ಜಮ್ಮು ಕಾಶ್ಮೀರಲ್ಲಿ ಇತ್ತೀಚೆಗೆ ಕಟ್ಟಡವೊಂದಕ್ಕೆ ನುಗ್ಗಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭಾರತದ ಮಿಲಿಟರಿ ಪಡೆಯಲ್ಲಿ ಇದ್ದಾರೆ ಇಬ್ಬರು ಕರಾವಳಿಗರು!

ಒಬ್ಬರು ಸುರತ್ಕಲ್ ನ ಕೃಷ್ಣಾಪುರದ ಸತೀಶ್ ಮತ್ತೊಬ್ಬರು ಪುತ್ತೂರು ಕಡಬದ ಹಳೆ ನೇರಂಕಿಯ ಜುಬೈರ್. ಇಬ್ಬರೂ ಅಪ್ಪಟ ಕರಾವಳಿಯ ವೀರ ಯೋಧರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತೇವೆಂದು ಪಣ ತೊಟ್ಟ ಇವರ ಕಾರ್ಯಾಚರಣೆಯ ಅನುಭವ ಹೇಗಿತ್ತು ಗೊತ್ತಾ?

‘ಅಂದು ಫೆಬ್ರವರಿ 13 ಮುಂಜಾನೆ ಸುಮಾರು 4:30 – 4:45ರ ಸಮಯ. ಆಗ ನಮ್ಮ ಎಲ್ಲಾ ಕ್ವಿಕ್ ಆಕ್ಷನ್ ತಂಡಗಳಿಗೆ ಒಂದು ಸಂದೇಶ ರವಾನೆಯಾಯಿತು. ಜಮ್ಮುಕಾಶ್ಮೀರದ ಕರಣ್ ನಗರದಲ್ಲಿ ಭಾರತೀಯರ ಯೋಧರ ಮೇಲೆ ದಾಳಿ ಮಾಡಲು ಬಂದಿದ್ದ ಉಗ್ರ ತಮ್ಮ ಕಾರ್ಯ ಫಲಿಸದೆ, ನಿರ್ಮಾಣ ಹಂತದಲ್ಲಿರುವ ಕಟ್ಟಡವೊದರಲ್ಲಿ ಅಡಗಿ ಕುಳಿತಿದ್ದಾರೆ ಅವರನ್ನು ಸದೆಬಡಿಯಬೇಕೆಂದು’.

RELATED ARTICLES  ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್

‘ಕೂಡಲೇ ಕಾರ್ಯಪ್ರವೃತ್ತರಾದ ನಾವು ಕಟ್ಟಡದ ಸುತ್ತಲೂ ನಿರಂತರವಾಗಿ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದೆವು. ಸುಮಾರು ಒಂದೂವರೆ ದಿನಗಳ ನಿರಂತರ ಕಾರ್ಯಾಚರಣೆಯಲ್ಲಿ ಕೊನೆಗೂ ಆ ಉಗ್ರರಿಬ್ಬರೂ ಹತರಾದರು. ಆ ಕ್ಷಣ ಊಹಿಸಿಕೊಳ್ಳಲೂ ಅಸಾಧ್ಯ. ಉಗ್ರರಿಬ್ಬರನ್ನು ನಾಶ ಮಾಡಿದ ಸಂತಸ ಮನದಲ್ಲಿ ಕುಣಿಯುತ್ತಿತ್ತು’ ಎಂದು ಪ್ರಸ್ತುತ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ತಮ್ಮ ಅನುಭವವನ್ನು ಹಂಚಿಕೊಂಡರು.

RELATED ARTICLES  ಕುದಿವ ಎಣ್ಣೆಯಿಂದ ಬರಿಗೈಯಲ್ಲಿ ವಡೆ ತೆಗೆದು ಭಕ್ತಿಯ ಪರಾಕಾಷ್ಠೆ ಮೆರದ ಅಯ್ಯಪ್ಪ ಮಾಲಾಧಾರಿಗಳು.

ಇನ್ನು ಇನ್ನೊಂದು ತಂಡದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಜುಬೈರ್ ತಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಟ್ಟಿದ್ದು ಹೀಗೆ; ‘ ನಮ್ಮ ಶಿಬಿರದಿಂದ 16 ಕಿಮೀ ದೂರದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ರವಾನೆಯಾದ ಕೂಡಲೇ ನಾವು ಅಲ್ಲಿಗೆ ದೌಡಾಯಿಸಿ ಸತತ 32 ಗಂಟೆಗಳ ಕಾರ್ಯಾಚರಣೆ ನಂತರ ಅವರನ್ನು ನಾಶಪಡಿಸುವಲ್ಲಿ ಯಶಸ್ವಿಯಾದೆವು’

ಅದೊಂದು ನನ್ನ ಜೀವನದ ಅತ್ಯಮೂಲ್ಯ ಕ್ಷಣ. ದೇಶಸೇವೆ ಮಾಡುವ ತುಡಿತ ಇನ್ನಷ್ಟು ಹೆಚ್ಚಾಗಿದೆ’ ಎಂದ ಜುಬೈರ್ ಕಾರ್ಯಾಚರಣೆಗೆ ಮೆಚ್ಚಿ ಭಾರತೀಯ ಸೇನೆ ಡಿಸ್ಕ್ ಅವಾರ್ಡ್ ಕೊಟ್ಟು ಪುರಸ್ಕರಿಸಿದೆ.