ಕಾರವಾರ : ತಾಲ್ಲೂಕಿನ ಸಿದ್ದರ ಗ್ರಾಮದ 28ರ ಹರೆಯದ ಸುಶಾಂತ ಮಧುಕರ ಅಣ್ವೇಕರ್ ಎಂಬುವರು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ‘ಟ್ರಾನ್ಸ್ ಸಹ್ಯಾದ್ರಿ’ ಅಭಿಯಾನ ಪೂರ್ಣಗೊಳಿಸಿದ್ದಾರೆ.

ಬಾಲ್ಯದಿಂದಲೇ ಮೌಂಟ್ ಎವರೆಸ್ಟ್‌ ಪರ್ವತವನ್ನು ಏರುವ ಕನಸು ಕಾಣುತ್ತಿರುವ ಇವರು ‘ಮೌಂಟೇನರಿಂಗ್’ ಎಂಬ ಕೋರ್ಸ್‌ ಸಹ ಪಡೆಯುತ್ತಿದ್ದಾರೆ. ಅದರ ಭಾಗವಾಗಿಯೇ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಪರೀಕ್ಷಿಸಿಕೊಳ್ಳಲು ಸಹ್ಯಾದ್ರಿ ಬೆಟ್ಟಗಳಲ್ಲಿ ಚಾರಣ ಕೈಗೊಂಡು ಈಗ ಯಶಸ್ವಿಯಾಗಿದ್ದಾರೆ.

40 ದಿನಗಳ ಬರಿಗಾಲಿನ ಸಂಚಾರ:  ಜ.7ರಂದು ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಸಾಹ್ಲೆರಗಡದಿಂದ ಅಭಿಯಾನ ಆರಂಭಿಸಿದ್ದ ಇವರು ಬರಿಗಾಲಿನಲ್ಲಿ 40 ದಿನಗಳ ಸಂಚಾರ ನಡೆಸಿ ಶುಕ್ರವಾರ ಸಿದ್ದರದ ಸ್ವಗ್ರಹಕ್ಕೆ ತಲುಪಿದ್ದಾರೆ.

RELATED ARTICLES  ಹೊಳೆಯಲ್ಲಿ ಈಜಲು ಹೋದ ಯುವಕ ನೀರುಪಾಲು.

‘ಒಟ್ಟು 1,200 ಕಿ.ಮೀ. ಬರಿಗಾಲಿನಲ್ಲಿ ಕ್ರಮಿಸಿದ್ದೇನೆ. ಪ್ರತಿ ದಿನ 30ರಿಂದ 40 ಕಿ.ಮೀ. ನಡೆಯುತ್ತಿದ್ದೆ. ಸಾಹ್ಲೆರಗಡದಿಂದ ಪಾಂಡವಗಡ ಮಾರ್ಗವಾಗಿ ದಾಂಡೇಲಿಯ ಅಣಶಿ ಘಟ್ಟದ ಮೂಲಕ ಮನೆಗೆ ತಲುಪಿದೆ. ಈ ಅಭಿಯಾನದ‌ಲ್ಲಿ ಸಾಕಷ್ಟು ವನ್ಯ ಜೀವಿಗಳು ಕಣ್ಣಿಗೆ ಬಿದ್ದವು. ಪ್ರಕೃತಿಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದೇನೆ’ ಎನ್ನುತ್ತಾರೆ ಸುಶಾಂತ.

26 ಕೋಟೆಗೆ ಭೇಟಿ:‘ಪ್ರಯಾಣದ ಸಂದರ್ಭದಲ್ಲಿ ಹಳ್ಳಿ ಗಾಡಿನ ಜನರನ್ನು ಕೂಡ ಭೇಟಿ ಮಾಡಿದೆ. ಅವರೊಂದಿಗೆ ಸಮಯ ಕಳೆದೆ. ಈ ನಡುವೆ ಛತ್ರಪತಿ ಶಿವಾಜಿ ಮಹಾರಾಜರ ಸುಮಾರು 26 ಕೋಟೆಗಳಿಗೆ ಭೇಟಿ ನೀಡಿದೆ. ಈ ಅಭಿಯಾನಕ್ಕೆ ಹೆಚ್ಚೇನು ವೆಚ್ಚ ಮಾಡಿಲ್ಲ. ಊಟ– ತಿಂಡಿಗಳನ್ನು ನಾನೇ ತಯಾರಿಸಿಕೊಳ್ಳುತ್ತಿದ್ದೆ. ಅದಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಜತೆಯಲ್ಲೇ ಕೊಂಡೊಯ್ದಿದ್ದೆ. ಈ ಪ್ರಯಾಣ ಹೊಸ ಅನುಭವ ನೀಡಿತು’ ಎನ್ನುತ್ತಾರೆ ಅವರು.

RELATED ARTICLES  ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಡಾ.ಎ.ವಿ.ಬಾಳಿಗಾ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಚಾರಣವೇ ಕಾಯಕ: ಮೂಲತ ಕಾರವಾ ರದವರಾಗಿರುವ ಅವರು, ಕೊಲ್ಲಾಪುರದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಮುಂಬೈ, ಪುಣೆಗಳಲ್ಲಿ ಪರ್ವತಾರೋಹಿಗಳನ್ನು ಚಾರ ಣಕ್ಕೆ ಕರೆದೊಯ್ಯುವುದು ಅವರ ಕಾಯಕ.