುವಾಗಿ ನುಡಿದರು,

RELATED ARTICLES  ಜನರಿಗೆ ನಾಯಿ ಮಾಂಸ ತಿನ್ನಿಸಿದವರಿಗೆ ಬಿತ್ತು ಬರೋಬ್ಬರಿ ಪೆಟ್ಟು..!

ಈ ಸಂದರ್ಭದಲ್ಲಿ ಸುರಜ ನಾಯ್ಕ ಸೋನಿ, ಕಡ್ಲೆ ಗ್ರಾ. ಪಂ. ಉಪಾಧ್ಯಕ್ಷ ಗಜಾನನ ಎಸ್. ಮಡಿವಾಳ, ಕಡ್ಲೆ ಗ್ರಾ. ಪಂ. ಸದಸ್ಯ ಎಮ್. ಜಿ. ಹೆಗಡೆ, ಕಡ್ಲೆ ಗ್ರಾ. ಪಂ. ಸದಸ್ಯ ಗೋವಿಂದ ಗೌಡ ವಂದೂರು, ಕಡ್ಲೆ ಗ್ರಾ. ಪಂ. ಸದಸ್ಯ ಈಶ್ವರ ಗೌಡ ನೀಲ್ಕೋಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.