ಹೊನ್ನಾವರ .ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯ ಮಾಪನ ಕೇಂದ್ರ ಕಾರವಾರ ಹಾಗೂ ಶಿರಸಿಗಳಲ್ಲಿ ನಡೆಯುತ್ತಿದ್ದು ಇದು ಶಿಕ್ಷಕರಿಗೆ ತೊಂದರೆಯುಂಟು ಮಾಡುತ್ತಿದೆ ಎಂದು ಹೊನ್ನಾವರ ಭಟ್ಕಳ ಶಿಕ್ಷಕರು ಶಾಸಕರಲ್ಲಿ ದೂರು ನೀಡಿದ್ದಾರೆ.

ಭಟ್ಕಳದಿಂದ ಕಾರವಾರ ಬಹಳ ದೂರವಾಗಿದ್ದು ಶಿಕ್ಷಕ ಶಿಕ್ಷಕಿಯರು ತೊಂದರೆಯನ್ನು ಅನುಭವಿಸುವಂತೆ ಮಾಡುತ್ತಿದೆ ಎಂದು ಮನವಿ ಪತ್ರ ಬರೆದು ಸಹಿ ಸಂಗ್ರಹಿಸಿ ಶಾಸಕರಿಗೆ ನೀಡಿದ್ದಾರೆ. ಕಾರವಾರ ನಗರವು ತೀರಕ್ಕೆ ಹತ್ತಿರದಲ್ಲಿದ್ದು ಶಿಕ್ಷಕರಿಗೆ ಬಿಸಿಲ ಬೇಗೆಯಿಂದ ಹಾಗೂ ಕಡಲೆಡೆಯಿಂದ ಬೀಸಿ ಬರುವ ಉಪ್ಪು ಮಿಶ್ರಿತ ಗಾಳಿಯಿಂದ ಬಹಳ ತೊಂದರೆಯಾಗುತ್ತಿದೆ. ಅದರ ಬದಲಾಗಿ ಕುಮಟಾದಲ್ಲಿ ಮೌಲ್ಯ ಮಾಪನ ಕೇಂದ್ರ ಎಲ್ಲಾ ವಿಷಯಗಳಿಗಾಗಿ ಶಾಶ್ವತವಾಗಿ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.

RELATED ARTICLES  ನಾಮಧಾರಿ ಮುಖಂಡ ಎಮ್.ಎಲ್.ನಾಯ್ಕ ನಿಧನ

ಮೌಲ್ಯ ಮಾಪನದಲ್ಲಿ ಉಂಟಾಗುವ ತಪ್ಪುಗಳನ್ನು ಕಡಿಮೆ ಮಾಡಲು ಸಾಧ್ಯವಿದೆ. ಕುಮಟಾದಲ್ಲಿ ಡೈಟ್ ಇದ್ದು ಉಪನಿರ್ದೇಶಕರು ಇಲ್ಲಿರುತ್ತಾರೆ. ಆದ್ದರಿಂದ ಈ ವರ್ಷದ ಎಲ್ಲಾ ವಿಷಯದ ಮೌಲ್ಯ ಮಾಪನವನ್ನು ಕುಮಟಾದಲ್ಲಿ ಮಾಡಬೇಂದು ಒತ್ತಾಯಿಸಿದ್ದಾರೆ.

RELATED ARTICLES  ಕಣ್ಮನ ಸೆಳೆದ ' ನೂಪುರ ನಾದ ' : ಸೌಮ್ಯ ಸಿರಿ ಪ್ರಶಸ್ತಿ ಪ್ರದಾನ.