ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಮತ್ತೊಂದು ಗರಿಮೆಗೆ ಪಾತ್ರವಾಗಿದೆ. ಜಗತ್ತಿನ ಶ್ರೀಮಂತ ನಗರಗಳಲ್ಲಿ ಮುಂಬೈ ಸ್ಥಾನ ಪಡೆದಿದೆ.

ವಿಶ್ವದ ಆಗ್ರ 15 ಶ್ರೀಮಂತ ನಗರಗಳಲ್ಲಿ ವಾಣಿಜ್ಯ ನಗರಿ ಮುಂಬೈ 12ನೇ ಸ್ಥಾನದಲ್ಲಿದ್ದು, ನಗರದ ಒಟ್ಟು ಆಸ್ತಿ 61.75 ಲಕ್ಷ ಕೋಟಿ (USD 950 billion) ರೂಪಾಯಿ ಎಂದು ನ್ಯೂ ವರ್ಲ್ಡ್‌‌ ವೆಲ್ತ್‌‌ ವರದಿ ಹೇಳಿದೆ.

RELATED ARTICLES  ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಶ್ರೀಮಂತ ನಗರಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ನ್ಯೂಯಾರ್ಕ್‌ ಇದ್ದು, ಇಲ್ಲಿನ ಒಟ್ಟು ಆಸ್ತಿ 195 ಲಕ್ಷ ಕೋಟಿ (USD 3 trillion) ಯಾಗಿದೆ. ನ್ಯೂಯಾರ್ಕ್‌ ನಂತರದಲ್ಲಿ ಲಂಡನ್‌ (USD 2.7 trillion), ಟೋಕಿಯೋ (USD 2.5 trillion), ಸ್ಯಾನ್‌ ಫ್ರಾನ್ಸಿಸ್ಕೋ (USD 2.3 trillion) ನಗರಗಳು ಕ್ರಮವಾಗಿ ಸ್ಥಾನ ಪಡೆದಿವೆ.

ಮುಂಬೈನಲ್ಲಿ 28 ಜನ ಬಿಲಿಯನೇರ್‌ಗಳು ಇದ್ದಾರೆ ಎಂದು ವರದಿ ಹೇಳಿದ್ದು, ನಗರದ ಆಸ್ತಿ ಅಮೆರಿಕಾ ಡಾಲರ್‌‌ನಲ್ಲಿ 950 ಬಿಲಿಯನ್‌ ಆಗಿದೆ. ಮುಂಬೈ ಭಾರತದ ಆರ್ಥಿಕ ಕೇಂದ್ರ. ನಗರದಲ್ಲಿ ಷೇರು ಮಾರುಕಟ್ಟೆ ಇದ್ದು, ಇದು ಜಗತ್ತಿನ 12ನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿದೆ. ಅಲ್ಲದೇ, ಹಣಕಾಸು ಸೇವೆ, ರಿಯಲ್‌ ಎಸ್ಟೇಟ್‌, ಮಾಧ್ಯಮ ಸಂಸ್ಥೆಗಳು ಮುಂಬೈನಲ್ಲಿವೆ ಎಂದು ನ್ಯೂ ವರ್ಲ್ಡ್‌‌ ವೆಲ್ತ್‌‌ ಹೇಳಿದೆ.

RELATED ARTICLES  ಜಿಂಕೆ ಕೋಡು, ಕಾಡು ಬೆಕ್ಕಿನ ದವಡೆ ಹಲ್ಲನ್ನು ಸಂಗ್ರಹಿಸಿದ ವ್ಯಕ್ತಿ ಅರೆಸ್ಟ್..!