ಕುಮಟಾ: ಸ್ನೇಹ ಸಂಗಮ ಹೊಲನಗದ್ದೆ ಇವರ ಆಶ್ರಯದಲ್ಲಿ ಅಂತರ ಜಿಲ್ಲಾ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಹೊಲನಗದ್ದೆಯ ಶಾಲಾ ಕ್ರಿಡಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಗಾಯಿತ್ರಿ ಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರೀಡೆಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಪ್ರತಿಯೊಬ್ಬರು ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇಂತಹ ಕ್ರೀಡಾ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಸ್ನೇಹ ಸಂಗಮ ಹೊಲನಗದ್ದೆ ಇವರ ಆಶ್ರಯದಲ್ಲಿ ಈ ಪಂದ್ಯಾವಳಿಯು ಉತ್ತಮ ಸಂಘಟನೆಯೊಂದಿಗೆ ಉತ್ಸಾಹದಿಂದ ಜರುಗುತ್ತಿದೆ. ಇಲ್ಲಿ ಕೇವಲ ಕ್ರೀಡೆಗೆ ಮಾತ್ರ ಆದ್ಯತೆ ನೀಡದೆ ಸ್ಥಳೀಯ ಮಕ್ಕಳ ಪ್ರತಿಭೆಯನ್ನು ಪೋಷಿಸುವ ನಿಟ್ಟಿನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನವನ್ನು ಕೂಡ ವಿತರಿಸಲಾಗಿದೆ. ಅಲ್ಲದೇ ಅಶಕ್ತ ಅಂಧರಾದ ವಿನಾಯಕ ಹರಿಕಂತ್ರ ಇವರಿಗೆ ಧನ ಸಹಾಯ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೂ ತಮ್ಮನ್ನು ತೊಡಗಿಸಿಕೊಂಡಿರುವುದು ವೇದ್ಯವಾಗಿದೆ. ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾ ಮನೋಭಾವನೆಯೊಂದಿಗೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕು. ಸಶಕ್ತ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ನಾವೆಲ್ಲ ಇಂತಹ ಸಂಘಟನೆಗಳೊಂದಿಗೆ ಕೈ ಜೋಡಿಸೋಣ ಎಂದು ಕರೆ ನಿಡಿದರು.

RELATED ARTICLES  ದಯಾನಿಲಯ ಶಾಲಾ ವಿದ್ಯಾರ್ಥಿಗಳ ಸಾಧನೆ.

ಅಧ್ಯಕ್ಷತೆ ವಹಿಸಿದ ಚಲನ ಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಅವರು ಮಾತನಾಡಿ ಸಂಘಟನೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.

ಮಾಜಿ ಶಾಸಕ ದಿನಕರ ಕೆ. ಶೆಟ್ಟಿ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. ಸೂರಜ ನಾಯ್ಕ ಸೋನಿ ಕ್ರೀಡಾ ಪಾರಿತೋಷಕವನ್ನು ಅನಾವರಣಗೊಳಿಸಿ ಶುಭ ಕೋರಿದರು.

RELATED ARTICLES  ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಘ ಪರಿವಾರದ ಪಾತ್ರವಿಲ್ಲ – ವಿಕ್ರಮಾರ್ಜುನ ಹೆಗ್ಗಡೆ

ಈ ಸಂಧರ್ಭದಲ್ಲಿ ತಾ.ಪಂ. ಸದಸ್ಯರಾದ ಯಶೋಧಾ ಶೆಟ್ಟಿ, ಲಕ್ಷ್ಮಣ ಪಟಗಾರ,ಬರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.