ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬಂದಂತಹ ಸಮಸ್ಯೆ ಎಂದರೆ ಶೀತ, ಮೈಗ್ರೇನ್, ಚಳಿ, ಜ್ವರ ಅಥವಾ ಡೈರಿಯಾ ಸಮಸ್ಯೆ. ಈ ಸಮಸ್ಯೆ ಇಲ್ಲದೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ ಅಲ್ವಾ? ಮಹಿಳೆಯರು ಎಂದರೆ ಅವರು ಮಲ್ಟಿ ಟಾಸ್ಕಿಂಗ್ ಪ್ರಿಯರು. ಅಷ್ಟೊಂದು ಕೆಲಸ ಮಾಡುವುದರ ಜೊತೆಗೆ ಒಂದೊಂದು ಸಮಸ್ಯೆಗಳು ಕಾಣಿಸಿಕೊಂಡರೆ ತುಂಬಾನೆ ಇರಿಟೇಟ್ ಆಗುತ್ತದೆ ಅಲ್ವಾ?
ನಿಮಗೆ ಯಾವುದೆ ಸಮಸ್ಯೆಗಳು ಕಾಡಬಾರದು, ಹೆಲ್ತಿಯಾಗಿರಬೇಕು ಎಂದು ಬಯಸಿದರೆ ಈ ಹೆಲ್ತಿ ಟಿಪ್ಸ್‌ಗಳನ್ನು ನೀವು ಪಾಲಿಸಬೇಕು…
ನಿದ್ರೆಯನ್ನು ಕಡೆಗಣಿಸಬೇಡಿ : ಸಮಯ ಸಂದರ್ಭ ಎಂತಹುದೆ ಇರಲಿ ನೀವು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬೇಕು. 8 ಗಂಟೆಗಳ ನಿದ್ರೆ ನಿಮಗೆ ಬೇಕಾಗುತ್ತದೆ. ಅದನ್ನು ತಪ್ಪಿಸಬೇಡಿ. ನಿಮ್ಮ ದೇಹದ ಪ್ರಕೃತಿಯ ವಿರುದ್ಧ ಹೋದರೆ ಅದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸರಿಯಾದ ಸಮಯಕ್ಕೆ ಆಹಾರ : ಬೇಕಾ ಬಿಟ್ಟಿಯಾಗಿ ಆಹಾರ ಸೇವನೆ ಮಾಡಬೇಡಿ. ಅದು ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯಾಗಿರಲಿ, ಒಂದೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಬೆಳಗ್ಗೆ 8 ಅಥವಾ 9 ಗಂಟೆಗೆ ತಿಂಡಿ ತಿಂದರೆ, 11 ಗಂಟೆಯ ಸಮಯಕ್ಕೆ ಹಣ್ಣುಗಳ ಸೇವನೆ ಮಾಡಿ. ಮಧ್ಯಾಹ್ನ 1 ಗಂಟೆ ಹಾಗೂ ರಾತ್ರಿ 8 ಅಥವಾ 9 ಗಂಟೆಗೆ ಆಹಾರ ಸೇವಿಸಿ.
ಯಾವತ್ತಾದರು ಒಂದು ದಿನ ಸ್ಟ್ರೀಟ್ ಫುಡ್ ಸೇವಿಸಿ : ಸ್ಟ್ರೀಟ್ ಫುಡ್ ಸೇವಿಸುವ ಕ್ರೇಜ್ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಂತ ಪ್ರತಿದಿನ ಅದನ್ನೆ ಸೇವಿಸುತ್ತಿರಬೇಡಿ. ಯಾವತ್ತಾದರೂ ಒಂದು ದಿನ ಇದನ್ನು ಸೇವಿಸುವುದು ಉತ್ತಮ. ಪ್ರತಿದಿನ ತಿಂದರೆ ಆರೋಗ್ಯ ಬೇಗನೆ ಹಾಳಾಗುತ್ತದೆ.
ಯೋಗ ಮತ್ತು ಧ್ಯಾನ : ಯೋಗ ಅಥವಾ ಧ್ಯಾನ ಮಾಡುವುದರಿಂದ ದೇಹ ಹಾಗೂ ಮನದ ಎಲ್ಲಾ ಸಮಸ್ಯೆ ದೂರವಾಗುತ್ತದೆ. ಮನಸ್ಸು ಶಾಂತವಾಗುತ್ತದೆ. ಇದನ್ನು ಪ್ರತಿ ದಿನ ಮಾಡುವುದರಿಂದ ಕೆಲಸವನ್ನು ಯಾವುದೆ ಸ್ಟ್ರೆಸ್ ಇಲ್ಲದೆ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ನೀವು ಯಾವುದೆ ಸಮಸ್ಯೆ ಇಲ್ಲದೆ ಹೆಲ್ತಿಯಾಗಿರಬಹುದು.
ಜೀವನದ ಬಗ್ಗೆ ಸಕಾರಾತ್ಮಕ ಯೋಚನೆ : ಹೌದು ಇದು ತುಂಬಾನೆ ಮುಖ್ಯ. ಜೀವನದಲ್ಲಿ ಅದಷ್ಟೇ ಕಷ್ಟ ಬಂದರೂ ಸಹ ಅದನ್ನು ಎದುರಿಸಿ, ಸಕರಾತ್ಮಕವಾಗಿ ಜೀವಿಸಿ. ನೀವು ಪೊಸಿಟಿವ್ ಆಗಿದ್ದರೆ ಯಾವ ಸಮಸ್ಯೆಗಳು ಸಹ ನಿಮ್ಮನ್ನು ಕಾಡುವುದಿಲ್ಲ.