ಯಲ್ಲಾಪುರ : ಪಟ್ಟಣದ ಪಟ್ಟಣ ಪಂಚಾಯಿತಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ವೊಂದರಲ್ಲಿ ಶನಿವಾರ ರಾತ್ರಿ ಟ್ಯಾಂಕರ್ ಒಂದು ನುಗ್ಗಿ ಬಹುತೇಕ ಕಟ್ಟಡದ ಎರಡು ಅಂಗಡಿಗಳಿಗೆ ಧಕ್ಕೆ ತಂದಿದೆ.
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಿಸುತ್ತಿದ್ದ ಟ್ಯಾಂಕರ್ ನ ಚಾಲಕ ನಿದ್ದೆಗಣ್ಣಿನಲ್ಲಿ ಟ್ಯಾಂಕರನ್ನು ಅತಿ ವೇಗವಾಗಿ ರಸ್ತೆಯ ಬಲಬದಿ ಸಂಕೀರ್ಣಕ್ಕೆ ನುಗ್ಗಿಸಿದ್ದಾನೆ.
ಇಂದು ರವಿವಾರ ಸಂತೆ ನಡೆಯುತಿದ್ದು ನಿನ್ನೆ ರಾತ್ರಿಯೇ ಸಂತೆಗೆ ಬರುವ ಬಹಳಷ್ಟು ಬೀದಿ ಬದಿಯ ವ್ಯಾಪಾರಿಗಳು ಸಂಕೀರ್ಣದ ಎದುರುಗಡೆ ಒಂದು ದಿನ ಮೊದಲೇ ಬಂದು ನಿದ್ದೆ ಮಾಡುತ್ತಿದ್ದರು. ಅದೃಷ್ಟಕ್ಕೆ ಯಾರೂ ಕೂಡ ಸಂಕೀರ್ಣದ ಹೊರಗಡೆ ಮಲಗಿರಲಿಲ್ಲ. ಒಂದು ವೇಳೆ ತರಕಾರಿ ವ್ಯಾಪಾರಸ್ಥರೂ ಹಾಗೂ ಬೀದಿ ಬದಿಯ ಇತರೆ ವ್ಯಾಪಾರಸ್ಥರು ಮಲಗಿದ್ದರೆ, ಸಾಕಷ್ಟು ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು,
ಆಗಬಹುದಾದ ಬಹು ದೊಡ್ಡ ಅಪಘಾತ ತಪ್ಪಿದಂತಾಗಿದೆ ಟ್ಯಾಂಕರ್ ಚಾಲಕನಿಗೆ ಕೂಡ ಯಾವುದೇ ರೀತಿಯ ಗಂಭೀರ ಗಾಯಗಳಾಗದೆ ಆತನನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಕಿರಾಣಿ ಅಂಗಡಿ ಮತ್ತು ಟಿವಿ ದುರಸ್ತಿ ಮಾಡುವ ಅಂಗಡಿ ಎರಡು ಅಂಗಡಿಗಳು ಅರ್ಧಕ್ಕೂ ಹೆಚ್ಚು ಹಾನಿಗೊಳಗಾಗಿದ್ದು ಹಾನಿಯ ಮೊತ್ತ ಹತ್ತು ಲಕ್ಷಕ್ಕೂ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.