“ಹೊನ್ನಾವರ :ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಸ್ವತಃ ಜೀವನದಲ್ಲಿ ತದನಂತರ ಸಮಾಜದಲ್ಲಿ ಅಳವಡಿಸಿದಾಗ ಮಾತ್ರ ಸ್ವಸ್ತ ಸಮಾಜ ನಿರ್ಮಿಸಲು ಸಾಧ್ಯ” ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಹೇಳಿದರು.

“ವಿದ್ಯಾಪೋಷಕ ಸಂಸ್ಥೆ(ರಿ.)” ಧಾರವಾಡ ಮತ್ತು “ಸಿಲೆಕ್ಟ್ ಫೌಂಡೇಶನ್(ರಿ.)” ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕಾರ್ಯಗಾರ ((Residential Bridge Camp) ಶಿಬಿರವು ಹೊನ್ನಾವರದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಪನ್ನಗೊಂಡಿತು.

ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಪದವಿಯನ್ನು ವ್ಯಾಸಾಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಪದವಿಯ ಜೊತೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಕೋನ ಇಟ್ಟುಕೊಂಡು ವಿವಿಧ ಕ್ಷೇತ್ರದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ ಸಂಪನ್ಮೂಲ ವ್ಯಕ್ತಿಗಳಿಂದ ಅಭ್ಯಾಸ ಕ್ರಮ, ಸ್ಪರ್ಧಾತ್ಮಕ ಪರೀಕ್ಷೆ, ಸಂವಹನ ಕಲೆ, ವ್ಯಕ್ತಿತ್ವ ವಿಕಸನ, ಪ್ರಸ್ತುತಿ ಕೌಶಲ್ಯಗಳು, ಸೃಜನಶೀಲತೆ, ಭಾವನೆಗಳ ನಿರ್ವಹಣೆ, ಸಂದರ್ಶನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ ಹಾಗೂ ಇನ್ನೀತರ ವಿಷಯಗಳ ಕುರಿತು ಕಾರ್ಯಗಾರಗಳು ನಡೆದವು.

RELATED ARTICLES  ಹೊನ್ನಾವರ, ಅಂಕೋಲಾ, ಶಿರಸಿಯಲ್ಲಿ ನಾಳೆ ಎಲ್ಲೆಲ್ಲಿ ಕೊರೋನಾ ಲಸಿಕೆ ನೀಡಲಾಗುವುದು?

ಎಂಟು ದಿನಗಳ ಕಾರ್ಯಗಾರಕ್ಕೆ ಆಗಮಿಸಿದ್ದ ಶಿಭಿರಾರ್ಥಿಗಳಿಗೆ ಉಳಿಯಲು ವಸತಿ, ಸಭಾಭವನ, ಊಟ, ಉಪಹಾರ, ಪಾನೀಯವನ್ನು ಸಿಲೆಕ್ಟ್ ಫೌಂಡೇಶನ್(ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಸಂಪೂರ್ಣ ಉಚಿತವಾಗಿ ಒದಗಿಸಿತ್ತು.

ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಲಾದ ಶ್ರೀ ಮಾರುತಿ ಗುರೂಜಿಯವರು ಆಶೀರ್ವಚನ ನೀಡಿ ಶಿಬಿರಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು:
ಆಸೆಗೆ ದಾಸರಾಗಬೇಡಿ. ಗುರಿಗಳಿಗೆ ದಾಸರಾಗಿ. ಗುರಿಯ ಹಿಂದೆ ಬಿದ್ದವರೆಲ್ಲ ಇವತ್ತು ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಿ ನಿಂತಿದ್ದಾರೆ.

RELATED ARTICLES  ಕುಮಟಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ಮಾಧ್ಯಮದಲ್ಲಿ ಕಲಿಕೆ‌ ಬಗ್ಗೆ ಬೆಳಕು ಚೆಲ್ಲಿದ ಗಣ್ಯರ ನುಡಿ.

ಸಮದ್ರದ ಅಲೆಗಳು ಕಷ್ಟಗಳಿಗೆ ಉತ್ತಮ ಉದಾಹರಣೆ. ಅವು ಒಂದರ ಹಿಂದೆ ಒಂದು ಎಡೆಬಿಡದೆ ರಭಸವಾಗಿ ದಡಕ್ಕೆ ಅಪ್ಪಳಿಸುತ್ತಿರುತ್ತವೆ. ಅಲೆಗಳನ್ನು ಸಮರ್ಥವಾಗಿ ದಾಟಿ ಮುಂದೆ ಹೋದಾಗ ಸಿಗುವ ಸುಖವೇ ಶಾಂತ ಸಮುದ್ರ. ಅಲ್ಲಿ ಸಮುದ್ರ ನಿಶ್ಯಬ್ಧವಾಗಿ ಪ್ರಶಾಂತವಾಗಿ ಇರುತ್ತದೆ ನಿಮ್ಮೆಲ್ಲರ ಜೀವನ ಹಾಗೆಯೇ ಆಗಲಿ ಎಂದು ಹಾರೈಸಿದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ “ನಾಗರೀಕ” ಪತ್ರಿಕೆಯ ಮುಖ್ಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಹೊನ್ನಾವರ ಮತ್ತು ಸುಬ್ರಹ್ಮಣ್ಯ ಸಂಸ್ಕøತ ಪಾಠಶಾಲೆಯ ನಿವೃತ್ತ ಪ್ರಾಂಶುಪಾಲರಾದ ವಿ.ಜಿ.ಹೆಗಡೆ ಮುಗ್ವ ತಮ್ಮ ಪಾಂಡಿತ್ಯಪೂರ್ಣ ಅಧ್ಯಯನ ಮತ್ತು ಜೀವನಾನುಭವಗಳನ್ನು ಆಗಮಿಸಿದ್ದ 40ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಧಾರೆ ಎರೆದು ಅವರ ಮುಂದಿನ ಜೀವನಕ್ಕೆ ಹುರಿಗೊಳಿಸಿದರು.