ಯಲ್ಲಾಪುರ: ರಾಜಕೀಯದಲ್ಲಿ ಏಕೀಕರಣವಾದರೆ ಯಾವ ಪ್ರಯೋ ಜನವೂ ಇಲ್ಲ. ಧಾರ್ವಿುಕ ಏಕೀಕರಣವಾದರೆ ಮಾತ್ರ ದೇಶದ ಪ್ರಗತಿಯಾಗಲು ಸಾಧ್ಯ ಎಂದು ಹಿರಿಯ ಚಿಂತಕ ಡಾ. ಕೆ.ಎಸ್. ನಾರಾಯಣಾಚಾರ್ಯ ಹೇಳಿದರು.

ಅವರು ಪಟ್ಟಣದ ನಾಯಕನ ಕೆರೆಯ ಶಾರದಾಂಬಾ ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ 5 ದಿನಗಳ ಮಹಾಭಾರತ ಉಪನ್ಯಾಸ ಮಾಲಿಕೆಯ ಸಮಾರೋಪದಲ್ಲಿ ಉಪನ್ಯಾಸ ನೀಡಿದರು. ದೇಶವು ಕೆಲ ಪುಂಡರ ಮತ್ತು ಕ್ರೂರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವುದರಿಂದ ಅಸಮತೋಲನಕ್ಕೆ ಕಾರಣವಾಗಿ, ದೇಶದ ಅಭಿವೃದ್ಧಿಗೂ ಅಡ್ಡಿಯಾಗಿದೆ. ಭಾರತದಂತಹ ಹಿಂದು ರಾಷ್ಟ್ರದಲ್ಲಿ ದೇವಸ್ಥಾನಗಳ ಸ್ಥಿತಿ ಶೋಚನೀಯವಾಗಿದೆ. ನಮ್ಮ ಸಂಸ್ಕೃತಿಯನ್ನು ದೂರ ಮಾಡಿ, ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಯುವಕರು ಪಾಶ್ಚಿಮಾತ್ಯ ಶಿಕ್ಷಣಕ್ಕೆ ಆಕರ್ಷಿತರಾಗದೆ, ದೇಶಿ ಶಿಕ್ಷಣ ಪಡೆಯಬೇಕು. ಗೃಹಿಣಿಯರು ತಮ್ಮ ಮಕ್ಕಳನ್ನು ಸಂಸ್ಕೃತಿ-ಸನ್ಮಾರ್ಗದತ್ತ ಕೊಂಡೊಯ್ಯಲು ತೊಡಗಿದಾಗ ವಿದೇಶಿ ಸಂಸ್ಕೃತಿ ನಮ್ಮನ್ನು ಆವರಿಸದು ಎಂದರು.

RELATED ARTICLES  ಸ್ವಚ್ಚ ನಿರ್ಮಲ ಕಡಲತೀರ ಅಭಿಯಾನ:ಮಕ್ಕಳದಿನಾಚರಣೆಯಂದು ಪಾಲ್ಗೊಂಡ ಮಕ್ಕಳು.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಮಾಜದಲ್ಲಿ ಇತ್ತೀಚೆಗೆ ಅನೇಕ ರೀತಿಯ ಗೊಂದಲ ಸೃಷ್ಟಿಸಲಾಗುತ್ತಿದೆ. ಜನರು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಅರ್ಥೈಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಾಗಿದೆ. ಅದಕ್ಕೆ ಇಂತಹ ವಿದ್ವಾಂಸರ ಮಾರ್ಗದರ್ಶನ ಅಗತ್ಯ ಎಂದರು. ಕೆ.ಎಸ್. ನಾರಾಯಣಾಚಾರ್ಯ ದಂಪತಿಯನ್ನು ಸಂಘಟಕರು ಸನ್ಮಾನಿಸಿದರು. ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ರಾಮಕೃಷ್ಣ ಬಿದ್ರೆಪಾಲ ಉಪಸ್ಥಿತರಿದ್ದರು. ವಿಶ್ವನಾಥ ಭಟ್ಟ ಶಿರಲೆ, ಮಹಾಬಲೇಶ್ವರ ಭಟ್ಟ ಶೀಗೇಪಾಲ ನಿರ್ವಹಿಸಿದರು.

RELATED ARTICLES  ಸರಣಿ ಅಪಘಾತ : ಇಬ್ಬರ ಸಾವು : ಮೂವರಿಗೆ ಪೆಟ್ಟು