ಹೊನ್ನಾವರ: ಕೃಷಿ ಇಲಾಖೆ ಉತ್ತರಕನ್ನಡ, ಉತ್ತರಕನ್ನಡ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ನೆಲಸಿರಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಉತ್ತರ ಕನ್ನಡ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮ ಹೊನ್ನಾವರದಲ್ಲಿ ನಡೆಯಿತು.
ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಅವರ ಶ್ರೀದರ ಪ್ರೆಸ್ ನಲ್ಲಿ ಇಂದು ಮಾರಾಟ ಮಳಿಗೆಯ ಉದ್ಘಾಟನೆಯನ್ನು ಶಾಸಕ ಮಾಂಕಾಳ್ ವೈದ್ಯ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಳಿದರ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ಎಂ.ಪಿ ಕರ್ಕಿ, ಕೃಷ್ಣ ಗೌಡ, ಮುಂತಾದವರು ಉಪಸ್ಥಿತರಿದ್ದರು.