ಬಾಡ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ಕಾನೂನಾತ್ಮಕವಾಗಿ ಹೊಸ ಆಡಳಿತ ಮಂಡಳಿಗೆ ಹಸ್ತಾಂತರವಾಗಿದೆ.
ಕುಮಟಾ ತಾಲೂಕಿನ ಬಾಡ ಗ್ರಾಮದ ಗ್ರಾಮ ದೇವಿ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತವನ್ನು ಇಂದು ತಾಲೂಕು ದಂಡಾಧಿಕಾರಿ ಮೇಘರಾಜ್ ನಾಯ್ಕ್ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ನೂತನ ನೇಮಕಗೊಂಡ ಆಡಳಿತ ಮಂಡಳಿಗೆ ಕಾನೂನಾತ್ಮಕವಾಗಿ ದೇವಸ್ಥಾನದ ಆಡಳಿತವನ್ನು ಹಸ್ತಾಂತರಿಸಿದರು.
ಹಳೆ ಆಡಳಿತ ಮಂಡಳಿ ನೂತನವಾಗಿ ನೇಮಕ ಗೊಂಡಿರುವ ಹೊಸ ಆಡಳಿತ ಮಂಡಳಿಗೆ ಆಡಳಿತ ಹಸ್ತಾಂತರಿಸದ ಹಿನ್ನೆಲೆಯಲ್ಲಿ, ಇಂದು ತಾಲೂಕು ದಂಡಾಧಿಕಾರಿ ಮೇಘರಾಜ್ ನಾಯ್ಕ್ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ನೂತನ ಆಡಳಿತ ಮಂಡಳಿಗೆ ದೇವಸ್ಥಾನದ ಆಡಳಿತವನ್ನು ಹಸ್ತಾಂತರಿಸಿದರು.
ಕಳೆದ ಕೆಲ ದಿನಗಳ ಹಿಂದೆ ಬಾಡದ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಜಿಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಹೊಸದಾಗಿ ೯ ಜನ ಸದಸ್ಯರನ್ನು ನೇಮಿಸಿತ್ತು. ಈ ೯ ಜನ ಸದಸ್ಯರು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಜೆ.ಎಸ್ ನಾಯ್ಕ್ ಅವರನ್ನೂ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು.
ನೂತನವಾಗಿ ನೇಮಕ ಗೊಂಡಿರುವ ಜೆ.ಎಸ್ ನಾಯ್ಕ್ ಅಧ್ಯಕ್ಷತೆಯ ಆಡಳಿತ ಸಮೀತಿಗೆ ಹಳೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಿ.ಕೆ ಪಟಗಾರ ಅವರು ಆಡಳಿತ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಇಂದು ಕಾನೂನಾತ್ಮಕವಾಗಿ ನೂತನ ಕಮಿಟಿಗೆ ಆಡಳಿತ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಮೇಘರಾಜ ನಾಯ್ಕ್ ಹಾಗೂ ಪಿ.ಎಸ್.ಐ ಶಶಿಕುಮಾರ್ , ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್.ನಾಯ್ಕ್ ಮತ್ತು ಸದಸ್ಯರು, ಗ್ರಾಮಸ್ಥರು ಇದ್ದರು.