ಉತ್ತರಕನ್ನಡ : ರಾಜ್ಯದಲ್ಲಿ ಚುನಾವಣೆ ಕಾವು ಜೊರಾಗುತ್ತಿದೆ. ಕಾಂಗ್ರಸ್​​, ಬಿಜೆಪಿ, ಜೆಡಿಎಸ್​​​ ಪಕ್ಷಗಳು ಸಮಾವೇಶಗಳನ್ನ ಮಾಡಿ ಮತದಾರ ಪ್ರಭುವನ್ನ ಒಲಿಸಿ ಕೊಳ್ಳಲು ಪ್ರಯತ್ನ ಆರಂಭವಾಗಿದೆ.

ಅದರಲ್ಲೂ ಜೆಡಿಎಸ್ ಎಲ್ಲಾ ಪಕ್ಷಗಳಿಗಿಂತ ತುಸು ಮುಂದಿದ್ದು, ನಿನ್ನೆ ಬೃಹತ್​​​ ವಿಕಾಸ ಪರ್ವ ಸಮಾವೇಶವನ್ನ ಮಾಡಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಉತ್ತರಕನ್ನಡ ಜಿಲ್ಲೆ 6 ಕ್ಷೇತ್ರಗಳಿಗೂ ಮೊದಲ ಹಂತದ ಪಟ್ಟಿಯಲ್ಲಿ ಹೆಸರು ಘೋಷಣೆಯಾಗಿದ್ದು ಕಾರವಾರಕ್ಕೆ ಇತ್ತಿಚೇಗೆ ಜೆಡಿಎಸ್​​​​​ ಸೇರಿದ ಆನಂದ ಅಸ್ನೋಟಿಕರ್​​​, ಕುಮಟಾದಿಂದ ಪ್ರದೀಪ್​​​ ನಾಯ್ಕ್​​, ಭಟ್ಕಳದಿಂದ ಇನಾಯತ್​​​ವುಲ್ಲಾ, ಯಲ್ಲಾಪುರದಿಂದ ರವೀಂದ್ರ ನಾಯ್ಕ್​​, ಹಳಿಯಾಳಕ್ಕೆ ಕೆ.ಆರ್​​. ರಮೇಶ್​​, ಶಿರಸಿಯಿಂದ ​​ ನಿರೀಕ್ಷೆಯಂತೆ ಶಶಿಭೂಷಣ್​​​ ಹೆಗಡೆಯವರನ್ನು ಕಣಕ್ಕಳಿಸಲು ಹೆಸರನ್ನ ಅಧಿಕೃತ ಗೊಳಿಸಿದೆ.

RELATED ARTICLES  ಉತ್ತರಕನ್ನಡದಲ್ಲಿ ನಿನ್ನೆ 877 ಜನರಿಗೆ ಕೊರೋನಾ ಪಾಸಿಟಿವ್..!

ಇನ್ನು ಈ ಕದನ ಕಲಿಗಳು ಎಷ್ಟರ ಮಟ್ಟಿಗೆ ಕಾಂಗ್ರೆಸ್​​ ಮತ್ತು ಬಿಜೆಪಿಗೆ ಪೈಪೋಟಿ ನೀಡಿ ತಮ್ಮ ಹಿಡಿತವನ್ನ ಸಾಧಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

RELATED ARTICLES  ಬೆಂಕಿಗೆ ಆಹುತಿಯಾದ ಕಛೇರಿ : ಕಾಗದಪತ್ರಗಳು ಸುಟ್ಟು ಕರಕಲು