ಕುಮಟಾ: ತಾಲೂಕಿನ ಅಘನಾಶಿನಿ ನದಿ ತಟದಲ್ಲಿ ಅಘನಾಶಿನಿ ಸಂಭ್ರಮ ಸಮಿತಿ ಹಾಗೂ ಶ್ರೀ ಯಶೋಧರ ನಾಯ್ಕ ಟ್ರಸ್ಟ ಸಂಯುಕ್ತಾಶ್ರಯದಲ್ಲಿ 2 ದಿನಗಳ ಅಘನಾಶಿನಿ ಸಂಭ್ರಮ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷರಾದ ಅರವಿಂದ ಕರ್ಕಿಕೋಡಿ ಹಾಗೂ ಗಣ್ಯರು ನೆರವೇರಿಸಿದರು.
ಈ ಸಂದರ್ಬದಲ್ಲಿ ವಿನಾಯಕ.ಜಿ.ಸಭಾಹಿತ.ದೇವು ಜಟ್ಟು ಗೌಡ.ರಘುವೀರ ನಾರಾಯಣ ನಾಯ್ಕ.ಮೋಹನ ಮಂಜು ಪಡಿಯಾ.ಕೇಶವ ಕಾಳು ಪಟಗಾರ.ನಾಗೇಶ ಕಾಮೇಶ್ವರ ನಾಯ್ಕ.ಶಂಕರ ಗೋವಿಂದ ಶೆಟ್ಟಿ.ಮಹಾಬಲೇಶ್ವರ ವೆಂಕಟೇಶ ಮಡಿವಾಳ ಇವರನ್ನ ಸನ್ಮಾನಿಸಲಾಯಿತು.ಉದ್ಯಮಿ ಸತ್ಯಾ ಜಾವಗಲ್.ವಿನಾಯಕ ನಾವಡ.ನಾಟಿ ವೈದ್ಯರಾದ ಹನ್ಮಂತ ಗೌಡ.ಸುದಾಕರ ತಾರಿ.ದಯಾನಂದ ಜಟ್ಟಿ ಅಂಬಿಗ.ಎಂ ಎನ್ ಹೆಗಡೆ.ಅಶೋಕ ಗೌಡ.ಕೇಶವ ಗೌಡ.ನರಸಿಂಹ ಹರಿಕಾಂತ ಗೌಡ.ಮೋಹನ ಗಣಪತಿ ನಾಯ್ಕ.ಗಣಪತಿ ಶಂಕರ ಅಂಬಿಗ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶ್ರೀ ಯಶೋದರ ನಾಯ್ಕ ಮಾತನಾಡಿ ಮುಂದಿನ ದಿನಗಳಲ್ಲಿಯೂ ನಿಸರ್ಗದ ತಾಣ ಅಘನಾಶಿನಿಯನ್ನ ಪ್ರವಾಸಿ ತಾಣವಾಗಿಸುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
೨ ದಿನಗಳ ಅಘನಾಶಿನಿ ಸಂಬ್ರಮದಲ್ಲಿ ರಂಗೋಲಿ ಸ್ಪರ್ಧೆ, ಸಂಗೀತ ಖುರ್ಚಿ.ಲಿಂಬು ಚಮಚ.ಮಡಿಕೆ ಒಡೆಯುವ ಸ್ಪರ್ದೆ.ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.