ಕುಮಟಾ: ಅಘನಾಶಿನಿ ಸಂಭ್ರಮ ಸಮೀತಿ ಹಾಗೂ ಶ್ರೀ ಯಶೋಧರ ನಾಯ್ಕ ಟ್ರಸ್ಟ ಇವರ ಸಂಯುಕ್ತ ಆಶ್ರಯದಲ್ಲಿ 2 ದಿನಗಳ ಕಾಲ ನಡೆಯುವ ಕುಮಟಾ ತಸಲೂಕಿನ ಅಘನಾಶಿನಿ ನದಿ ತಟದ ಅಘನಾಶಿನಿ ಸಂಭ್ರಮಕ್ಕೆ ಚಾಲನೆ ದೊರೆಯಿತು.
ಬಕ್ತಿ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಬಗೊಂಡು ಸರ್ವರನ್ನು ಸಮೀತಿ ವತಿಯಿಂದ ಸ್ವಾಗತಿಸಲಾಯಿತು.ದಿವಾಕರ ಅಘನಾಶಿನಿ ಸಂಬ್ರಮದ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿದರು.ಕರಾವಳಿ ಮುಂಜಾವು ಪತ್ರಿಕೆಯ ಪ್ರದಾನ ಸಂಪಾದಕರಾದ ಶ್ರೀ ಗಂಗಾಧರ ಹಿರೆಗುತ್ತಿ ಹಾಗೂ ಗಣ್ಯರು ಕಾರ್ಯಕ್ರಮವನ್ನ ಉದ್ಗಾಟಿಸಿದರು.ನಂತರ ಶಾರದಾ ಕೆ ದೇಸಾಯಿ.ಗಣಪತಿ ನಾವಡ.ನರಹರಿ ಜಿ ನಾಯ್ಕ. ಲಕ್ಷ್ಮೀಕಾಂತ ಲಕ್ಕೂಮನೆ. ಪುರುಷೋತ್ತಮ ಹರಿಕಾಂತ. ಈಶ್ವರ ಜಟ್ಟಿ ಅಂಬಿಗ. ಚಂದ್ರಕಾಂತ ಲಕ್ಕೂಮನೆ.ತಮ್ಮಾಣಿ ಹರಿಕಾಂತ ಇವರನ್ನ ಸನ್ಮಾನಿಸಲಾಯಿತು.ಉಧ್ಗಾಟಕರಾದ ಹಿರೇಗುತ್ತಿ ಮಾತನಾಡಿ ಯಶೋಧರ ನಾಯ್ಕ ಅವರ ಅತ್ಮೀಯತೆ ನನ್ನನ್ನ ಈ ಕಾರ್ಯಕ್ರಮಕ್ಕೆ ಸೆಳೆದು ತಂದಿದೆ ಎಂದರು.ಮುಖ್ಯ ಅತಿಥಿಗಳಾಗಿ ಅಗಮಿಸಿದ ಕುಮಟಾ ಎ ವಿ ಬಾಳಿಗಾ ಕನ್ನಡ ಉಪನ್ಯಾಸಕರಾದ ಡಾ: ಜಿ ಎಲ್ ಹೆಗಡೆಯವರು ಮಾತನಾಡಿ ನಾವು ಮನುಷ್ಯ ಜಾತಿಯಲ್ಲಿ ಹುಟ್ಟಿದ್ದೇವೆ ಜಾತಿ ಅದಾರಿತ ಬದುಕನ್ನ ತೊರೆದು ಮನುಷ್ಯರಾಗಿ ಬಾಳೋಣ ಎಂದರು.
ಹೊನ್ನಾವರ ಪೋಲೀಸ್ ಠಾಣೆಯ ಪೋಲೀಸ ಉಪನಿರೀಕ್ಷಕರಾದ ಶ್ರೀಮತಿ ಸುದಾ ನಾಗರಾಜ ಹರಿಕಾಂತ ಅವರನ್ನ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು ತನ್ನ ಈ ಯಶಸ್ಸಿಗೆ ಕಾರಣರಾದ ಸರ್ವರನ್ನೂ ಅಭಿನಂದಿಸಿದರು.ಉದ್ಯಮಿ ಹರೀಶ ಶೇಟ ಮಾತನಾಡಿ ಈ ಕ್ಷೇತ್ರನ್ನ ಪ್ರವಾಸಿ ತಾಣವಾಗಿಸುವಲ್ಲಿ ಸರಕಾರ ಮನಸ್ಸು ಮಾಡಬೇಕು ಎಂದರು.ಮಮತಾ ನಾಯ್ಕ ಹಾಗೂ ಮಹೇಶ ಅಗೇರ ಮಾತನಾಡಿದರು. ಕೊನೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಯಶೋಧರ ನಾಯ್ಕ ಅವರು ಸಂಭ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೀತಾ ಅಗೇರ ವೆಂಕಟ್ರಮಣ ಗೌಡ.ಉದ್ಯಮಿ ಜಗದೀಶ ನಾಯಕ್.ಈಶ್ವರ ನಾಯ್ಕ
ನಾಗಪ್ಪ ಲಕ್ಕುಮನೆ.ಯಶ್ವಂತ ಅಂಬಿಗ ಉಪಸ್ಥಿತರಿದ್ದರು.