ಕುಮಟಾ: ತಾಲೂಕಿನ ಹನೇಹಳ್ಳಿ ಪಂಚಾಯತಿಯಲ್ಲಿ ಲೋಕೋಪಯೋಗಿ ಇಲಾಖೆ ಲೆಕ್ಕ ಶೀರ್ಷಿಕೆ 5054 ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಯೋಜನೆಯಡಿ ಅಂದಾಜು 3 ಕೋಟಿ 95 ಲಕ್ಷ ಅನುದಾನದ ಹನೇಹಳ್ಳಿ-ಸಿದ್ಧೇಶ್ವರ ರಸ್ತೆ ಸುಧಾರಣೆ ಕಾಮಗಾರಿಗೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

RELATED ARTICLES  ಭಟ್ಕಳ‌ ಕಸಾಪದಿಂದ ದಸರಾ ಕಾವ್ಯೋತ್ಸವ ಸಂಪನ್ನ

ಕಾಮಗಾರಿಯ ಸದುಪಯೋಗ ಜನತೆಗೆ ದೊರೆಯಲಿ, ನನ್ನಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಯೋಜನೆಗಳ ಅನುಷ್ಟಾನಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಅರುಣ್ ಗೌಡ, ಸುಮಿತ್ರ ಗೌಡ, ಹನೀಫ ಸಾಬ, ಆನಂದು ನಾಯಕ ಹಾಗೂ ವಿಜಯ ಹೊಸ್ಕಟ್ಟ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಗೋಕರ್ಣದ ಹಲವು ಟ್ಯಾಟೂ ಅಂಗಡಿಗೆ ಬೀಗ..!