ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನ ನಮ್ಮ ಸರ್ಕಾರಕ್ಕೆ 2.86 ಲಕ್ಷ ರೂ.ಗಳ ಬಿಲ್ ನೀಡಿದೆ. ಯಾಕೆ ಗೊತ್ತಾ?
ಹೌದು… ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಆಫ್ಘಾನಿಸ್ಥಾನ, ಇರಾನ್ ಹಾಗೂ ಕ್ವತಾರ್‌ಗೆ ಪ್ರಯಾಣಿಸುವ ವೇಳೆ ಅವರ ವಿಮಾನ ಪಾಕಿಸ್ಥಾನದ ಪಾಕಿಸ್ಥಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಹೀಗಾಗಿ ರೂಟ್ ನ್ಯಾವಿಗೇಶನ್ ಚಾರ್ಜ್ ಎಂದು ಈ ಬಿಲ್ ನೀಡಿದೆ.
ಮಾಹಿತಿ ಹಕ್ಕು ಅಡಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
2016ರ ಇಂಡಿಯನ್ ಏರ್ ಫೋರ್ಸ್ ವಿಮಾನ ಬಳಸಿ ಪ್ರಧಾನಿ ಮೋದಿ ನೇಪಾಳ, ಭೂತಾನ್, ಬಾಂಗ್ಲಾದೇಶ, ಆಫ್ಘಾನಿಸ್ಥಾನ, ಕ್ವತಾರ, ಆಸ್ಟ್ರೇಲಿಯಾ, ಪಾಕಿಸ್ಥಾನ, ರಷ್ಯಾ, ಇರಾನ್, ಫಿಜಿ ಹಾಗೂ ಸಿಂಗಾಪುರ್‌ಗಳಿಗೆ ಪ್ರಯಾಣಿಸಿದ್ದಾರೆ.
ಕಳೆದ 2015ರ ಡಿಸೆಂಬರ್ 25ರಂದು ರಷ್ಯಾ, ಆಫ್ಘಾನಿಸ್ಥಾನದಿಂದ ಭಾರತಕ್ಕೆ ಹಿಂತಿರುಗುವ ವೇಳೆ ಪ್ರಧಾನಿ ಮೋದಿ ಪಾಕಿಸ್ಥಾನದ ಲಾಹೋರ್‌ಗೆ ಭೇಟಿ ನೀಡಿ ಅಲ್ಲಿನ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿಯಾಗಿದ್ದರು. ಇದಕ್ಕಾಗಿ, ರೂಟ್ ನ್ಯಾವಿಗೇಶನ್ ದರ ಎಂದು ಪಾಕಿಸ್ಥಾನ 1.49 ಲಕ್ಷ ರೂ.ಗಳ ಬಿಲ್ ನೀಡಿದೆ.
ಇನ್ನು, 2016ರ ಮೇ 22-23ರಂದು ವಿಮಾನ ನಿಲ್ದಾಣ ಬಳಸಿದ್ದಕ್ಕಾಗಿ 77,215 ರೂ., 2016ರ ಜೂನ್ 4-6ರಂದು ಕ್ವತಾರ್‌ಗೆ ಭೇಟಿ ನೀಡಿದ ವೇಳೆ ಏರ್ ಟ್ರಾಫಿಕ್ ಬಳಕೆಗಾಗಿ 59,215 ರೂ.ಗಳನ್ನು ಪಾಕ್ ವಿಧಿಸಿದೆ.